Asia Cup 2025 final: ಅರಬ್ ರಾಷ್ಟ್ರ ಟೀಮ್ ಇಂಡಿಯಾಕ್ಕೆ ಅದೃಷ್ಟ!
ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20ವಿಶ್ವಕಪ್‌ಗೆ ತಂಡ ಸಂಯೋಜನೆ ಅಂತಿಮಗೊಳಿಸುವ ನಿಟ್ಟಿನಲ್ಲಿ ಫೈನಲ್ ಪಂದ್ಯ ಭಾರತಕ್ಕೆ ಮಹತ್ವದ ಟೂರ್ನಿಯಾಗಿದೆ. ಭಾರತ ಅಜೇಯವಾಗಿ ಫೈನಲ್ ತಲುಪಿದ್ದರೂ ಕೂಡ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಿಂದ ಕೂಡಿರಲಿಲ್ಲ.

-

ದುಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ(IND vs PAK) ನಡುವಣ ಪಂದ್ಯ ಮೊದಲಿನಿಂದಲೂ ಹೈ-ವೋಲ್ಟೇಜ್‌ನಿಂದ ಕೂಡಿರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ಮತ್ತು ಆಟಗಾರರ ನಡುವೆ ಉಂಟಾಗಿರುವ ಬಿಸಿಸಿಬಿಸಿ ಚಕಮಕಿಗಳು ಮತ್ತು ಪ್ರೇಕ್ಷಕರೂ ಅದಕ್ಕೆ ತುಪ್ಪ ಸುರಿದಿರುವುದು ವೈರತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಇತ್ತಂಡಗಳ ನಡುವೆ ಭಾನುವಾರ(ಸೆ.28) ನಡೆಯುವ ಏಷ್ಯಾಕಪ್ ಫೈನಲ್(Asia Cup 2025 final) ಪಂದ್ಯವೂ ಭಾರೀ ಕುತೂಹಲ ಕೆರಳಿಸಿದೆ.
ಭಾರತಕ್ಕೆ ಅದೃಷ್ಟ!
ಈ ಬಾರಿಯ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿರುವ ಭಾರತ ತಂಡಕ್ಕೆ ಏಷ್ಯಾಕಪ್‌ನಲ್ಲಿ ಯುಎಇ ಅದೃಷ್ಟದ ತಾಣವೆನಿಸಿದೆ. ಯಾಕೆಂದರೆ ಈ ಹಿಂದೆ 4 ಬಾರಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ಗಳಲ್ಲಿ 3ರಲ್ಲಿ(1984, 1995, 2018) ಭಾರತವೇ ಪ್ರಶಸ್ತಿ ಗೆದ್ದಿತ್ತು. ಈ ಲೆಕ್ಕಾಚಾರದಲ್ಲಿ ಈ ಬಾರಿಯೂ ಭಾರತಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದು ಅಭಿಮಾನಿಗಳ ನಂಬಿಕೆ.
ಪ್ರತಿಷ್ಠೆಯ ಪಂದ್ಯ
2023ರ ಏಕದಿನ ಮಾದರಿಯ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ಹಾಲಿ ಚಾಂಪಿಯನ್ ಎನಿಸಿದೆ. ಹೀಗಾಗಿ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳಲಿದೆಯಾ ಎಂದು ಕಾದು ನೋಡಬೇಕು. ಮತ್ತೊಂದೆಡೆ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ. ಹೀಗಾಗಿ ಇತ್ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯವೂ ಆಗಿದೆ.
ಇದನ್ನೂ ಓದಿ Asia Cup 2025 final: ನಾಳೆ ಭಾರತ vs ಪಾಕ್ ಫೈನಲ್; ಉಭಯ ತಂಡಗಳ ದಾಖಲೆ ಹೇಗಿದೆ?
ವಿಶ್ವಕಪ್‌ಗೆ ತಯಾರಿಗೆ ಸಹಕಾರಿ
ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20ವಿಶ್ವಕಪ್‌ಗೆ ತಂಡ ಸಂಯೋಜನೆ ಅಂತಿಮಗೊಳಿಸುವ ನಿಟ್ಟಿನಲ್ಲಿ ಫೈನಲ್ ಪಂದ್ಯ ಭಾರತಕ್ಕೆ ಮಹತ್ವದ ಟೂರ್ನಿಯಾಗಿದೆ. ಭಾರತ ಅಜೇಯವಾಗಿ ಫೈನಲ್ ತಲುಪಿದ್ದರೂ ಕೂಡ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಿಂದ ಕೂಡಿರಲಿಲ್ಲ. ಅಭಿಷೇಕ್ ಶರ್ಮ ಮತ್ತು ಕುಲ್‌ದೀಪ್ ಯಾದವ್ ಬಿಟ್ಟರೆ ಉಳಿದವರು ಫ್ಲಾಪ್ ಆಗಿದ್ದಾರೆ.