DC vs RR: ಡೆಲ್ಲಿ ಚಾಲೆಂಜ್ ಗೆದ್ದಿದ್ದೇ ರಾಜಸ್ಥಾನ್ ರಾಯಲ್ಸ್?
IPL 2026: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಬೌಲರ್‌ಗಳು ಇಲ್ಲಿ ಶಕ್ತಿಗಿಂತ ಯುಕ್ತಿಯ ಪ್ರದರ್ಶನ ತೋರಿದರಷ್ಟೇ ಯಶಸ್ಸು ಕಾಣಬಹುದು. ಇಲ್ಲಿನ ಔಟ್ ಫೀಲ್ಡ್ ತುಂಬಾ ಚಿಕ್ಕದಾಗಿರುವ ಕಾರಣ ಸಿಕ್ಸರ್ ಮತ್ತು ಬೌಂಡರಿಗೇನು ಅಡ್ಡಿಯಿಲ್ಲ.
Delhi Capitals vs Rajasthan Royals -
ನವದೆಹಲಿ, ಮೇ 16: 2026ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ 62ನೇ ಪಂದ್ಯದಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಮುಖಾಮುಖಿಯಾಗಲಿವೆ. ಪಂದ್ಯ ಭಾನುವಾರ(ಮೇ 17) ರಾತ್ರಿ ನಡೆಯಲಿದೆ.
ರಾಜಸ್ಥಾನ್ ತಂಡವು ಪ್ಲೇಆಫ್‌ಗೆ ಪ್ರವೇಶಿಸುವ ಆಸೆಯನ್ನು ಹೊಂದಿದೆ. ಸದ್ಯ 11 ಪಂದ್ಯಗಳಲ್ಲಿ 12 ಅಂಕ ಹೊಂದಿದೆ. ಡೆಲ್ಲಿ ಸೇರಿ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸದರೆ 18 ಅಂಕದೊಂದಿಗೆ ನೇರವಾಗಿ ಪ್ಲೇ-ಆಫ್ ಪ್ರವೇಶ ಪಡೆಯಲಿದೆ. ಆದರೆ ಡೆಲ್ಲಿಯ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ. ಇನ್ನುಳಿದ ಎರಡು ಪಂದ್ಯ ಗೆದ್ದರೂ ಪವಾಡವೊಂದು ಸಂಭವಿಸಿದರಷ್ಟೇ ತಂಡಕ್ಕೆ ಅವಕಾಶ ಸಿಗಬಹುದು.
ಎಂಟು ದಿನಗಳ ವಿರಾಮದಿಂದ ರಾಯಲ್ಸ್ ತಂಡವು ಮತ್ತೆ ಪಂದ್ಯಕ್ಕೆ ಮರಳುತ್ತಿದೆ. ಮೇ 9 ರಂದು ಜೈಪುರದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 77 ರನ್‌ಗಳಿಂದ ಸೋತಿತ್ತು. ಮೇ 1 ರಂದು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾದವು. ರಾಯಲ್ಸ್ ತಂಡವು ತನ್ನ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 225 ರನ್ ಗಳಿಸಿತು. ನಾಯಕ ರಿಯಾನ್ ಪರಾಗ್ 50 ಎಸೆತಗಳಲ್ಲಿ 90 ರನ್ ಗಳಿಸಿದರು ಮತ್ತು ಡೊನೊವನ್ ಫೆರೇರಾ ಡೆತ್ ಓವರ್‌ಗಳಲ್ಲಿ 14 ಎಸೆತಗಳಲ್ಲಿ 47 ರನ್ ಗಳಿಸಿದರು. ಆದರೆ ಡೆಲ್ಲಿ ತಂಡ ಮಿಚೆಲ್ ಸ್ಟಾರ್ಕ್, 40 ರನ್‌ಗೆ 3 ವಿಕೆಟ್ ಮತ್ತು ಕೆಎಲ್ ರಾಹುಲ್ 40 ಎಸೆತಗಳಲ್ಲಿ 75 ರನ್, ಪಾತುಮ್ ನಿಸ್ಸಂಕಾ 33 ಎಸೆತಗಳಲ್ಲಿ 62 ರನ್ ಗಳಿಸಿ ತಂಡ್ಕೆ ಏಳು ವಿಕೆಟ್‌ಗಳು ಅಂತರದ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ರಾಜಸ್ಥಾನ್‌ಗೆ ಇದು ಸೇಡಿನ ಪಂದ್ಯವೂ ಹೌದು.
ಮುಖಾಮುಖಿ
ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ಗರಿಷ್ಠ 20 ಪಂದ್ಯಗಳನ್ನು ಗೆದ್ದಿದೆ.
ಪಿಚ್ ರಿಪೋರ್ಟ್
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಬೌಲರ್‌ಗಳು ಇಲ್ಲಿ ಶಕ್ತಿಗಿಂತ ಯುಕ್ತಿಯ ಪ್ರದರ್ಶನ ತೋರಿದರಷ್ಟೇ ಯಶಸ್ಸು ಕಾಣಬಹುದು. ಇಲ್ಲಿನ ಔಟ್ ಫೀಲ್ಡ್ ತುಂಬಾ ಚಿಕ್ಕದಾಗಿರುವ ಕಾರಣ ಸಿಕ್ಸರ್ ಮತ್ತು ಬೌಂಡರಿಗೇನು ಅಡ್ಡಿಯಿಲ್ಲ. ಎಷ್ಟೇ ದೊಡ್ಡ ಮೊತ್ತವಾದರೂ ಇಲ್ಲಿ ಚೇಸಿಂಗ್ ನಡೆಸಬಹುದು. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಳ್ಳಬಹುದು.
PBKS vs RCB: ನಾಳಿನ ಆರ್‌ಸಿಬಿ-ಪಂಜಾಬ್ ಪಂದ್ಯದಲ್ಲಿ ಆಟಗಾರರ ಮುಂದಿರುವ ದಾಖಲೆಗಳಿವು
ಸಂಭಾವ್ಯ ತಂಡಗಳು
ದೆಹಲಿ ಕ್ಯಾಪಿಟಲ್ಸ್ (DC): ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ (ವಿ.ಕೀ.), ಸಾಹಿಲ್ ಪರಾಖ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಮಾಧವ್ ತಿವಾರಿ, ಮುಖೇಶ್ ಕುಮಾರ್, ಔಕಿಬ್ ನಬಿ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಟಾರ್ಕ್.
ಇಂಪ್ಯಾಕ್ಟ್ ಪ್ಲೇಯರ್: ಅಶುತೋಷ್ ಶರ್ಮಾ.
ರಾಜಸ್ಥಾನ್ ರಾಯಲ್ಸ್ (RR): ಯಶಸ್ವಿ ಜೈಸ್ವಾಲ್ (ನಾಯಕ), ಧ್ರುವ್ ಜುರೆಲ್ (WK), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಶುಭಂ ದುಬೆ, ದಾಸುನ್ ಶನಕ, ಜೋಫ್ರಾ ಆರ್ಚರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ.
ಇಂಪ್ಯಾಕ್ಟ್ ಆಟಗಾರ: ವೈಭವ್ ಸೂರ್ಯವಂಶಿ.