ಆಂಡ್ರೆ ರಸೆಲ್ ಐಪಿಎಲ್ ಜೆರ್ಸಿ 12 ಪೋಷಾಕಿಗೆ ವಿಶ್ರಾಂತಿ ಗೌರವ
Andre Russell No. 12 jersey: ಆಂಡ್ರೆ ರಸೆಲ್, 14 ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಆಡಿದ್ದಾರೆ. ಇದರಲ್ಲಿ 12 ವರ್ಷ ಕೆಕೆಆರ್ ಪರ ಆಡಿದ್ದಾರೆ. 2014 ರ ಮೆಗಾ ಹರಾಜಿನಲ್ಲಿ ನೈಟ್ ರೈಡರ್ಸ್ ಸೇರಿದ್ದರು. ರಸೆಲ್ ವೆಸ್ಟ್ ಇಂಡೀಸ್ ಪರ ಒಟ್ಟು 15 ವರ್ಷಗಳನ್ನು ಆಡಿದ್ದಾರೆ. ಈ ವೇಳೆ ಒಂದು ಟೆಸ್ಟ್ 56 ಏಕದಿನ ಮತ್ತು 84 ಟಿ20 ಪಂದ್ಯಗಳನ್ನು ಆಡಿದಾರೆ. ಏಕದಿನದಲ್ಲಿ 1034, ಟಿ20ಯಲ್ಲಿ 1078 ರನ್ ಬಾರಿಸಿದಾರೆ.
KKR honours Andre Russell by retiring jersey number 12 -
ಕೋಲ್ಕತಾ, ಮಾ.25: ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್(KKR) ತಂಡವು ತಮ್ಮ ದಂತಕಥೆಯ ಕ್ರಿಕೆಟಿಗ ಆಂಡ್ರೆ ರಸೆಲ್(Andre Russell) ಅವರ ಗೌರವಾರ್ಥವಾಗಿ ಅಧಿಕೃತವಾಗಿ 12ನೇ ನಂಬರ್ ಜೆರ್ಸಿಯನ್ನು ನಿವೃತ್ತಿಗೊಳಿಸಿತು. ರಸೆಲ್(Andre Russell No. 12 jersey) ಕೆಕೆಆರ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದರು. 2014 ಮತ್ತು 2024 ರಲ್ಲಿ ತಂಡ ಚಾಂಪಿಯನ್ ಆದಾಗ ಅವರು ಪ್ರಮುಖ ಪಾತ್ರ ವಹಿಸಿದರು. ಐಪಿಎಲ್‌ನಿಂದ ನಿವೃತ್ತರಾದರೂ ಅವರು ಕೆಕೆಆರ್ ತಂಡದ ಕೋಚಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
"ನಿಮ್ಮ ಗೌರವಾರ್ಥವಾಗಿ, ನಾವು ಈ ಸಂಖ್ಯೆಯನ್ನು ಕೆಕೆಆರ್‌ಗಾಗಿ ನಿವೃತ್ತಿಗೊಳಿಸಲು ಬಯಸುತ್ತೇವೆ. ರಸೆಲ್ ವಿಶ್ವಾದ್ಯಂತ ಬೌಲರ್‌ಗಳಿಗೆ ಭಯದ ಸಂಕೇತವಾಗಿ ಪರಿವರ್ತಿಸಿದ ಸಂಖ್ಯೆಯನ್ನು ನೈಟ್‌ರೈಡರ್ಸ್ ತಂಡದ ಆಟಗಾರರು ಎಂದಿಗೂ ಧರಿಸುವುದಿಲ್ಲ" ಎಂದು ಫ್ರಾಂಐಸಿಯ ಸಿಇಒ ವೆಂಕಿ ಮೈಸೂರು ಹೇಳಿದರು.
ಐಪಿಎಲ್ ತಂಡವೊಂದು ಜೆರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸಿದ್ದು ಇದೇ ಮೊದಲು. ಭಾರತೀಯ ಕ್ರಿಕೆಟ್‌ನಲ್ಲಿ, ಬಿಸಿಸಿಐ ಇದನ್ನು ಎರಡು ಬಾರಿ ಮಾಡಿದೆ, ಸಚಿನ್ ತೆಂಡೂಲ್ಕರ್ ಅವರ 10 ಮತ್ತು ಎಂಎಸ್ ಧೋನಿ ಅವರ 7 ಜರ್ಸಿಗಳನ್ನು ನಿವೃತ್ತಿಗೊಳಿಸಿದೆ. ಆದಾಗ್ಯೂ, ಐಪಿಎಲ್‌ನಲ್ಲಿ ಫ್ರಾಂಚೈಸಿ ಅಧಿಕೃತವಾಗಿ ಅದನ್ನು ನಿವೃತ್ತಿಗೊಳಿಸಿಲ್ಲ.
ಪೊಲೀಸ್ ಬಿಗಿ ಭದ್ರತೆ; ಪಂದ್ಯಗಳಿಗೆ 4 ಗಂಟೆಗಳ ಮೊದಲು ಚಿನ್ನಸ್ವಾಮಿ ಗೇಟ್‌ಗಳು ಓಪನ್
ಕೆಕೆಆರ್ ಆಯೋಜಿಸ ವಿಶೇಷ ಕಾರ್ಯಕ್ರಮದಲ್ಲಿ ಫ್ರಾಂಚೈಸಿಯೊಂದಿಗೆ ರಸೆಲ್ ಕಳೆದ ಸ್ಮರಣೀಯ ಕ್ಷಣಗಳನ್ನು ಪ್ರದರ್ಶಿಸಲಾಯಿತು. ಈ ವಿಡಿಯೊ ಕಂಡ ರಸೆಲ್, "ಆ ವೀಡಿಯೊವನ್ನು ನೋಡಿ ನಾನು ಸ್ವಲ್ಪ ಭಾವುಕನಾದೆ. ಎರಡು ಪ್ರಶಸ್ತಿ ವಿಜೇತ ತಂಡಗಳ ಭಾಗವಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಅದ್ಭುತ ಸಾಧನೆಗಳನ್ನು ಮಾಡಿದ್ದೇನೆ. ಎಲ್ಲರಿಗೂ ಅದು ಏನನ್ನು ಅರ್ಥೈಸುತ್ತದೆ ಎಂಬುದನ್ನು ನೋಡಲು. ಅದು ವಿಭಿನ್ನ ಆನಂದ. ವಿಶ್ವಕಪ್‌ಗಳು ವಿಶೇಷವೆನಿಸುತ್ತದೆ. ಆದರೆ ಐಪಿಎಲ್ ಗೆದ್ದಾಗ, ಅದು ವಿಭಿನ್ನವಾದ ವಿಷಯ. ನಾನು ಆಡಿದ ಪ್ರತಿಯೊಂದು ಪಂದ್ಯವನ್ನು, ನನ್ನ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯದಂತೆ ಆಡಿದ್ದೇನೆ ”ಎಂದು ರಸೆಲ್ ಹೇಳಿದರು.
ICYMI: Jersey no. 12 forever belongs to DRE RUSS 💜 pic.twitter.com/D1cFfhuYvI
— KolkataKnightRiders (@KKRiders) March 24, 2026
ಆಂಡ್ರೆ ರಸೆಲ್, 14 ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಆಡಿದ್ದಾರೆ. ಇದರಲ್ಲಿ 12 ವರ್ಷ ಕೆಕೆಆರ್ ಪರ ಆಡಿದ್ದಾರೆ. 2014 ರ ಮೆಗಾ ಹರಾಜಿನಲ್ಲಿ ನೈಟ್ ರೈಡರ್ಸ್ ಸೇರಿದ್ದರು. ರಸೆಲ್ ವೆಸ್ಟ್ ಇಂಡೀಸ್ ಪರ ಒಟ್ಟು 15 ವರ್ಷಗಳನ್ನು ಆಡಿದ್ದಾರೆ. ಈ ವೇಳೆ ಒಂದು ಟೆಸ್ಟ್ 56 ಏಕದಿನ ಮತ್ತು 84 ಟಿ20 ಪಂದ್ಯಗಳನ್ನು ಆಡಿದಾರೆ. ಏಕದಿನದಲ್ಲಿ 1034, ಟಿ20ಯಲ್ಲಿ 1078 ರನ್ ಬಾರಿಸಿದಾರೆ. ಬೌಲಿಂಗ್‌ನಲ್ಲಿಯೂ ಸಾಧನೆ ಮಾಡಿರುವ ಅವರು ಮೂರು ಮಾರಿ ಸೇರಿ ಒಟ್ಟು 132 ವಿಕೆಟ್ ಕಿತ್ತಿದ್ದಾರೆ.
ಮಾರ್ಚ್ 29 ರ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.