ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 2nd Test: 2ನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ

ಸಾಯಿ ಸುದರ್ಶನ್‌ ಭುಜದ ಗಾಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಸಾಯಿ ಅಲಭ್ಯರಾದರೆ ಅವರ ಸ್ಥಾನದಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ಅಭಿಮನ್ಯ ಈಶ್ವರನ್‌ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ. ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 30 ರನ್‌ ಮಾತ್ರ ಗಳಿಸಿದ್ದರು.

2ನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ

Profile Abhilash BC Jun 27, 2025 3:34 PM

ಬರ್ಮಿಂಗ್‌ಹ್ಯಾಮ್‌: ಲೀಡ್ಸ್‌ನಲ್ಲಿ ಎದುರಾದ ಆಘಾತಕಾರಿ ಸೋಲಿನಿಂದ ನಿರಾಸೆಗೊಂಡಿರುವ ಭಾರತ ತಂಡಕ್ಕೆ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಟೆಸ್ಟ್‌(IND vs ENG 2nd Test) ಪಂದ್ಯಕ್ಕೂ ಮುನ್ನ ಆತಂಕವೊಂದು ಶುರುವಾಗಿದೆ. ತಂಡದ ಯುವ ಬ್ಯಾಟರ್‌ ಸಾಯಿ ಸುದರ್ಶನ್‌(Sai Sudharsan) ಗಾಯಗೊಂಡಿದ್ದು ದ್ವಿತೀಯ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಸಾಯಿ ಸುದರ್ಶನ್‌ ಭುಜದ ಗಾಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಸಾಯಿ ಅಲಭ್ಯರಾದರೆ ಅವರ ಸ್ಥಾನದಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ಅಭಿಮನ್ಯ ಈಶ್ವರನ್‌ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ. ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 30 ರನ್‌ ಮಾತ್ರ ಗಳಿಸಿದ್ದರು.

ಇನ್ನೊಂದೆಡೆ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡುವುದು ಸೂಕ್ತ ಎನ್ನುವ ನಿರ್ಧಾರ ಕೈಗೊಳ್ಳಲಾಗಿದ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೊದಲ ಟೆಸ್ಟ್‌ನಲ್ಲಿ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಬೌಲಿಂಗ್‌ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ ಬೂಮ್ರಾ, ಎರಡೂ ಇನ್ನಿಂಗ್ಸ್‌ ಸೇರಿ ಒಟ್ಟು 44 ಓವರ್‌ಗಳನ್ನು ಎಸೆದರು. ಇದರಿಂದಾಗಿ ಅವರು ದಣಿದಿದ್ದಾರೆ ಎನ್ನಲಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿರುವುದಾಗಿ ತಂಡದ ಫಿಸಿಯೋ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ IND vs ENG: ಜೋಫ್ರಾ ಆರ್ಚರ್‌ ಆಗಮನ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ!

ಬುಮ್ರಾ ಅವರ ಅನುಪಸ್ಥಿತಿಯಲ್ಲಿ ತಂಡದ ವೇಗದ ಬೌಲಿಂಗ್‌ ಪಡೆಯನ್ನು ಮುನ್ನಡೆಸುವ ಹೊಣೆ ಮೊಹಮದ್‌ ಸಿರಾಜ್‌ ಹೆಗಲಿಗೆ ಬೀಳಲಿದೆ. ಬುಮ್ರಾ ಜಾಗವನ್ನು ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ತುಂಬುವ ಸಾಧ್ಯತೆ ಹೆಚ್ಚು. ಅರ್ಶ್‌ದೀಪ್‌ ಇತ್ತೀಚೆಗೆ ಇಂಗ್ಲೆಂಡ್‌ ಕೌಂಟಿಯಲ್ಲಿ ಆಡಿ ಅನುಭವ ಗಳಿಸಿದ್ದರು. ಭಾರತ ತಂಡ ಶುಕ್ರವಾರದಿಂದ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ.