T20 World Cup 2026: ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆದ ಇಟಲಿ
T20 World Cup: ಸದ್ಯ ಟಿ 20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳೆಂದರೆ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್, ಇಟಲಿ, ನೆದರ್ಲೆಂಡ್ಸ್ .


ದಿ ಹೇಗ್, ನೆದರ್ಲೆಂಡ್ಸ್: ಇಟಲಿ ಕ್ರಿಕೆಟ್(Italy) ತಂಡವು ಇದೇ ಮೊದಲ ಸಲ ಟಿ20 ವಿಶ್ವಕಪ್(T20 World Cup 2026) ಟೂರ್ನಿಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಯುರೋಪ್ ವಲಯ ಕ್ವಾಲಿಫಿಕೇಶನ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್(italy vs scotland) ವಿರುದ್ಧ 9 ವಿಕೆಟ್ ಅಂತರದ ಸೋಲು ಕಂಡರೂ ರನ್ ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡಿತು. ಮುಂದಿನ ವರ್ಷ(2026) ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ. ಇದು ಇಟಲಿ ತಂಡಕ್ಕೆ ಮೊದಲ ಐಸಿಸಿ ಟೂರ್ನಿಯಾಗಿದೆ. ಫುಟ್ಬಾಲ್ ನೆಚ್ಚಿಕೊಂಡಿರುವ ಈ ದೇಶದಲ್ಲಿ ಇದೀಗ ಕ್ರಿಕೆಟ್ ಪ್ರಗತಿ ಕಾಣಲಾರಂಭಿಸಿದೆ.
ಶುಕ್ರವಾರ ತಡ ರಾತ್ರಿ ನಡೆದಿದ್ದ ಕೊನೆಯ ಯುರೋಪ್ ಪ್ರಾದೇಶಿಕ ಫೈನಲ್ ಅರ್ಹತಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಟಲಿ ನಿಗದಿತ 20 ಒವರ್‌ಗಳಲ್ಲಿ 7 ವಿಕೆಟ್‌ಗೆ 134 ರನ್ ಗಳಿಸಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 16.2 ಓವರ್‌ಗಳಲ್ಲಿಒಂದು ವಿಕೆಟ್ ನಷ್ಟಕ್ಕೆ 135 ರನ್ ಬಾರಿಸಿ ಅಗ್ರಸ್ಥಾನಿಯಾಗಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಿತು. ಇಟಲಿ ಮತ್ತು ಜೆರ್ಸಿ ತಂಡಕ್ಕೆ ತಲಾ 5 ಅಂಕ ಹೊಂದಿದ್ದರೂ ಕೂಡ ರನ್ ರೇಟ್ ಆಧಾರದಲ್ಲಿ ಮುಂದಿದ್ದ ಕಾರಣ ಇಟಲಿಗೆ ಅದೃಷ್ಟ ಒಲಿಯಿತು.
2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ಗೆ ಇದುವರೆಗೆ 15 ತಂಡಗಳು ಅರ್ಹತೆ ಪಡೆದಿವೆ. ಏಷ್ಯಾ ಇಎಪಿ ಅರ್ಹತಾ ಪಂದ್ಯದಲ್ಲಿ ಇನ್ನೂ ಮೂರು ತಂಡಗಳು ಸ್ಪರ್ಧೆಯಿಂದ ಅರ್ಹತೆ ಪಡೆಯಲಿದ್ದು, ಆಫ್ರಿಕಾ ಅರ್ಹತಾ ಪಂದ್ಯದಲ್ಲಿ ಇನ್ನೂ ಎರಡು ತಂಡಗಳು ಅರ್ಹತೆ ಪಡೆಯಲಿವೆ.
ಇದನ್ನೂ ಓದಿ IND vs ENG: 3 ವಿಕೆಟ್ ಕಳೆದುಕೊಂಡು ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆ!
ಸದ್ಯ ಟಿ 20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳೆಂದರೆ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್, ಇಟಲಿ, ನೆದರ್ಲೆಂಡ್ಸ್ .