IPL 2025: ಪಂಜಾಬ್-ಕೆಕೆಆರ್ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿ
PBKS vs KKR: ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 28ಕ್ಕೆ 4 ವಿಕೆಟ್ ಕೀಳುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು 4-ಪ್ಲಸ್ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು. ಒಟ್ಟು 8 ಬಾರಿ ಈ ಸಾಧನೆಗೈದಿದ್ದಾರೆ. ಇದು ಕೆಕೆಆರ್ ವಿರುದ್ಧ ಚಾಹಲ್ ಅವರ ಮೂರನೇ 4+ ವಿಕೆಟ್ ಗೊಂಚಲು ಆಗಿದೆ.


ಮುಲ್ಲನ್‌ಪುರ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್(PBKS vs KKR) ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದಿದ್ದ ಐಪಿಎಲ್(IPL 2025)ನ 31 ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್ ಕಿಂಗ್ಸ್ 111 ರನ್‌ಗಳ ಅಲ್ಪ ಮೊತ್ತವನ್ನು ರಕ್ಷಿಸಿಕೊಂಡು ರೋಚಕ 16 ರನ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಗಿದ್ದು, ದಾಖಲೆ ಪಟ್ಟಿಯ ವಿವರ ಹೀಗಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು 4-ಪ್ಲಸ್ ವಿಕೆಟ್
ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 28ಕ್ಕೆ 4 ವಿಕೆಟ್ ಕೀಳುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು 4-ಪ್ಲಸ್ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು. ಒಟ್ಟು 8 ಬಾರಿ ಈ ಸಾಧನೆಗೈದಿದ್ದಾರೆ. ಇದು ಕೆಕೆಆರ್ ವಿರುದ್ಧ ಚಾಹಲ್ ಅವರ ಮೂರನೇ 4+ ವಿಕೆಟ್ ಗೊಂಚಲು ಆಗಿದೆ.
ಯಜುವೇಂದ್ರ ಚಹಾಲ್- 8 ಬಾರಿ
ಸುನಿಲ್ ನರೈನ್- 8 ಬಾರಿ
ಲಸಿತ್ ಮಾಲಿಂಗ- 7 ಬಾರಿ
ಕಗಿಸೊ ರಬಾಡ- 6 ಬಾರಿ
ಅಮಿತ್ ಮಿಶ್ರಾ- 5 ಬಾರಿ
ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ವಿಕೆಟ್‌ಗಳು
ಕೆಕೆಆರ್ ಪರ ಕೇವಲ 14 ರನ್ ನೀಡಿ ಎರಡು ವಿಕೆಟ್ ಪಡೆದ ಸುನೀಲ್ ನರೈನ್ ಅವರು ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ಮೊದಲ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಭಾರತದ ಉಮೇಶ್ ಯಾದವ್ ಹೆಸರಿನಲ್ಲಿತ್ತು.
36 - ಸುನಿಲ್ ನರೈನ್, ಪಂಜಾಬ್ ವಿರುದ್ಧ
35 - ಉಮೇಶ್ ಯಾದವ್, ಪಂಜಾಬ್ ವಿರುದ್ಧ
33 - ಡ್ವೇನ್ ಬ್ರಾವೋ, ಮುಂಬೈ ವಿರುದ್ಧ
33 - ಮೋಹಿತ್ ಶರ್ಮಾ ವಿರುದ್ಧ, ಮುಂಬೈ ವಿರುದ್ಧ
33 - ಯುಜುವೇಂದ್ರ ಚಹಾಲ್, ಕೆಕೆಆರ್ ವಿರುದ್ಧ
32 - ಯುಜುವೇಂದ್ರ ಚಹಾಲ್, ಪಂಜಾಬ್ ವಿರುದ್ಧ
32 - ಭುವನೇಶ್ವರ್ ಕುಮಾರ್, ಕೆಕೆಆರ್ ವಿರುದ್ಧ
ಇದನ್ನೂ ಓದಿ IPL 2025: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್ ಕಿಂಗ್ಸ್
ಅತಿ ಕಡಿಮೆ ಸ್ಕೋರ್ ರಕ್ಷಿಸಿಕೊಂಡ ತಂಡ
111 ರನ್‌ಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ಪಂಜಾಬ್ ತಂಡೆ ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿಕೊಂಡ ದಾಖಲೆ ನಿರ್ಮಿಸಿತು. ಕಳೆದ ವರ್ಷ ಕೆಕೆಆರ್ ವಿರುದ್ಧವೇ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವನ್ನು ಬೆನ್ನತ್ತಿ ಗೆದ್ದ ದಾಖಲೆ ಬರೆದಿತ್ತು.
ಪಂಜಾಬ್-111 ರನ್, ಕೆಕೆಆರ್ ವಿರುದ್ಧ, ಮುಲ್ಲನ್‌ಪುರ 2025
ಚೆನ್ನೈ- 116/9, ಪಂಜಾಬ್ ವಿರುದ್ಧ, ಡರ್ಬನ್ 2009
ಹೈದರಾಬಾದ್-118, ಮುಂಬೈ ವಿರುದ್ಧ, ವಾಂಖೇಡೆ 2018
ಪಂಜಾಬ್- 119/8, ಮುಂಬೈ ವಿರುದ್ಧ ಡರ್ಬನ್, 2009
ಹೈದರಾಬಾದ್-119/8, ಪುಣೆ ವಾರಿಯರ್ಸ್ ವಿರುದ್ಧ, ಪುಣೆ, 2013