ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲ ಟಿ20; ನ್ಯೂಜಿಲೆಂಡ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ

New Zealand vs India 1st T20I: ನ್ಯೂಜಿಲೆಂಡ್‌ ನಾಯಕ ಸ್ಯಾಂಟ್ನರ್, ಪಿಚ್ ಹೊಸದಾಗಿರುವಂತೆ ಕಾಣುತ್ತಿದೆ. ದೊಡ್ಡ ಸರಣಿಗಾಗಿ ತಂಡದ ಹುಡುಗರು ತುಂಬಾ ಉತ್ಸುಕರಾಗಿದ್ದಾರೆ. ಭಾರತದ ವಿರುದ್ಧ ಆಡುವುದು ಖುಷಿಯ ವಿಷಯ. ನಮ್ಮ ತಂಡದಲ್ಲಿ ಆಟಗಾರರ ಆಯ್ಕೆಯ ವ್ಯಾಪ್ತಿ (ಡೆಪ್ತ್) ತುಂಬಾ ಚೆನ್ನಾಗಿದೆ ಎಂದರು.

ಮೊದಲ ಟಿ20; ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ

New Zealand vs India, 1st T20I -

Abhilash BC
Abhilash BC Oct 22, 2026 12:12 PM

ಕ್ರೈಸ್ಟ್‌ಚರ್ಚ್‌, ಅ.22: ನ್ಯೂಜಿಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ಭಾರತ ತಂಡ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಕೈಗೊಂಡಿದೆ. ಅನುಭವಿ ಹಾಗೂ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ಭಾರತದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಟಾಸ್‌ ಗೆದ್ದ ಬಳಿಕ ಮಾತನಾಡಿದ ಅಯ್ಯರ್‌, ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಪಂದ್ಯಗಳ ನಡುವೆ ಅಲ್ಪಾವಧಿ ಮಾತ್ರ ಇರುವುದರಿಂದ, ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡಬೇಕಿದೆ. ಎಲ್ಲರೂ ವೃತ್ತಿಪರರು. ಪರಿಸ್ಥಿತಿಗೆ ಹೊಂದಿಕೊಳ್ಳಲು ಕೆಲವರು ಸ್ವಲ್ಪ ಸಮಯ ತೆಗೆದುಕೊಂಡರೂ, ಒಟ್ಟಾರೆಯಾಗಿ ಪ್ರದರ್ಶನ ಚೆನ್ನಾಗಿತ್ತು. ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ಬೌಲಿಂಗ್ ವಿಷಯಕ್ಕೆ ಬಂದರೆ, ಇಲ್ಲಿ ಬೌಲಿಂಗ್ ಮಾಡುವುದು ಸುಲಭವಾಗಿರಲಿಲ್ಲ. ರೆಡ್ಡಿ ಮತ್ತು ಮಯಾಂಕ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು.

ಭಾರತಕ್ಕೆ ದೊಡ್ಡ ಹಿನ್ನಡೆ: ಐಪಿಎಲ್ 2027ರ ಮೊದಲು ಹಾರ್ದಿಕ್ ಪಾಂಡ್ಯ ಮರಳುವ ಸಾಧ್ಯತೆಯಿಲ್ಲ

ನ್ಯೂಜಿಲೆಂಡ್‌ ನಾಯಕ ಸ್ಯಾಂಟ್ನರ್, ಪಿಚ್ ಹೊಸದಾಗಿರುವಂತೆ ಕಾಣುತ್ತಿದೆ. ದೊಡ್ಡ ಸರಣಿಗಾಗಿ ತಂಡದ ಹುಡುಗರು ತುಂಬಾ ಉತ್ಸುಕರಾಗಿದ್ದಾರೆ. ಭಾರತದ ವಿರುದ್ಧ ಆಡುವುದು ಖುಷಿಯ ವಿಷಯ. ನಮ್ಮ ತಂಡದಲ್ಲಿ ಆಟಗಾರರ ಆಯ್ಕೆಯ ವ್ಯಾಪ್ತಿ (ಡೆಪ್ತ್) ತುಂಬಾ ಚೆನ್ನಾಗಿದೆ ಎಂದರು.



ಉಭಯ ಆಡುವ ಬಳಗ

ಭಾರತ: ಸಂಜು ಸ್ಯಾಮ್ಸನ್(ವಿಕೀ.), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ನ್ಯೂಜಿಲೆಂಡ್‌: ಫಿನ್ ಅಲೆನ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬೆವನ್ ಜಾಕೋಬ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.