ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ಕೆಕೆಆರ್‌ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಸದ್ಯ ಆರೆಂಜ್‌ ಕ್ಯಾಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಇಶಾನ್‌ ಕಿಶನ್‌ ಬಳಿ ಇದೆ. ಅವರು ಒಂದು ಪಂದ್ಯವನ್ನಾಡಿ 106 ರನ್‌ ಬಾರಿಸಿದ್ದಾರೆ. ಇಂದು(ಗುರುವಾರ) ನಡೆಯುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಇಶಾನ್‌ ಮತ್ತೆ ಅಬ್ಬರಿಸಿದರೆ ಆರೆಂಜ್‌ ಕ್ಯಾಪ್‌ ಅವರ ಬಳಿಯೇ ಉಳಿಯಲಿದೆ.

ಕೆಕೆಆರ್‌ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

Profile Abhilash BC Mar 27, 2025 10:37 AM

ಬೆಂಗಳೂರು: ಬುಧವಾರ ನಡೆದಿದ್ದ ಐಪಿಎಲ್‌(IPL 2025)ನ 6ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌(RR vs KKR) ತಂಡ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಭರ್ಜರಿ 8 ವಿಕೆಟ್‌ ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ರಾಜಸ್ಥಾನ್‌ ಸತತ ಎರಡನೇ ಸೋಲು ಕಂಡಿತು. ಈ ಪಂದ್ಯದ ಬಳಿಕ ಅಂಕಪಟ್ಟಿ(IPL 2025 Points Table) ಹೇಗಿದೆ, ಆರೆಂಜ್‌, ಪರ್ಪಲ್‌ ಕ್ಯಾಪ್‌ ಯಾರ ಬಳಿ ಇದೆ ಎಂಬ ಮಾಹಿತಿ ಇಲ್ಲಿದೆ.

ಆರೆಂಜ್‌ ಕ್ಯಾಪ್‌

ಸದ್ಯ ಆರೆಂಜ್‌ ಕ್ಯಾಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಇಶಾನ್‌ ಕಿಶನ್‌ ಬಳಿ ಇದೆ. ಅವರು ಒಂದು ಪಂದ್ಯವನ್ನಾಡಿ 106 ರನ್‌ ಬಾರಿಸಿದ್ದಾರೆ. ಇಂದು(ಗುರುವಾರ) ನಡೆಯುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಇಶಾನ್‌ ಮತ್ತೆ ಅಬ್ಬರಿಸಿದರೆ ಆರೆಂಜ್‌ ಕ್ಯಾಪ್‌ ಅವರ ಬಳಿಯೇ ಉಳಿಯಲಿದೆ.

ಪರ್ಪಲ್‌ ಕ್ಯಾಪ್‌

ಅತ್ಯಧಿಕ ವಿಕೆಟ್‌ ಕಿತ್ತ ಸಾಧಕರಿಗೆ ನೀಡುವ ಪರ್ಪಲ್‌ ಕ್ಯಾಪ್‌ ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನೂರ್‌ ಅಹ್ಮದ್‌ ಬಳಿ ಇದೆ. ಅವರು 4 ವಿಕೆಟ್‌ ಕಿತ್ತಿದ್ದಾರೆ. ಇಂದಿನ ಪಂದ್ಯಲ್ಲಿ ಶಾರ್ದೂಲ್‌ ಠಾಕೂರ್‌ ಮೂರು ವಿಕೆಟ್‌ ಕಿತ್ತರೆ ಪರ್ಪಲ್‌ ಕ್ಯಾಪ್‌ ಅವರ ಪಾಲಾಗಲಿದೆ. ಅವರು ಸದ್ಯ 2 ವಿಕೆಟ್‌ ಕಿತ್ತಿದ್ದಾರೆ.

ಇದನ್ನೂ ಓದಿ KKR vs RR: ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ದಾಖಲೆ ಬರೆದ ಕ್ವಿಂಟನ್ ಡಿ ಕಾಕ್

6ಕ್ಕೇರಿದ ಕೆಕೆಆರ್‌

ರಾಜಸ್ಥಾನ್‌ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿತ್ತು. ಇದೀಗ ಗೆಲುವಿನೊಂದಿಗೆ 6ನೇ ಸ್ಥಾನಕ್ಕೇರಿದೆ. ರಾಜಸ್ಥಾನ್‌ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಅಗ್ರಸ್ಥಾನದಲ್ಲಿದೆ.