IPL 2025: ಸತತ 5 ಪಂದ್ಯ ಸೋತ ಚೆನ್ನೈ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?
18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿ ಆರಂಭಕ್ಕೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಈ ನಿರೀಕ್ಷೆಗಳು ಇದೀಗ ಹುಸಿಯಾಗಿದೆ. ತಂಡ ಸೋಲಿನ ಮೇಲೆ ಸೋಲನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡು ಕೇವಲ ಎರಡು ಅಂಕ ಹೊಂದಿದೆ. ಆದರೂ ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ.


ಚೆನ್ನೈ: ಮೆಗಾ ಹರಾಜಿನಲ್ಲಿ ಅನುಭವಿ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದ್ದ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿ ಆರಂಭಕ್ಕೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಈ ನಿರೀಕ್ಷೆಗಳು ಇದೀಗ ಹುಸಿಯಾಗಿದೆ. ತಂಡ ಸೋಲಿನ ಮೇಲೆ ಸೋಲನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡು ಕೇವಲ ಎರಡು ಅಂಕ ಹೊಂದಿದೆ. ಆದರೂ ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಹಾಗಾದರೆ ಚೆನ್ನೈ ಪ್ಲೇಆಫ್‌ಗೆ ಹೇಗೆ ಅರ್ಹತೆ ಪಡೆಯಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಹೀಗಿದೆ ಲೆಕ್ಕಾಚಾರ
ಚೆನ್ನೈ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದು, 2 ಅಂಕಗಳನ್ನು ಮತ್ತು -1.554 ರ ನಿವ್ವಳ ರನ್ ರೇಟ್ ಹೊಂದಿದೆ. ಟೂರ್ನಿಯಲ್ಲಿ ತಂಡಕ್ಕೆ ಇನ್ನೂ 8 ಪಂದ್ಯಗಳು ಬಾಕಿ ಉಳಿದಿವೆ. ಈ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದರೆ, 16 ಅಂಕಗಳಿಸಬಹುದು. ಸಾಮಾನ್ಯವಾಗಿ, ಪ್ಲೇಆಫ್‌ಗೆ ಅರ್ಹತೆ ಪಡೆಯಲು ತಂಡಗಳಿಗೆ 16 ಅಂಕಗಳು ಸಾಕಾಗುತ್ತದೆ. ಕಳೆದ ಆವೃತ್ತಿಯಲ್ಲಿ 7 ಪಂದ್ಯಗಳನ್ನು ಸೋತು ಆ ಬಳಿಕದ ಎಲ್ಲ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್‌ಸಿಬಿ ತಂಡ ಎಲಿಮಿನೇಟರ್ ಪ್ರವೇಶಿಸಿತ್ತು. ಹೀಗಾಗಿ ಚೆನ್ನೈ ತಂಡದ ಪ್ಲೇಆಫ್ ಭರವಸೆ ಇನ್ನೂ ಜೀವಂತವಾಗಿದೆ.
ಇದನ್ನೂ ಓದಿ IPL 2025: 'ಸ್ವೀಕಾರಾರ್ಹವಲ್ಲ'-ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದ ರಜತ್ ಪಾಟಿದಾರ್!
ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ ಸುನೀಲ್ ನರೈನ್ ಅವರ ಸ್ಪಿನ್ ಬಲೆಗೆ ಬಿದ್ದು ಕೇವಲ 103 ರನ್ ಬಾರಿಸಿತು. ಈ ಸಣ್ಣ ಮೊತ್ತವನ್ನು ಕೆಕೆಆರ್ 10.1 ಓವರ್‌ಗಳಲ್ಲಿ 107 ರನ್ ಬಾರಿಸಿ 8 ವಿಕೆಟ್ ಅಂತರದ ಗೆಲುವು ಸಾಧಿಸಿತು. ಸೋಲು ಕಂಡ ಚೆನ್ನೈ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಸತತವಾಗಿ 5 ಪಂದ್ಯಗಳಲ್ಲಿ ಸೋಲನುಭವಿಸಿತು. ಇದು ಮಾತ್ರವಲ್ಲದೆ ತವರಿನ ಚೆಪಾಕ್ ಮೈದಾನದಲ್ಲಿ ಮೊದಲ ಬಾರಿಗೆ ಮೂರು ಪಂದ್ಯ ಸೋತ ಅನಪೇಕ್ಷಿತ ದಾಖಲೆ ಬರೆಯಿತು.
103 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ 59 ಎಸೆತ ಬಾಕಿ ಇರುವಂತೆಯೇ ಗೆಲುವು ತನ್ನದಾಗಿಸಿಕೊಂಡಿತು. ಇದು ಚೆನ್ನೈ ತಂಡಕ್ಕೆ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಎಡಸತಗಳ ಆಧಾರದಲ್ಲಿ ಎದುರಾದ ಅತಿ ದೊಡ್ಡ ಸೋಲಾಗಿದೆ.