ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KKR vs RCB: ಚೇಸಿಂಗ್‌ ವೇಳೆ ಕೊಹ್ಲಿ ಡೇಂಜರಸ್‌; ಕ್ಯಾಚ್‌ ಬಿಟ್ಟದ್ದು ಸೋಲಿಗೆ ಕಾರಣ: ರಹಾನೆ

IPL 2026: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 192 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ, 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಆರ್‌ಸಿಬಿ ವಿರುದ್ಧ ಕೆಕೆಆರ್ ಸೋಲಿಗೆ ಫೀಲ್ಡಿಂಗ್ ಕಾರಣ: ರಹಾನೆ

Ajinkya Rahane -

Abhilash BC
Abhilash BC May 14, 2026 11:09 AM

ರಾಯ್ಪುರ, ಮೇ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡದ ಸೋಲಿಗೆ ಫೀಲ್ಡಿಂಗ್‌ನಲ್ಲಿ ಆದ ದುಬಾರಿ ಲೋಪಗಳು ನಿರ್ಣಾಯಕ ಕಾರಣ ಎಂದು ತಂಡದ ನಾಯಕ ಅಜಿಂಕ್ಯ ರಹಾನೆ(Ajinkya Rahane) ಒಪ್ಪಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಕ್ಯಾಚ್‌ ಕೈಬಿಟ್ಟದ್ದು ದೊಡ್ಡ ಹಿನ್ನಡೆಯಾಯಿತು ಎಂದರು.

ಸ್ಪರ್ಧಾತ್ಮಕ ಮೊತ್ತ 192 ರನ್‌ಗಳಿಸಿದರೂ ಕೆಕೆಆರ್ ಆರು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ರಹಾನೆ, 'ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಪ್ರಮುಖ ಬ್ಯಾಟ್ಸ್‌ಮನ್‌ಗಳ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಂದ್ಯದ ಮಹತ್ವದ ತಿರುವು. ಇದರ ಲಾಭವೆತ್ತಿದ್ದ ಕೊಹ್ಲಿ ಅಜೇಯ 105 ರನ್ ಗಳಿಸಿದರು. ಕೊಹ್ಲಿ ಗೆಲುವಿಗೆ ನಿಜವಾಗಿಯೂ ಅರ್ಹರು ಎಂದು ರಹಾನೆ ಹೇಳಿದರು. ಪಂದ್ಯದ 9ನೇ ಓವರ್​ನಲ್ಲಿ ರೋವ್​ಮನ್ ಪೊವೆಲ್ ವಿರಾಟ್ ಕೊಹ್ಲಿಯ ಕ್ಯಾಚ್ ಕೈಚೆಲ್ಲಿದ್ದರು. ಈ ವೇಳೆ ಕೊಹ್ಲಿ 21 ರನ್​ ಮಾತ್ರ ಗಳಿಸಿದ್ದರು.

"ಹೌದು, ನನ್ನ ಪ್ರಕಾರ, ವಿರಾಟ್, ಒಟ್ಟು ಮೊತ್ತವನ್ನು ಬೆನ್ನಟ್ಟುವಾಗ ಅವರು ಅಪಾಯಕಾರಿ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಹೇಗಾದರೂ, ಅವರು ಅಪಾಯಕಾರಿ ಆಟಗಾರ. ದೇವದತ್ ಪಡಿಕ್ಕಲ್ ಕೂಡ ಉತ್ತಮ ಜತೆಯಾಟ ನಡೆಸಿದರು" ಎಂದರು.



ಫಲಿತಾಂಶ ಕೆಕೆಆರ್ ತಂಡದ ರೀತಿಯಲ್ಲಿ ಹೋಗದಿದ್ದರೂ, ಯುವ ವೇಗಿ ಕಾರ್ತಿಕ್ ತ್ಯಾಗಿ ಬೌಲಿಂಗ್‌ ಪ್ರದರ್ಶನಕ್ಕೆ ರಹಾನೆ ಮೆಚ್ಚುಗೆ ಸೂಚಿಸಿದರು. ತ್ಯಾಗಿ ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ಇಷ್ಟವಾದದ್ದು ಅವರ ಸ್ಪಷ್ಟ ಮನಸ್ಥಿತಿ ಮತ್ತು ಬೌಲಿಂಗ್ ಮಾಡುವಾಗ ಅವರು ಏನು ಕಾರ್ಯಗತಗೊಳಿಸಲು ಬಯಸುತ್ತಾರೆ ಎಂಬುದು. ಅದು ಉತ್ತಮ ಸಂಕೇತವಾಗಿದೆ ”ಎಂದು ರಹಾನೆ ಹೇಳಿದರು.

ಮನೀಶ್ ಪಾಂಡೆಯ ಅದ್ಭುತ ಕ್ಯಾಚ್‌ಗೆ ಮನಸೋತ ವಿರಾಟ್‌ ಕೊಹ್ಲಿ; ಮೈದಾನದಲ್ಲೇ ಮೆಚ್ಚುಗೆ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 192 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ, 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ವಿರಾಟ್ 60 ಎಸೆತಗಳಲ್ಲಿ 105 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಮತ್ತು 3 ಸಿಕ್ಸರ್‌ ಇದ್ದವು. ದೇವದತ್ತ ಪಡಿಕ್ಕಲ್ (37) ಕೂಡ ನೆರವಾದರು. ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ ಜತೆ 92 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು

ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 192 (ಕ್ಯಾಮರಾನ್ ಗ್ರೀನ್ 32, ಅಂಗಕ್ರಿಷ್ ರಘುವಂಶಿ 71, ರಿಂಕು ಸಿಂಗ್ ಔಟಾಗದೇ 49, ಭುವನೇಶ್ವರ್ ಕುಮಾರ್ 12ಕ್ಕೆ1, ಜೋಶ್ ಹೇಝಲ್‌ವುಡ್ 25ಕ್ಕೆ1, ರಸಿಕ್ ಸಲಾಮ್ 28ಕ್ಕೆ1). ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 19.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 194 (ವಿರಾಟ್ ಕೊಹ್ಲಿ ಅಜೇಯ 105, ದೇವದತ್ತ ಪಡಿಕ್ಕಲ್ 39, ರಜತ್ ಪಾಟೀದಾರ್ 11, ಕಾರ್ತಿಕ್ ತ್ಯಾಗಿ 32ಕ್ಕೆ3, ಸುನಿಲ್ ನಾರಾಯಣ್ 31ಕ್ಕೆ1).