ಐಪಿಎಲ್ ಹರಾಜಿಗೂ ಮುನ್ನ ನೀವು ತಿಳುದುಕೊಳ್ಳಬೇಕಾದ ಮಹತ್ವದ ಸಂಗತಿಗಳು!
IPL 2026 Auction Preview: ಎಲ್ಲಾ ಫ್ರಾಂಚೈಸಿಗಳಲ್ಲಿ, 31 ವಿದೇಶಿ ಸ್ಥಾನಗಳು ಸೇರಿದಂತೆ 77 ಸ್ಥಾನಗಳನ್ನು ಭರ್ತಿ ಮಾಡಲು ಲಭ್ಯವಿದೆ. ಐಪಿಎಲ್ ನಿಯಮಗಳ ಪ್ರಕಾರ, ಫ್ರಾಂಚೈಸಿಗೆ ಗರಿಷ್ಠ ತಂಡದ ಗಾತ್ರ 25 ಆಟಗಾರರು ಮತ್ತು ಎಂಟು ವಿದೇಶಿ ಆಟಗಾರರ ಕ್ಯಾಪ್ ಇದೆ. ತಂಡಗಳು ಕನಿಷ್ಠ 18 ಆಟಗಾರರ ತಂಡವನ್ನು ಕಾಯ್ದುಕೊಳ್ಳಬೇಕು.
Ipl trophy (file photo) -
ಅಬುಧಾಬಿ, ಡಿ15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಮಿನಿ-ಹರಾಜು(IPL 2026) ಡಿಸೆಂಬರ್ 16 ರಂದು ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದೆ. ಇದು ಭಾರತದ ಹೊರಗೆ ನಡೆಯುತ್ತಿರುವ ಮೂರನೇ ಐಪಿಎಲ್ ಹರಾಜಾಗಲಿದೆ. ಖ್ಯಾತ ಹರಾಜುದಾರೆ ಮಲ್ಲಿಕಾ ಸಾಗರ್ ಅವರು ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ. ಮಂಗಳವಾರ ಯುಎಇ ಸಮಯ ಮಧ್ಯಾಹ್ನ 1:00 ಗಂಟೆಗೆ (ಭಾರತೀಯ ಸಮಯ ಮಧ್ಯಾಹ್ನ 2:30) ಹರಾಜು ಪ್ರಾರಂಭವಾಗಲಿದೆ.
ಹರಾಜಿನಲ್ಲಿರುವ 359 ಆಟಗಾರರ ಪೈಕಿ 244 ಭಾರತೀಯ ಆಟಗಾರರು ಮತ್ತು 115 ವಿದೇಶಿ ಕ್ರಿಕೆಟಿಗರು ಸೇರಿದ್ದಾರೆ. ಒಟ್ಟು 40 ಆಟಗಾರರು ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರೂ.ಗೆ ನಿಗದಿಪಡಿಸಿದ್ದಾರೆ. ಕುತೂಹಲಕಾರಿಯಾಗಿ, ಈ ಗಣ್ಯ ಗುಂಪಿನಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಸ್ಥಾನ ಪಡೆದಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ರವಿ ಬಿಷ್ಣೋಯ್.
IPL 2026 Retained Players: ತಂಡಗಳು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
ಎಲ್ಲಾ ಫ್ರಾಂಚೈಸಿಗಳಲ್ಲಿ, 31 ವಿದೇಶಿ ಸ್ಥಾನಗಳು ಸೇರಿದಂತೆ 77 ಸ್ಥಾನಗಳನ್ನು ಭರ್ತಿ ಮಾಡಲು ಲಭ್ಯವಿದೆ. ಐಪಿಎಲ್ ನಿಯಮಗಳ ಪ್ರಕಾರ, ಫ್ರಾಂಚೈಸಿಗೆ ಗರಿಷ್ಠ ತಂಡದ ಗಾತ್ರ 25 ಆಟಗಾರರು ಮತ್ತು ಎಂಟು ವಿದೇಶಿ ಆಟಗಾರರ ಕ್ಯಾಪ್ ಇದೆ. ತಂಡಗಳು ಕನಿಷ್ಠ 18 ಆಟಗಾರರ ತಂಡವನ್ನು ಕಾಯ್ದುಕೊಳ್ಳಬೇಕು.
ಐಪಿಎಲ್ ಹರಾಜಿಗೂ ಮೊದಲು ವಹಿವಾಟು ನಡೆದ ಆಟಗಾರರ ಪಟ್ಟಿ
| ಆಟಗಾರ | ಸೇರಿದ ತಂಡ | ಪಡೆದ ಮೊತ್ತ |
|---|---|---|
| ರವೀಂದ್ರ ಜಡೇಜಾ | ರಾಜಸ್ಥಾನ್ ರಾಯಲ್ಸ್ | 14 ಕೋಟಿ |
| ಸಂಜು ಸ್ಯಾಮ್ಸನ್ | ಚೆನ್ನೈ ಸೂಪರ್ ಕಿಂಗ್ಸ್ | 18 ಕೋಟಿ |
| ಮೊಹಮ್ಮದ್ ಶಮಿ | ಲಕ್ನೋ ಸೂಪರ್‌ಜೈಂಟ್ಸ್ | 10 ಕೋಟಿ |
| ನಿತೀಶ್ ರಾಣಾ | ಡೆಲ್ಲಿ ಕ್ಯಾಪಿಟಲ್ಸ್ | 4.2 ಕೋಟಿ |
| ಡೊನೊವನ್ ಫೆರೇರಾ | ರಾಜಸ್ಥಾನ್ ರಾಯಲ್ಸ್ | 1 ಕೋಟಿ |
| ಶೆರ್ಫೇನ್ ರುದರ್ಫೋರ್ಡ್ | ಮುಂಬೈ ಇಂಡಿಯನ್ಸ್ | 2.6 ಕೋಟಿ |
| ಸ್ಯಾಮ್ ಕರನ್ | ರಾಜಸ್ಥಾನ್ ರಾಯಲ್ಸ್ | 2.4 ಕೋಟಿ |
| ಶಾರ್ದೂಲ್ ಠಾಕೂರ್ | ಮುಂಬೈ ಇಂಡಿಯನ್ಸ್ | 2 ಕೋಟಿ |
| ಅರ್ಜುನ್ ತೆಂಡೂಲ್ಕರ್ | ಲಕ್ನೋ ಸೂಪರ್‌ಜೈಂಟ್ಸ್ | 30 ಲಕ್ಷ |
| ಮಯಾಂಕ್ ಮಾರ್ಕಂಡೆ | ಮುಂಬೈ ಇಂಡಿಯನ್ಸ್ | 30 ಲಕ್ಷ |
ಕ್ಯಾಪ್ಡ್ ಮತ್ತು ಅನ್‌ಕ್ಯಾಪ್ಡ್ ಆಟಗಾರರ ಸಂಪೂರ್ಣ ವಿವರ
ಕ್ಯಾಪ್ಡ್ ಇಂಡಿಯನ್ಸ್-16
ಕ್ಯಾಪ್ಡ್ ವಿದೇಶಿ-96
ಅನ್ ಕ್ಯಾಪ್ಡ್ ಇಂಡಿಯನ್-224
ಅನ್ ಕ್ಯಾಪ್ಡ್ ವಿದೇಶಿ-14
ಒಟ್ಟು-350
ಹರಾಜಿಗೆ ಮುನ್ನ ತಂಡಗಳ ಪರ್ಸ್ ಮೊತ್ತ
| ತಂಡ | ಬಾಕಿ ಮೊತ್ತ |
|---|---|
| ಕೋಲ್ಕತ್ತಾ ನೈಟ್ ರೈಡರ್ಸ್ | 64.3 ಕೋಟಿ |
| ಚೆನ್ನೈ ಸೂಪರ್ ಕಿಂಗ್ಸ್ | 43.4 ಕೋಟಿ |
| ಸನ್‌ರೈಸರ್ಸ್ ಹೈದರಾಬಾದ್ | 25.5 ಕೋಟಿ |
| ಲಕ್ನೋ ಸೂಪರ್ ಜೈಂಟ್ಸ್ | 22.95 ಕೋಟಿ |
| ಡೆಲ್ಲಿ ಕ್ಯಾಪಿಟಲ್ಸ್ | 21.8 ಕೋಟಿ |
| ರಾಯಲ್ ಚಾಲೆಂಜರ್ಸ್ ಬೆಂಗಳೂರು | 16.4 ಕೋಟಿ |
| ರಾಜಸ್ಥಾನ್ ರಾಯಲ್ಸ್ | 16.05 ಕೋಟಿ |
| ಗುಜರಾತ್ ಟೈಟಾನ್ಸ್ | 12.9 ಕೋಟಿ |
| ಪಂಜಾಬ್ ಕಿಂಗ್ಸ್ | 11.5 ಕೋಟಿ |
| ಮುಂಬೈ ಇಂಡಿಯನ್ಸ್ | 2.75 ಕೋಟಿ |