ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AFG vs PAK: ಪಾಕ್‌ಗೆ ಸೋಲಿನ ರುಚಿ ತೋರಿಸಿದ ಆಫ್ಘಾನ್‌

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫಘಾನಿಸ್ತಾನಸೇದಿಕುಲ್ಲಾ ಅಟಲ್(64) ಮತ್ತು ಇಬ್ರಾಹಿಂ ಜದ್ರಾನ್(65) ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 169 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 9 ವಿಕೆಟ್‌ಗೆ 151 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಆಫ್ಘಾನ್‌ಗೆ ಈ ಗೆಲುವು ಏಷ್ಯಾ ಕಪ್‌ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಪಾಕ್‌ಗೆ ಸೋಲಿನ ರುಚಿ ತೋರಿಸಿದ ಆಫ್ಘಾನ್‌

-

Abhilash BC Abhilash BC Sep 3, 2025 9:31 AM

ಶಾರ್ಜಾ: ಏಷ್ಯಾಕಪ್‌ ಟಿ20 ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅಫಘಾನಿಸ್ತಾನ ತಂಡ ಬಲಿಷ್ಠ ಪಾಕಿಸ್ತಾನಕ್ಕೆ(AFG vs PAK) ಸೋಲಿನ ಆಘಾತವಿಕ್ಕಿದೆ. T20I ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಫ್ಘಾನ್‌ 18 ರನ್‌ ಅಂತರದಿಂದ ಗೆಲುವು ಸಾಧಿಸಿತು.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫಘಾನಿಸ್ತಾನಸೇದಿಕುಲ್ಲಾ ಅಟಲ್(64) ಮತ್ತು ಇಬ್ರಾಹಿಂ ಜದ್ರಾನ್(65) ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 169 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 9 ವಿಕೆಟ್‌ಗೆ 151 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಆಫ್ಘಾನ್‌ಗೆ ಈ ಗೆಲುವು ಏಷ್ಯಾ ಕಪ್‌ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಈ ಬಾರಿಯ ಏಷ್ಯಾಕಪ್‌ಗೆ ಬಾಬರ್‌ ಆಝಮ್‌, ಮೊಹಮ್ಮದ್‌ ರಿಝ್ವಾನ್‌ ಅವರಂಥ ಹಿರಿಯ ಆಟಗಾರರನ್ನು ಕೈ ಬಿಡಲಾಗಿದ್ದು, ಸಲ್ಮಾನ್‌ ಅಘಾ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ನಸೀಮ್ ಶಾ ಮತ್ತು ಶದಾಬ್ ಖಾನ್ ಅವರಂತಹ ಪ್ರಮುಖ ಆಟಗಾರರನ್ನು ಟಿ20ಐ ತಂಡದಿಂದ ಕೈಬಿಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ

ಸಲ್ಮಾನ್ ಅಲಿ ಅಘಾ (ನಾಯಕ), ಫಖಾರ್ ಝಮಾನ್, ಹಸನ್ ನವಾಜ್, ಸಾಹಿಬ್‌ಝಾದಾ ಫರ್ಹಾನ್, ಸ್ಯಾಮ್ ಆಯುಬ್, ಖುಷ್ದಿಲ್‌ ಶಾ, ಹುಸೇನ್ ತಲಾತ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ನವಾಜ್, ಮೊಹಮ್ಮದ್ ವಸಿಮ್ ಜೂನಿಯರ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ ಮತ್ತು ಸೂಫಿಯಾನ್ ಮುಕೀಮ್.

ಇದನ್ನೂ ಓದಿ Asia Cup 2025: ಬಿಸಿಲಿನ ತಾಪ ಹೆಚ್ಚಳ; ಏಷ್ಯಾಕಪ್‌ ಪಂದ್ಯಗಳ ಸಮಯದಲ್ಲಿ ಬದಲಾವಣೆ