ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿ20 ಸರಣಿಯಿಂದ ದಿಢೀರ್‌ ಹಿಂದೆ ಸರಿದು ಮುಂಬೈಗೆ ಪ್ರಯಾಣಿಸಿದ ಜಸ್‌ಪ್ರೀತ್‌ ಬುಮ್ರಾ

Jasprit Bumrah: "ಜಸ್‌ಪ್ರೀತ್‌ ಬುಮ್ರಾ ವೈಯಕ್ತಿಕ ಕಾರಣಗಳಿಂದ ಮನೆಗೆ ಮರಳಿದ್ದಾರೆ ಮತ್ತು ಪಂದ್ಯಕ್ಕೆ ಅಲಭ್ಯರಾಗಿರುತ್ತಾರೆ. ಉಳಿದ ಪಂದ್ಯಗಳಿಗೆ ಅವರು ತಂಡವನ್ನು ಸೇರುವ ಬಗ್ಗೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡಲಾಗುವುದು" ಎಂದು ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ.

ದಿಢೀರ್‌ ಮುಂಬೈಗೆ ಪ್ರಯಾಣಿಸಿದ ಬುಮ್ರಾ; ಮುಂದಿನ ಟಿ20ಗೆ ಅನುಮಾನ

Jasprit Bumrah -

Abhilash BC
Abhilash BC Dec 14, 2025 8:16 PM

ಧರ್ಮಶಾಲಾ, ಡಿ. 14: ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ(India vs South Africa 3rd T20I) ನಡುವಿನ ಮೂರನೇ ಟಿ20 ಪಂದ್ಯಕ್ಕೆ ಭಾರತ ಎರಡು ಬದಲಾವಣೆಯೊಂದಿಗೆ ಆಡಲಿಳಿಯಿತು. ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್(Axar Patel) ಲಭ್ಯವಿರಲಿಲ್ಲ.

ಟಾಸ್ ಸಮಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ವೈಯಕ್ತಿಕ ಕಾರಣಗಳಿಂದ ಬುಮ್ರಾ ಆಯ್ಕೆಗೆ ಲಭ್ಯವಿಲ್ಲ ಎಂದು ದೃಢಪಡಿಸಿದರು, ಆದರೆ ಅಕ್ಷರ್ ಪಟೇಲ್ ಅನಾರೋಗ್ಯದ ಕಾರಣ ಪಂದ್ಯದಿಂದ ಹೊರಗುಳಿದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಂತರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಬುಮ್ರಾ ಮುಂಬೈಗೆ ಮರಳಿದ್ದಾರೆ ಎಂದು ದೃಢಪಡಿಸಿತು. ಸರಣಿಯ ಉಳಿದ ಪಂದ್ಯಗಳಿಗೆ ವೇಗದ ಬೌಲರ್ ಲಭ್ಯರಿರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾಲ್ಕನೇ ಮತ್ತು ಐದನೇ ಟಿ20ಐಗಳು ಕ್ರಮವಾಗಿ ಡಿಸೆಂಬರ್ 17 ಮತ್ತು 19 ರಂದು ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.

ಇದನ್ನೂ ಓದಿ U19 Asia Cup: ಭಾರತದ ಆಲ್ರೌಂಡ್‌ ಆಟಕ್ಕೆ ಶರಣಾದ ಪಾಕಿಸ್ತಾನ

"ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣಗಳಿಂದ ಮನೆಗೆ ಮರಳಿದ್ದಾರೆ ಮತ್ತು ಪಂದ್ಯಕ್ಕೆ ಅಲಭ್ಯರಾಗಿರುತ್ತಾರೆ. ಉಳಿದ ಪಂದ್ಯಗಳಿಗೆ ಅವರು ತಂಡವನ್ನು ಸೇರುವ ಬಗ್ಗೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡಲಾಗುವುದು" ಎಂದು ಬಿಸಿಸಿಐ ತಿಳಿಸಿದೆ.

ಉಭಯ ಆಡುವ ಬಳಗ

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿ.ಕೀ.), ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಶ್‌ದೀಪ್‌ ಸಿಂಗ್, ವರುಣ್ ಚಕ್ರವರ್ತಿ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿ.ಕೀ.), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಡೊನೊವನ್ ಫೆರೇರಾ, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್ ,ಆನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ.