IPL 2025: ಸೋಲಿಗೆ ಕಳಪೆ ಬ್ಯಾಟಿಂಗ್ ಕಾರಣ; ಅಜಿಂಕ್ಯ ರಹಾನೆ
ಸೋಲಿನ ಬಳಿಕ ಮಾತನಾಡಿದ ರಹಾನೆ, 'ಹೇಳಲು ಏನೂ ಇಲ್ಲ. ಪಂದ್ಯದಲ್ಲಿ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ನಾಯಕನಾಗಿ ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ನಮ್ಮ ಬ್ಯಾಟಿಂಗ್ ವಿಭಾಗ ಕಂಡ ವೈಫಲ್ಯ ಸೋಲಿಗೆ ಪ್ರಮುಖ ಕಾರಣ ಎಂದರು.


ಮುಲ್ಲನ್‌ಪುರ: ಪಂಜಾಬ್ ಕಿಂಗ್ಸ್(Punjab Kings) ವಿರುದ್ಧದ ಅಲ್ಪ ಮೊತ್ತವನ್ನು ಬೆನ್ನಟ್ಟಿ ಗೆಲ್ಲಲಾಗದ ಕೆಕೆಆರ್(PBKS vs KKR) ತಂಡದ ಸೋಲಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಪ್ರಮುಖ ಕಾರಣ ಎಂದು ತಂಡದ ನಾಯಕ ಅಜಿಂಕ್ಯ ರಹಾನೆ(Ajinkya Rahane) ದೂರಿದ್ದಾರೆ. ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ತಂಡ 111 ರನ್ ಬಾರಿಸಿದರೂ ಇದನ್ನು ಕೆಕೆಆರ್‌ಗೆ ಚೇಸ್ ಮಾಡಲು ಸಾಧ್ಯವಾಗದೆ 16 ರನ್ ಅಂತರದ ಸೋಲು ಕಂಡಿತ್ತು. ಸೋಲಿನೊಂದಿಗೆ ತಂಡದ ನೆಟ್ ರನ್‌ರೇಟ್ ಕೂಡ ಭಾರೀ ಕುಸಿತ ಕಂಡಿದೆ.
ಸೋಲಿನ ಬಳಿಕ ಮಾತನಾಡಿದ ರಹಾನೆ, 'ಹೇಳಲು ಏನೂ ಇಲ್ಲ. ಪಂದ್ಯದಲ್ಲಿ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ನಾಯಕನಾಗಿ ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ನಮ್ಮ ಬ್ಯಾಟಿಂಗ್ ವಿಭಾಗ ಕಂಡ ವೈಫಲ್ಯ ಸೋಲಿಗೆ ಪ್ರಮುಖ ಕಾರಣ. ಈ ಸೋಲಿಗೆ ನಾವು ನಮ್ಮ ಬೌಲರ್‌ಗಳಲ್ಲಿ ಕ್ಷಮೆ ಕೇಳುತ್ತೇವೆ. ಏಕೆಂದರೆ ಅವರು ಅದ್ಭುತ ಪ್ರದರ್ಶನದ ಮೂಲಕ ಎದುರಾಳಿ ತಂಡವನ್ನು ಕಟ್ಟಿಹಾಕಿದ್ದರು. ಆದರೆ ಬ್ಯಾಟರ್‌ಗಳು ಕೆಟ್ಟ ಹೊಡೆತಗಳಿಗೆ ಕೈ ಕಾಕಿ ಪಂದ್ಯ ಸೋಲಲು ಕಾರಣರಾದರು' ಎಂದು ರಹಾನೆ ಹೇಳಿದರು.
Ajinkya Rahane said, "I take all the blame for this loss. As a captain, I needed to bat more responsibly".
— Mufaddal Vohra (@mufaddal_vohra) April 15, 2025
- Rahane as captain! 👌👏 pic.twitter.com/Rv87UGn1MP
ಈ ಪಿಚ್‌ನಲ್ಲಿ ಆಡುವುದು ಕೂಡ ಷ್ಟು ಸುಲಭವಾಗಿರಲಿಲ್ಲ. ಆದರೂ 111 ಮೊತ್ತವನ್ನು ಬೆನ್ನಟ್ಟಬಹುದಾಗಿತ್ತು. ನಾವು ನಿಜವಾಗಿಯೂ ಕೆಟ್ಟದಾಗಿ ಬ್ಯಾಟಿಂಗ್ ಮಾಡಿದೆವು. ಪಂಜಾಬ್‌ನ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಅನ್ನು 111 ರನ್‌ಗಳಿಗೆ ಕಟ್ಟಿ ಹಾಕಿದ ಬೌಲರ್‌ಗಳ ಸಾಧನೆ ಮೆಚ್ಚಲೇ ಬೇಕು. ಈಗ ನನ್ನ ತಲೆಯಲ್ಲಿ ತುಂಬಾ ವಿಷಯಗಳು ಓಡಾಡುತ್ತಿವೆ. ಸೋಲಿನಿಂದ ನಾವು ಹತಾಶರಾಗಿಲ್ಲ. ಟೂರ್ನಮೆಂಟ್‌ನ ಅರ್ಧದಷ್ಟು ಪಂದ್ಯ ಇನ್ನೂ ಬಾಕಿ ಉಳಿದಿದೆ. ಈ ಸೋಲನ್ನು ಮರೆತು ಮುಂದಿನ ಪಂದ್ಯಕ್ಕೆ ಸಿದ್ಧರಾಗುವ ಕಡೆಗೆ ಚಿಂತಿಸಲಿದ್ದೇವೆ ಎಂದು ರಹಾನೆ ಹೇಳಿದರು.
IPL 2025: ಪಂಜಾಬ್-ಕೆಕೆಆರ್ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿ
ಎಂವೈಎಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್, ವೇಗಿ ಹರ್ಷಿತ್ ರಾಣಾ (25ಕ್ಕೆ 3) ಸಹಿತ ಕೆಕೆಆರ್ ಬೌಲರ್‌ಗಳ ಸಂಘಟಿತ ದಾಳಿಗೆ ತರಗೆಲೆಯಂತೆ ಉದುರಿ 15.3 ಓವರ್‌ಗಳಲ್ಲಿ 111 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಪ್ರತಿಯಾಗಿ 3 ವಿಕೆಟ್‌ಗೆ 62 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಕೆಕೆಆರ್, ಚಾಹಲ್ ದಾಳಿಗೆ ದಿಢೀರ್ ಕುಸಿತ ಕಂಡು 15.1 ಓವರ್‌ಗಳಲ್ಲಿ 95 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು.