Rahul Dravid: ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ರಾಹುಲ್ ದ್ರಾವಿಡ್ ಮುಖ್ಯಸ್ಥ?
ಹಾಲಿ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಐಪಿಎಲ್‌ನಲ್ಲಿ ಕೋಚಿಂಗ್ ನಡೆಸುವತ್ತ ಗಮನಹರಿಸಿದ್ದಾರೆ. ಹೀಗಾಗಿ ಲಕ್ಷಣ್ ಸ್ಥಾನಕ್ಕೆ ದ್ರಾವಿಡ್ ಅವರನ್ನು ನೇಮಕ ಮಾಡಿಕೊಳ್ಳಲು ಬಿಸಿಸಿಐ ಚರ್ಚೆ ನಡೆಸಿದೆ ಎನ್ನಲಾಗಿದೆ. ದ್ರಾವಿಡ್ ಅವರ ದಿಢೀರ್ ರಾಜನಾಮೆ ನೋಡುವಾಗ ಅವರು ಸಿಒಇಗೆ ಮುಖ್ಯಸ್ಥರಾಗುವುದು ಬಹುತೇಕ ಖಚಿತವಾದಂತಿದೆ.

-

ಬೆಂಗಳೂರು: ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್ ದ್ರಾವಿಡ್(Rahul Dravid) ಅವರು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ(ಸಿಒಇ) ಹೊಸ ಮುಖ್ಯಸ್ಥರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ ದ್ರಾವಿಡ್ ಅವರು 2019ರಿಂದ 2021ರ ವರೆಗೆ ಎರಡು ವರ್ಷಗಳ ಕಾಲ ಎನ್‌ಸಿಎ ಮುಖ್ಯಸ್ಥರಾಗಿದ್ದರು. ನಂತರ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆಗೇರಿದಾಗ, ವಿವಿಎಸ್ ಲಕ್ಷ್ಮಣ್ ಮುಖ್ಯಸ್ಥರಾಗಿದ್ದರು.
ಹಾಲಿ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಐಪಿಎಲ್‌ನಲ್ಲಿ ಕೋಚಿಂಗ್ ನಡೆಸುವತ್ತ ಗಮನಹರಿಸಿದ್ದಾರೆ. ಹೀಗಾಗಿ ಲಕ್ಷಣ್ ಸ್ಥಾನಕ್ಕೆ ದ್ರಾವಿಡ್ ಅವರನ್ನು ನೇಮಕ ಮಾಡಿಕೊಳ್ಳಲು ಬಿಸಿಸಿಐ ಚರ್ಚೆ ನಡೆಸಿದೆ ಎನ್ನಲಾಗಿದೆ. ದ್ರಾವಿಡ್ ಅವರ ದಿಢೀರ್ ರಾಜನಾಮೆ ನೋಡುವಾಗ ಅವರು ಸಿಒಇಗೆ ಮುಖ್ಯಸ್ಥರಾಗುವುದು ಬಹುತೇಕ ಖಚಿತವಾದಂತಿದೆ.
ಲಕ್ಷ್ಮಣ್ ಈ ಹಿಂದೆ 2014 ರಿಂ 2018ರ ತನಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷವೇ ಲಕ್ಷ್ಮಣ್ ಅವರು ಎನ್‌ಸಿಎ ಹುದ್ದೆ ತ್ಯಜಿಸಲು ನಿರ್ಧರಿಸಿದ್ದರು. ಆದರೆ ಬಿಸಿಸಿಐ ಒತ್ತಾಯದ ಮೇರೆಗೆ ಅವರು ಮುಂದುವರಿದಿದ್ದರು.
ಭಾರತ ಕ್ರಿಕೆಟ್‌ನ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದ ಮುಗಿದಿದ್ದ ವೇಳೆ ಹೊಸ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಆದರೆ ಲಕ್ಷ್ಮಣ್ ಅವರು ಈ ಆಫರ್ ತಿರಸ್ಕರಿಸಿದ್ದರು.