IPL 2025 Points Table: ಭಾರೀ ಜಿಗಿತ ಕಂಡ ಮುಂಬೈ; ಆರ್‌ಸಿಬಿಗೆ ಒಂದು ಸ್ಥಾನ ನಷ್ಟ
SRH vs MI: ಮುಂಬೈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಸಂಭವಿಸಿತು. ಆರ್‌ಸಿಬಿ ಒಂದು ಸ್ಥಾನದ ಕುಸಿತ ಕಂಡು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ 5ನೇ ಸ್ಥಾನಕ್ಕೆ ಕುಸಿಯಿತು.


ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್(SRH vs MI) ವಿರುದ್ಧ 7 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಗೆಲುವಿನೊಂದಿಗೆ ಮೂರು ಸ್ಥಾನಗಳ ಜಿಗಿತದೊಂದಿಗೆ ಅಂಕಪಟ್ಟಿಯಲ್ಲಿ(IPL 2025 Points Table) ಮೂರನೇ ಸ್ಥಾನಕ್ಕೇರಿದೆ. ಸೋಲು ಕಂಡ ಹೈದರಾಬಾದ್ ಈ ಹಿಂದಿನಂತೆ 9ನೇ ಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್(RCB vs RR) ಮುಖಾಮುಖಿಯಾಗಲಿವೆ. ಈ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಮುಂಬೈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಸಂಭವಿಸಿತು. ಆರ್‌ಸಿಬಿ ಒಂದು ಸ್ಥಾನದ ಕುಸಿತ ಕಂಡು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ 5ನೇ ಸ್ಥಾನಕ್ಕೆ ಕುಸಿಯಿತು. ಅಗ್ರ ಎರಡು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನದಲ್ಲಿದೆ. ಆರ್‌ಸಿಬಿ ಇಂದು ರಾಜಸ್ಥಾನ್ ವಿರುದ್ಧ ಗೆದ್ದರೆ ಮತ್ತೆ ಮೂರನೇ ದ್ವಿತೀಯ ಸ್ಥಾನಕ್ಕೇರುವ ಅವಕಾಶವಿದೆ.
ಅತ್ಯಧಿಕ ರನ್ ಗಳಿಸಿದ ಆರೆಂಜ್ ಕ್ಯಾಪ್ ಮತ್ತು ಅತ್ಯಧಿಕ ವಿಕೆಟ್ ಕಿತ್ತ ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಸಾಯಿ ಸುದರ್ಶನ್ (417 ರನ್) ಆರೆಂಜ್ ಕ್ಯಾಪ್ ಪಡೆದಿದ್ದರೆ, ಪ್ರಸಿದ್ಧ್ ಕೃಷ್ಣ(16 ವಿಕೆಟ್) ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಅಂಕಪಟ್ಟಿ ಹೀಗಿದೆ
Points table of IPL 2025
— Tata IPL 2025 Commentary (@IPL2025Auction) April 23, 2025
Mumbai Indians surpassed RCB, PBKS & LSG in points table#SRHvsMI #RohitSharma𓃵 #MIvsSRH pic.twitter.com/sCBv1Olonp
ಇಂದು ಆರ್‌ಸಿಬಿ-ರಾಜಸ್ಥಾನ್ ಮುಖಾಮುಖಿ
ಮನೆಯಂಗಣದಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೊಂದು ತವರಿನ ಪಂದ್ಯವನ್ನಾಡಲು ಸಜ್ಜಾಗಿದೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ಎದುರು ಮರುಮುಖಾಮುಖಿ ಆಗಲಿದೆ. ರಾಜಸ್ಥಾನ್‌ಗೆ ಇದು ಸೇಡಿನ ಪಂದ್ಯವಾಗಿದೆ. ಮೊದಲ ಮುಖಾಮುಖಿಯಲ್ಲಿ ತವರಿನಲ್ಲಿ ಅನುಭವಿಸಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವುದು ರಿಯಾನ್ ಪರಾಗ್ ಬಳಗದ ಹಂಬಲವಾಗಿದೆ.