ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್ ಹಾಕಿ: ಇಂದು ಭಾರತಕ್ಕೆ ಕೊರಿಯಾ ಸವಾಲು

Asia Cup hockey: ಹಾಲಿ ಚಾಂಪಿಯನ್‌ ಆಗಿದರೂ ಕೊರಿಯಾ ಈ ಬಾರಿ ಹೇಳಿಕೊಳ್ಳುವಷ್ಟು ದೊಡ್ಡ ಪ್ರದರ್ಶನ ತೋರಿಲ್ಲ. ಬಿ ಗುಂಪಿನಲ್ಲಿ ಮಲೇಷ್ಯಾ ನಂತರ ಎರಡನೇ ಸ್ಥಾನ ಗಳಿಸಿತ್ತು. ಲೀಗ್ ಹಂತದಲ್ಲಿ ಮಲೇಷ್ಯಾ ಎದುರು ಆಘಾತಕಾರಿ 1–4 ಸೋಲನುಭವಿಸಿತ್ತು. ಹಾಗಂತ ಸವಾಲನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ.

ಏಷ್ಯಾ ಕಪ್ ಹಾಕಿ: ಇಂದು ಭಾರತಕ್ಕೆ ಕೊರಿಯಾ ಸವಾಲು

-

Abhilash BC Abhilash BC Sep 3, 2025 8:45 AM

ರಾಜಗೀರ್: ಹಾಕಿ ಏಷ್ಯಾ ಕಪ್(Asia Cup hockey) ಸೂಪರ್ ಫೋರ್ ಹಂತದ ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದೆ. ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಸೂಪರ್ ಫೋರ್ ಹಂತದಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ಎದುರು ಸೆಣಸಾಡಲಿದೆ. ‘ಎ’ ಗುಂಪಿನಲ್ಲಿ ಭಾರತ ತಂಡವು ಚೀನಾ ವಿರುದ್ಧ 4–3, ಜಪಾನ್ ವಿರುದ್ಧ 3–2 ಮತ್ತು ಕಜಾಕಸ್ತಾನ ವಿರುದ್ಧ 15–0 ಗೋಲುಗಳ ಜಯ ಪಡೆದು ಅಜೇಯ ಸಾಧನೆ ಪ್ರದರ್ಶಿಸಿತ್ತು. ಇದೇ ಪ್ರದರ್ಶನವನ್ನು ದಕ್ಷಿಣ ಕೊರಿಯಾ ಕೊರಿಯ ವಿರುದ್ಧವೂ ತೋರಿದರೆ ಗೆಲುವು ಖಚಿತ.

ಹಾಲಿ ಚಾಂಪಿಯನ್‌ ಆಗಿದರೂ ಕೊರಿಯಾ ಈ ಬಾರಿ ಹೇಳಿಕೊಳ್ಳುವಷ್ಟು ದೊಡ್ಡ ಪ್ರದರ್ಶನ ತೋರಿಲ್ಲ. ಬಿ ಗುಂಪಿನಲ್ಲಿ ಮಲೇಷ್ಯಾ ನಂತರ ಎರಡನೇ ಸ್ಥಾನ ಗಳಿಸಿತ್ತು. ಲೀಗ್ ಹಂತದಲ್ಲಿ ಮಲೇಷ್ಯಾ ಎದುರು ಆಘಾತಕಾರಿ 1–4 ಸೋಲನುಭವಿಸಿತ್ತು. ಹಾಗಂತ ಸವಾಲನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಸೂಪರ್ ಫೋರ್‌ನಲ್ಲಿ ತಂಡದ ಯೋಜನೆ ಬೇರೆಯೇ ಇರಬಹುದು. ಭಾರತ ಪರ ದಿಲ್‌ಪ್ರೀತ್ ಸಿಂಗ್ ಟೂರ್ನಿಯಲ್ಲಿ ಅಷ್ಟೇನೂ ಯಶಸ್ಸು ಕಂಡಿಲ್ಲ. ಅವರು ಲಯ ಕಂಡುಕೊಳ್ಳಬೇಕಾಗಿದೆ.

ಇದನ್ನೂ ಓದಿ Hockey Asia Cup 2025: ಜಪಾನ್‌ ವಿರುದ್ದ ಗೆದ್ದು ಸೂಪರ್‌ ಫೋರ್‌ಗೆ ಅರ್ಹತೆ ಪಡೆದ ಭಾರತ!

ದಿನದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು, ಚೀನಾ ತಂಡವನ್ನು ಎದುರಿಸಲಿದೆ. ಸೂಪರ್‌ ಫೋರ್ ಹಂತದಲ್ಲಿ ಎಲ್ಲ ತಂಡಗಳು ಮೂರು ಎದುರಾಳಿಗಳ ವಿರುದ್ಧ ಆಡಲಿವೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಭಾನುವಾರ ಫೈನಲ್‌ನಲ್ಲಿ ಎದುರಾಗಲಿವೆ.

ಭಾರತ ತಂಡ

ಗೋಲ್‌ಕೀಪರ್ಸ್: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ.

ಡಿಫೆಂಡರ್ಸ್: ಸುಮೀತ್‌, ಜರ್ಮನ್‌ಪ್ರೀತ್ ಸಿಂಗ್‌, ಸಂಜಯ್‌, ಹರ್ಮನ್‌ಪ್ರೀತ್‌ ಸಿಂಗ್ (ನಾಯಕ), ಅಮಿತ್ ರೋಹಿದಾಸ್ , ಜುಗರಾಜ್‌ ಸಿಂಗ್.

ಮಿಡ್‌ಫೀಲ್ಡರ್ಸ್: ರಾಜಿಂದರ್ ಸಿಂಗ್, ರಾಜ್‌ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಶಿಲಾನಂದ್ ಲಾಕ್ರ.

ಮೀಸಲು ಆಟಗಾರರು: ನೀಲಮ್ ಸಂಜೀಪ್ ಕ್ಸೆಸ್, ಸಿಲ್ವಂ ಕಾರ್ತಿ.