US Open: ಸೆಮಿಗೆ ಲಗ್ಗೆಯಿಟ್ಟ ಜೊಕೊವಿಕ್; ಅಲ್ಕರಾಜ್ ಎದುರಾಳಿ
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮಾರ್ಕೆಟಾ ವೊಂಡ್ರೌಸೋವಾ ಗಾಯದಿಂದಾಗಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹಿಂದೆ ಸರಿದ ಕಾರಣ ವಿಶ್ವದ ನಂ.1 ಆಟಗಾರ್ತಿ ಅರಿನಾ ಸಬಲೆಂಕಾ ವಾಕ್‌ಓವರ್ ಮೂಲಕ ಸೆಮಿಫೈನಲ್ ಪ್ರವೇಶಿಸಿದರು. ಸೆಮಿ ಫೈನಲ್ ಪಂದ್ಯದಲ್ಲಿ ಸಬಲೆಂಕಾ ವಿಶ್ವದ ಜೆಸ್ಸಿಕಾ ಪೆಗುಲಾ ಸವಾಲು ಎದುರಿಸಲಿದ್ದಾರೆ.

-

ನ್ಯೂಯಾರ್ಕ್: ಈ ಬಾರಿಯ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ ರೋಚಕ ಘಟ್ಟ ತಲುಪಿದೆ. ಓಪನ್ ಬೆನ್ನುನೋವನ್ನು ಮೀರಿನಿಂತಿರುವ ಅನುಭವಿ ನೊವಾಕ್ ಜೊಕೊವಿಕ್(Novak Djokovic) ಅವರು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ತನಗಿಂತ ಮೇಲಿನ ಶ್ರೇಯಾಂಕದ ಅಮೆರಿಕನ್ ಆಟಗಾರ ಟೇಲರ್ ಫ್ರಿಟ್ಜ್(Taylor Fritz) ಅವರನ್ನು 6-3, 7-5, 3-6, 6-4 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೆಮಿಯಲ್ಲಿ 2ನೇ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಜ್(Carlos Alcaraz) ಸವಾಲು ಎದುರಿಸಲಿದ್ದಾರೆ.
25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೊಗೆ ಇದನ್ನು ಸಾಧಿಸಲು ಇನ್ನೆರಡು ಹೆಜ್ಜೆ ದೂರದಲ್ಲಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೋಕೊ ಆರಂಭಿಕ ಎರಡು ಸೆಟ್‌ನಲ್ಲಿ ಗೆದ್ದು ಮುನ್ನಡೆ ಸಾಧಿಸಿದರು. ಆದರೆ ಮೂರನೇ ಸುತ್ತಿನಲ್ಲಿ ಫ್ರಿಟ್ಜ್ ಗೆದ್ದರು. ನಾಲ್ಕನೇ ಸೆಟ್‌ನಲ್ಲಿ ಆಕ್ರಮಣಕಾರಿ ಜೊಕೋ 6-4 ಅಂತರದಿಂದ ಗೆದ್ದು ಪಂದ್ಯವನ್ನು ಜಯಿಸಿದರು. ಮೈದಾನದಲ್ಲಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಈ ಗೆಲುವನ್ನು ಸಂಭ್ರಮಿಸಿದರು.
Novak Djokovic is dancing into the semifinals of the US Open. pic.twitter.com/SgyMP6y1kr
— US Open Tennis (@usopen) September 3, 2025
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮಾರ್ಕೆಟಾ ವೊಂಡ್ರೌಸೋವಾ ಗಾಯದಿಂದಾಗಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹಿಂದೆ ಸರಿದ ಕಾರಣ ವಿಶ್ವದ ನಂ.1 ಆಟಗಾರ್ತಿ ಅರಿನಾ ಸಬಲೆಂಕಾ ವಾಕ್‌ಓವರ್ ಮೂಲಕ ಸೆಮಿಫೈನಲ್ ಪ್ರವೇಶಿಸಿದರು. ಸೆಮಿ ಫೈನಲ್ ಪಂದ್ಯದಲ್ಲಿ ಸಬಲೆಂಕಾ ವಿಶ್ವದ ಜೆಸ್ಸಿಕಾ ಪೆಗುಲಾ ಸವಾಲು ಎದುರಿಸಲಿದ್ದಾರೆ. ಪೆಗುಲಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾರ್ಬೊರಾ ಕ್ರೆಜಿಕೋವಾ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿದ್ದರು.
ಇದನ್ನೂ ಓದಿ US Open: ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಕ್