ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Transport workers strike: ಬಿಎಂಟಿಸಿ ನೌಕರರಿಗೆ ಗುಡ್‌ ನ್ಯೂಸ್‌; ಮುಷ್ಕರಕ್ಕೂ ಮೊದಲೇ 11 ತಿಂಗಳ ಹಿಂಬಾಕಿ ವೇತನ ಬಿಡುಗಡೆ

BMTC employees: 4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ನೀಡಲು ಇತ್ತೀಚೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಎಂಟಿಸಿ ನೌಕರರಿಗೆ 11 ತಿಂಗಳ ಹಿಂಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಬಿಎಂಟಿಸಿ ನೌಕರರಿಗೆ 11 ತಿಂಗಳ ಹಿಂಬಾಕಿ ವೇತನ ಬಿಡುಗಡೆ

ಬಿಎಂಟಿಸಿ ಬಸ್‌ (ಸಂಗ್ರಹ ಚಿತ್ರ) -

Prabhakara R
Prabhakara R May 16, 2026 9:47 PM

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮೇ 20 ರಿಂದ ಅನಿರ್ಧಿಷ್ಟಾವದಿ ಮುಷ್ಕರ (Transport workers strike) ನಡೆಸಲು ಸಾರಿಗೆ ನೌಕರರು ಸಿದ್ಧತೆ ನಡೆಸುತ್ತಿರುವ ನಡುವೆ ಬಿಎಂಟಿಸಿ ನೌಕರರಿಗೆ (BMTC employees) ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. 11 ತಿಂಗಳ ಹಿಂಬಾಕಿ ವೇತನವನ್ನು ಬಿಎಂಟಿಸಿ ನೌಕರರ ಖಾತೆಗೆ ಸಾರಿಗೆ ಇಲಾಖೆ ಜಮೆ ಮಾಡಿದೆ.

4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ನೀಡಲು ಇತ್ತೀಚೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಎಂಟಿಸಿ ನೌಕರರಿಗೆ 11 ತಿಂಗಳ ಹಿಂಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಆದೇಶದನ್ವಯ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಮತ್ತು ನೌಕರರಿಗೆ 2020ರ ವೇತನ ಪರಿಷ್ಕರಣೆಯ ಅನ್ವಯ, ದಿನಾಂಕ 01.01.2021 ರಿಂದ 28.02.2023 ರವರೆಗಿನ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ರೂ. 1,271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಲಾಗಿತ್ತು. ಮೊದಲ ಹಂತವಾಗಿ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿ/ನೌಕರರ ಹಿಂಬಾಕಿ ಮೊತ್ತಕ್ಕಾಗಿ 450 ರೂ. ಕೋಟಿ ಬಿಡುಗಡೆಗೊಳಿಸಲಾಗಿತ್ತು. ಸರ್ಕಾರದ ಈ ಹಂಚಿಕೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಒಟ್ಟು ರೂ. 137.24 ಕೋಟಿಗಳ ಅನುದಾನ ಮಂಜೂರಾಗಿದೆ.

ಉಳಿದ 3 ನಿಗಮಗಳ ನೌಕರರಿಗೂ ಹಿಂಬಾಕಿ ಹಣ ಪಾವತಿಯಾಗಿದ್ದು, ಇನ್ನೂ 15 ತಿಂಗಳ ಹಿಂಬಾಕಿಯನ್ನು ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದೆ.

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 4 ಸಾರಿಗೆ ನಿಗಮಗಳ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಈ ಮುಷ್ಕರಕ್ಕೆ ಕರೆ ನೀಡಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಲ್ಲಿ 26 ತಿಂಗಳ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸುವುದು, ವೇತನ ಪರಿಷ್ಕರಣೆ ಮತ್ತು ಸರ್ಕಾರದ ಹಿಂದಿನ ಆದೇಶದಲ್ಲಿ ತಿದ್ದುಪಡಿ ಮಾಡುವುದು ಸೇರಿವೆ. ಜಂಟಿ ಕ್ರಿಯಾ ಸಮಿತಿಯ ಪ್ರಕಾರ, ಬಾಕಿ ಹಣದ ಮೊತ್ತ ಸುಮಾರು 1,272 ಕೋಟಿ ಆಗಿದೆ.

2023ರ ಡಿಸೆಂಬರ್ 31ರಂದು ಚಾಲ್ತಿಯಲ್ಲಿದ್ದ ಮೂಲ ವೇತನದ ಮೇಲೆ ಶೇ.25ರಷ್ಟು ಹೆಚ್ಚಳ ನೀಡಬೇಕು ಎಂದು ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ. ಈ ವೇತನ ಪರಿಷ್ಕರಣೆ 2024ರ ಜನವರಿ 1ರಿಂದ ನಾಲ್ಕು ವರ್ಷಗಳ ಅವಧಿಗೆ ಅನ್ವಯವಾಗಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಲಂಚವಿಲ್ಲದೇ 'ಬಿ' ಖಾತಾದಿಂದ 'ಎ' ಖಾತಾ ಪರಿವರ್ತನೆ, ಮನೆ ಬಾಗಿಲಿಗೆ ಇ-ಖಾತೆ: ಡಿ.ಕೆ. ಶಿವಕುಮಾರ್

ಪ್ರಮುಖ ಬೇಡಿಕೆಗಳು

  • 26 ತಿಂಗಳ ಬಾಕಿ ಹಣ ₹1,272 ಕೋಟಿ ಒಂದೇ ಕಂತಿನಲ್ಲಿ ಪಾವತಿ.
  • ಮೂಲ ವೇತನದ ಮೇಲೆ ಶೇ.25ರಷ್ಟು ಹೆಚ್ಚಳ.
  • 2024ರ ಜನವರಿ 1ರಿಂದ ನಾಲ್ಕು ವರ್ಷಗಳ ಅವಧಿಗೆ ವೇತನ ಪರಿಷ್ಕರಣೆ ಜಾರಿ.
  • ಸರ್ಕಾರದ ಏಕಪಕ್ಷೀಯ ಆದೇಶ ತಿದ್ದುಪಡಿ.
  • ಸಾರಿಗೆ ನೌಕರರ ಇತರೆ ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆ.