ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025; ಕ್ಯಾನ್ಸರ್‌ ಗೆದ್ದು ಐಪಿಎಲ್‌ ಕಾಮೆಂಟ್ರಿ ತಂಡ ಸೇರಿದ ಅಲನ್ ವಿಲ್ಕಿನ್ಸ್

Alan Wilkins: ಇಂಗ್ಲೆಂಡ್‌ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದ ವೇಳೆ ಗಾಯಗೊಂಡು ಕ್ರಿಕೆಟ್‌ ತ್ಯಜಿಸಿದ ವಿಲ್ಕಿನ್ಸ್ ಆ ಬಳಿಕ ಕಾಮೆಂಟರಿ ಕ್ಷೇತ್ರದಲ್ಲಿ ತೊಡಗಿಕೊಂಡರು. ಕ್ರಿಕೆಟ್‌ ಮಾತ್ರವಲ್ಲದೆ ರಗ್ಬಿ, ಟೆನಿಸ್ ಮತ್ತು ಗಾಲ್ಫ್ ಪಂದ್ಯಗಳ ವೀಕ್ಷಕ ವಿವರಣೆಯನ್ನೂ ಕೂಡ ವಿಲ್ಕಿನ್ಸ್ ಮಾಡುತ್ತಾರೆ.

ಕ್ಯಾನ್ಸರ್‌ ಗೆದ್ದು ಐಪಿಎಲ್‌ ಕಾಮೆಂಟ್ರಿ ತಂಡ ಸೇರಿದ ಅಲನ್ ವಿಲ್ಕಿನ್ಸ್

Profile Abhilash BC Apr 16, 2025 10:32 AM

ಮುಂಬಯಿ: ಜನಪ್ರಿಯ ಕ್ರಿಕೆಟ್ ನಿರೂಪಕ ಮತ್ತು ಮಾಜಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟಿಗ ಅಲನ್ ವಿಲ್ಕಿನ್ಸ್(Alan Wilkins) ಗಂಟಲು ಕ್ಯಾನ್ಸರ್‌ನಿಂದ ಗುಣಮುಖರಾಗಿ ಹಾಲಿ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಯ ಕಾಮೆಂಟರಿ(IPL 2025 Commentary Panel) ತಂಡವನ್ನು ಸೇರಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಐಪಿಎಲ್‌ ಆಡಲಿಳಿತ ಮಂಡಳಿ ತಿಳಿಸಿದೆ. ಗಂಟಲು ಕ್ಯಾನ್ಸರ್ ನಿಂದ ಸಂಪೂರ್ಣ ಮುಕ್ತಿ ಪಡೆದಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಲ್ಕಿನ್ಸ್, ಐಪಿಎಲ್‌ಗೆ ಮತ್ತೆ ಮರಳುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 71 ವರ್ಷದ ವಿಲ್ಕಿನ್ಸ್ ಈ ಹೊಸ ಅಧ್ಯಾಯವು ತಮ್ಮನ್ನು ಮತ್ತೆ ಯುವಕರನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದ ವೇಳೆ ಗಾಯಗೊಂಡು ಕ್ರಿಕೆಟ್‌ ತ್ಯಜಿಸಿದ ವಿಲ್ಕಿನ್ಸ್ ಆ ಬಳಿಕ ಕಾಮೆಂಟರಿ ಕ್ಷೇತ್ರದಲ್ಲಿ ತೊಡಗಿಕೊಂಡರು. ಕ್ರಿಕೆಟ್‌ ಮಾತ್ರವಲ್ಲದೆ ರಗ್ಬಿ, ಟೆನಿಸ್ ಮತ್ತು ಗಾಲ್ಫ್ ಪಂದ್ಯಗಳ ವೀಕ್ಷಕ ವಿವರಣೆಯನ್ನೂ ಕೂಡ ವಿಲ್ಕಿನ್ಸ್ ಮಾಡುತ್ತಾರೆ.



ಐಪಿಎಲ್‌ ಕಾಮೆಂಟ್ರಿ ಪ್ಯಾನೆಲಿಸ್ಟ್

ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ, ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಮೈಕೆಲ್ ಕ್ಲಾರ್ಕ್, ಸಂಜಯ್ ಮಂಜ್ರೇಕರ್, ಆರೋನ್ ಫಿಂಚ್, ಇಯಾನ್ ಬಿಷಪ್, ನಿಕ್ ನೈಟ್, ಸೈಮನ್ ಕ್ಯಾಟಿಚ್, ಡ್ಯಾನಿ ಮಾರಿಸನ್, ಕ್ರಿಸ್ ಮೋರಿಸ್, ಸ್ಯಾಮ್ಯುಯೆಲ್ ಬದ್ರಿ, ಕೇಟೀ ಮಾರ್ಟಿನ್, ಗ್ರೇಮ್ ಸ್ವಾನ್, ದೀಪ್ ದಾಸ್‌ಗುಪ್ತಾ, ಹರ್ಷ ಭೋಗ್ಲೆ, ಎಂಪುಮೆಲೆಲೊ ಎಂಬಾಂಗ್ವಾ, ಅಂಜುಮ್ ಚೋಪ್ರಾ, ಮುರಳಿ ಕಾರ್ತಿಕ್, ಡಬ್ಲ್ಯೂ.ವಿ. ರಾಮನ್, ನಟಾಲಿ ಜರ್ಮನೋಸ್, ಡರೇನ್ ಗಂಗಾ, ಮಾರ್ಕ್ ಹೊವಾರ್ಡ್, ರೋಹನ್ ಗವಾಸ್ಕರ್, ಹರ್ಭಜನ್ ಸಿಂಗ್, ಸಬಾ ಕರೀಮ್, ಅಂಬಟಿ ರಾಯುಡು,ವರುಣ್ ಆರೋನ್, ಮಿಥಾಲಿ ರಾಜ್, ಮೊಹಮ್ಮದ್ ಕೈಫ್, ಇಮ್ರಾನ್ ತಾಹಿರ್, ವಾಸಿಮ್ ಜಾಫರ್, ಗುರ್ಕೀರತ್ ಮಾನ್, ಉನ್ಮುಕ್ತ್ ಚಂದ್, ವಿವೇಕ್ ರಜ್ದಾನ್, ರಜತ್ ಭಾಟಿಯಾ, ರಾಮನ್ ಭಾನೋಟ್, ಪದ್ಮಜೀತ್ ಸೆಹ್ರಾವತ್, ಜತಿನ್ ಸಪ್ರು, ಪ್ರಗ್ಯಾನ್ ಓಜಾ, ಸುರೇಶ್ ರೈನಾ, ಪಾರ್ಥಿವ್ ಪಟೇಲ್.

ಇದನ್ನೂ ಓದಿ IPL 2025: ಸೋಲಿಗೆ ಕಳಪೆ ಬ್ಯಾಟಿಂಗ್‌ ಕಾರಣ; ಅಜಿಂಕ್ಯ ರಹಾನೆ

ಕೆಲ ಆಟಗಾರರನ್ನು ಗುರಿಯಾಗಿಸಿ ಟೀಕೆಗಳನ್ನು ಮಾಡಿದ ಕಾರಣದಿಂದ, ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಅವರನ್ನು ಈ ಬಾರಿಯ ಐಪಿಎಲ್‌ 18ರ ಆವೃತ್ತಿಯ ಕಾಮೆಂಟರಿ ಪ್ಯಾನೆಲ್​ನಿಂದ ಕೈಬಿಡಲಾಗಿದೆ.

ಇರ್ಫಾನ್ ಪಠಾಣ್ ಕೆಲವು ಭಾರತೀಯ ಆಟಗಾರರ ವಿರುದ್ಧ ಮಾತನಾಡಿದ್ದರಿಂದ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡಲಾಗಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಂಜಯ್ ಮಂಜ್ರೇಕರ್ ವಿರುದ್ಧ ಕೂಡ ಇಂತಹದ್ದೇ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಅವರನ್ನು ಕೆಲ ವರ್ಷಗಳ ಐಪಿಎಲ್ ಕಾಮೆಂಟರಿ ಪ್ಯಾನೆಲ್​ನಿಂದ ಹೊರಗಿಡಲಾಗಿತ್ತು.