ಪಂದ್ಯ ಸೋತರೂ ನಾಯಕನಾಗಿ ವಿಶೇಷ ದಾಖಲೆ ಬರೆದ ಇಶಾನ್ ಕಿಶನ್
Ishan Kishan: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ತಂಡ ನಾಯಕ ಇಶಾನ್ ಕಿಶನ್ ಅವರ ಅರ್ಧಶತಕದ ಬಲದಿಂದ 20 ಓವರಲ್ಲಿ 9 ವಿಕೆಟ್‌ಗೆ 201 ರನ್ ಗಳಿಸಿತು. ಈ ಸವಾಲಿನ ಮೊತ್ತವನ್ನು ಆರ್‌ಸಿಬಿ ಕೇವಲ 15.4 ಓವರಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿ ಸುಲಭವಾದ ಗೆಲುವು ತನ್ನದಾಗಿಸಿಕೊಂಡಿತು.
Ishan Kishan in action for SRH vs RCB in IPL 2026 -
ಬೆಂಗಳೂರು, ಮಾ.29: ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ(RCB vs SRH) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್‌ಗಳ ಸೋಲು ಕಂಡರೂ, ತಂಡದ ನಾಯಕ ಇಶಾನ್ ಕಿಶನ್(Ishan Kishan) ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಇಶಾನ್ ಕಿಶನ್ ಟಾಸ್‌ಗೆ ಆಗಮಿಸುತ್ತಿದ್ದಂತೆ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸಿದ ಭಾರತದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ, ಅವರು ಫ್ರಾಂಚೈಸಿಯನ್ನು ಮುನ್ನಡೆಸುವ ಎರಡನೇ ಕಿರಿಯ ನಾಯಕ ಎನಿಸಿದರು. ಕೇನ್ ವಿಲಿಯಮ್ಸನ್( ( 27 ವರ್ಷ 244 ದಿನ) ) ಹೈದರಾಬಾದ್ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ತಂಡ ನಾಯಕ ಇಶಾನ್ ಕಿಶನ್ ಅವರ ಅರ್ಧಶತಕದ ಬಲದಿಂದ 20 ಓವರಲ್ಲಿ 9 ವಿಕೆಟ್‌ಗೆ 201 ರನ್ ಗಳಿಸಿತು. ಈ ಸವಾಲಿನ ಮೊತ್ತವನ್ನು ಆರ್‌ಸಿಬಿ ಕೇವಲ 15.4 ಓವರಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿ ಸುಲಭವಾದ ಗೆಲುವು ತನ್ನದಾಗಿಸಿಕೊಂಡಿತು.
27 ಎಸೆತದಲ್ಲಿ ಅರ್ಧಶತಕ ಪೂರೈಸಿದ ಕಿಶನ್ 38 ಎಸೆತದಲ್ಲಿ 8 ಬೌಂಡರಿ, 5 ಸಿಕ್ಸರ್‌ನೊಂದಿಗೆ 80 ರನ್ ಸಿಡಿಸಿದರು. ಕೊನೆಯಲ್ಲಿ ಅನಿಕೇತ್ ವರ್ಮಾ 18 ಎಸೆತದಲ್ಲಿ 43 ರನ್ ಚಚ್ಚಿ, ತಂಡದ ಮೊತ್ತವನ್ನು 200 ರನ್ ದಾಟಿಸಿದರು. ಮಾತ್ರವಲ್ಲದೆ ಸ್ಪೋಟಕ ಇನಿಂಗ್ಸ್‌ನ ಮೂಲಕ ಇಶಾನ್ ಕಿಶನ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದರು. ಅವರು ಈ ದಾಖಲೆ ಬರೆಯಲು ಒಟ್ಟು 120 ಪಂದ್ಯಗಳ 113 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇವರು ಈ ಸಾಧನೆಯನ್ನು ಮಾಡಲು 2,180 ಎಸೆತಗಳ್ನು ಆಡಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 3000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
RCB vs SRH: ಅರ್ಧಶತಕ ಬಾರಿಸಿ 3000 ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದ ಇಶಾನ್ ಕಿಶನ್!
ಆರ್‌ಸಿಬಿ ಪರ ಚೇಸಿಂಗ್ ವೇಳೆ ಇಂಪ್ಯಾಕ್ಟ್ ಆಟಗಾರ ದೇವದತ್ ಪಡಿಕ್ಕಲ್ ಕೇವಲ 21 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಒಟ್ಟಾರೆ 26 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 61 ರನ್ ಗಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ 38 ಎಸೆತದಲ್ಲಿ 5 ಬೌಂಡರಿ, 5 ಸಿಕ್ಸರ್‌ನೊಂದಿಗೆ 69 ರನ್ ಗಳಿಸಿ ಅಜೇಯರಾಗಿ ಉಳಿದರು.