ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ರಘುವಂಶಿ ಹೊಸ ಆರೆಂಜ್ ಕ್ಯಾಪ್ ಲೀಡರ್, ಉನಾದ್ಕತ್‌ಗೆ ಪರ್ಪಲ್‌ ಕ್ಯಾಪ್‌

IPL 2026 Orange Cap holder: ಅತ್ಯಧಿಕ ರನ್‌ ಗಳಿಸುವ ಆಟಗಾರರಿಗೆ ನೀಡುವ ಆರೆಂಜ್‌ ಕ್ಯಾಪ್‌ ಸದ್ಯ ಅಂಗ್‌ಕ್ರಿಶ್ ರಘುವಂಶಿ ಪಾಲಾಗಿದೆ. ಅವರು ಹಾಲಿ ಆವೃತ್ತಿಯಲ್ಲಿ ಎರಡು ಪಂದ್ಯಗಳಿಂದ 103 ರನ್‌ ಗಳಿಸಿದ್ದಾರೆ. ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿಯೂ ಅವರು ಅರ್ಧಶತಕ ಬಾರಿಸಿದ್ದರು.

ರಘುವಂಶಿ ಹೊಸ ಆರೆಂಜ್ ಕ್ಯಾಪ್ ಲೀಡರ್, ಉನಾದ್ಕತ್‌ಗೆ ಪರ್ಪಲ್‌ ಕ್ಯಾಪ್‌

Angkrish Raghuvanshi and Jaydev Unadkat -

Abhilash BC
Abhilash BC Apr 3, 2026 8:14 AM

ಕೋಲ್ಕತಾ, ಎ.3: ಗುರುವಾರ (ಎಪ್ರಿಲ್ 2) ಕೋಲ್ಕತ್ತಾದಲ್ಲಿ ನಡೆದ ಐಪಿಎಲ್‌ (IPL 2026)ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(SRH vs KKR) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 65 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ತನ್ನ ಮೊದಲ ಅಂಕಗಳನ್ನು ಗಳಿಸಿತು. ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಅಂಗ್‌ಕ್ರಿಶ್ ರಘುವಂಶಿ (Angkrish Raghuvanshi) ಆರೆಂಜ್‌ ಕ್ಯಾಪ್‌ ರೇಸ್‌(IPL 2026 Orange Cap holder)ನಲ್ಲಿ ಅಗ್ರಸ್ಥಾನ ಪಡೆದರು.

ಅತ್ಯಧಿಕ ರನ್‌ ಗಳಿಸುವ ಆಟಗಾರರಿಗೆ ನೀಡುವ ಆರೆಂಜ್‌ ಕ್ಯಾಪ್‌ ಸದ್ಯ ಅಂಗ್‌ಕ್ರಿಶ್ ರಘುವಂಶಿ ಪಾಲಾಗಿದೆ. ಅವರು ಹಾಲಿ ಆವೃತ್ತಿಯಲ್ಲಿ ಎರಡು ಪಂದ್ಯಗಳಿಂದ 103 ರನ್‌ ಗಳಿಸಿದ್ದಾರೆ. ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿಯೂ ಅವರು ಅರ್ಧಶತಕ ಬಾರಿಸಿದ್ದರು. ಇಶಾನ್‌ ಕಿಶನ್‌(94) ಮತ್ತು ಕ್ಲಾಸೆನ್(‌84) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಇನ್ನು ಅತ್ಯಧಿಕ ವಿಕೆಟ್‌ ಟೇಕರ್‌ ಬೌಲರ್‌ಗಳಿಗೆ ನೀಡುವ ಪರ್ಪಲ್‌ ಕ್ಯಾಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಹಿರಿಯ ವೇಗಿ ಜೈದೇವ್‌ ಉನಾದ್ಕತ್‌ ಬಳಿ ಇದೆ. ಉನಾದ್ಕತ್‌ 4 ವಿಕೆಟ್‌ ಕಿತ್ತಿದ್ದಾರೆ. ಕೋಲ್ಕತಾದ ಬ್ಲೆಸಿಂಗ್‌ ಮುಜರಾಬಾನಿ ಕೂಡ 4 ವಿಕೆಟ್‌ ಕಿತ್ತರೂ ಅವರ ಬೌಲಿಂಗ್‌ ಎಕಾನಮಿ ಹೆಚ್ಚಾಗಿದೆ.

ಆರ್‌ಸಿಬಿಯ ಜಾಕೋಬ್ ಡಫಿ, ಡಿಸಿಯ ಟಿ. ನಟರಾಜನ್, ಜಿಟಿಯ ಪ್ರಸಿದ್ಧ್ ಕೃಷ್ಣ, ಡಿಸಿಯ ಲುಂಗಿ ಎನ್‌ಗಿಡಿ, ಪಿಬಿಕೆಎಸ್‌ನ ವಿಜಯಕುಮಾರ್ ವೈಶಾಕ್, ಎಂಐನ ಶಾರ್ದೂಲ್ ಠಾಕೂರ್, ಕೆಕೆಆರ್‌ನ ವೈಭವ್ ಅರೋರಾ ಮತ್ತು ಆರ್‌ಸಿಬಿಯ ರೊಮಾರಿಯೊ ಶೆಫರ್ಡ್ ತಲಾ 3 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆರೆಂಜ್‌ ಕ್ಯಾಪ್‌ ಪಟ್ಟಿ

ಅಂಗ್‌ಕ್ರಿಶ್ ರಘುವಂಶಿ- 103 ರನ್‌

ಇಶಾನ್ ಕಿಶನ್- 94 ರನ್‌

ಹೆನ್ರಿಕ್ ಕ್ಲಾಸೆನ್- 83 ರನ್‌

ರಯಾನ್ ರಿಕಲ್ಟನ್- 81 ರನ್‌

ರೋಹಿತ್ ಶರ್ಮಾ- 78 ರನ್‌

KKR vs SRH: ಸೋತರೂ ನಾಯಕತ್ವ ಸಮರ್ಥಿಸಿಕೊಂಡ ಅಜಿಂಕ್ಯ ರಹಾನೆ

ಪರ್ಪಲ್‌ ಕ್ಯಾಪ್‌ ರೇಸ್‌

ಜಯದೇವ್ ಉನಾದ್ಕತ್‌- 4 ವಿಕೆಟ್‌

ಆಶೀರ್ವಾದ ಮುಜರಬನಿ- 4 ವಿಕೆಟ್‌

ಜಾಕೋಬ್ ಡಫ್ಫಿ- 3 ವಿಕೆಟ್‌

ಪ್ರಸಿದ್ಧ್ ಕೃಷ್ಣ- 3 ವಿಕೆಟ್‌

ಟಿ ನಟರಾಜನ್- 3 ವಿಕೆಟ್‌

ಖಾತೆ ತೆರೆದ ಹೈದರಾಬಾದ್

‌ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 65 ರನ್‌ ಅಂತರದ ಗೆಲುವು ಸಾಧಿಸಿದ ಸನ್‌ರೈಸರ್ಸ್‌ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2026 Points Table) ಖಾತೆ ತೆರೆಯಿತು. ಸದ್ಯ 2 ಅಂಕದೊಂದಿಗೆ 6ನೇ ಸ್ಥಾನಿಯಾಗಿದೆ. ಸತತ ಎರಡು ಸೋಲು ಕಂಡ ಕೆಕೆಆರ್‌ 9ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ 10ನೇ ಸ್ಥಾನದಲ್ಲಿದೆ. ರಾಜಸ್ಥಾನ್‌ ಮತ್ತು ಆರ್‌ಸಿಬಿ ಮೊದಲ ಎರಡು ಸ್ಥಾನ ಪಡೆದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್‌, ಮುಂಬೈ ಇಂಡಿಯನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದೆ.