ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs RCB: ಕೆಕೆಆರ್‌-ಆರ್‌ಸಿಬಿ ಐಪಿಎಲ್‌ ದಾಖಲೆ ಹೇಗಿದೆ?

RCB vs KKR Head to Head in IPL: ಐಪಿಎಲ್‌ನ ಇದುವರೆಗಿನ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಒಟ್ಟು 35 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕೆಕೆಆರ್‌ ಗರಿಷ್ಠ 21 ಪಂದ್ಯಗಳನ್ನು ಗೆದ್ದರೆ, ಆರ್‌ಸಿಬಿ 14 ಪಂದ್ಯ ಗೆದ್ದಿದೆ.

ಕೆಕೆಆರ್‌ ವಿರುದ್ಧ ಆರ್‌ಸಿಬಿಯ ದಾಖಲೆ ಹೇಗಿದೆ?

Profile Abhilash BC Mar 21, 2025 7:39 PM

ಕೋಲ್ಕತಾ: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ತಂಡ, ವಿಶ್ವದ ಬಹುತೇಕ ಹಾರ್ಡ್‌ ಹಿಟ್ಟರ್‌ಗಳನ್ನು ಹೊಂದಿಯೂ ಈ 17 ವರ್ಷಗಳಲ್ಲಿ ಕಪ್‌ ಗೆಲ್ಲದಿದ್ದರೂ, ಪ್ರತೀ ವರ್ಷವೂ ಈ ಸಲ ಕಪ್‌ ನಮ್ದೇ ಎಂಬ ಅಭಿಮಾನಗಳ ಅಚಲ ನಂಬಿಕೆ ಇಂಥ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳೆರಡನ್ನೂ ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bengaluru) ಶನಿವಾರ 18ನೇ ಐಪಿಎಲ್‌(IPL 2025)ನಲ್ಲಿ ಕಣಕ್ಕಿಳಿಯಲಿದೆ.

ಎಂದಿನಂತೆ, ಮರೀಚಿಕೆಯಾಗಿರುವ ಐಪಿಎಲ್‌ ಟ್ರೋಫಿಯನ್ನೆತ್ತುವ ಮತ್ತೂಂದು ಪ್ರಯತ್ನದೊಂದಿಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡದಲ್ಲಿ ಒಂದಾಗಿರುವ, ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯದ ಇನ್ನೊಂದು ವಿಶೇಷತೆ ಎಂದರೆ ಉಭಯ ತಂಡಗಳು 18 ವರ್ಷಗಳ ಬಳಿಕ ಉದ್ಘಾಟನ ಪಂದ್ಯದ ಮುಖಾಮುಖಿಯಾಗುತ್ತಿರುವುದು. 2008ರ ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಎದುರಾಗಿದ್ದವು. ಅಂದು ಆರ್‌ಸಿಬಿ ಹೀನಾಯ ಸೋಲು ಕಂಡಿತ್ತು. ಇತ್ತಂಡಗಳ ನಡುವಣ ಐಪಿಎಲ್‌ ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.

ದಾಖಲೆ ಕುರಿತು ಹೇಳುವುದಾದರೆ, ಒಟ್ಟು ಪಂದ್ಯಗಳ ಗೆಲುವಿನ ಲೆಕ್ಕಾಚಾರದಲ್ಲಿ ಕೆಕೆಆರ್‌ ಮುಂದಿದೆ. ಕಳೆದ ಎರಡು ವರ್ಷಗಳಿಂದ ಆರ್‌ಸಿಬಿ ಕೆಕೆಆರ್‌ ವಿರುದ್ಧ ಗೆದ್ದಿಲ್ಲ. ಈ ಅವಧಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ನಾಲ್ಕನ್ನು ಆರ್‌ಸಿಬಿ ಸೋತಿದೆ.

ಮುಖಾಮುಖಿ

ಐಪಿಎಲ್‌ನ ಇದುವರೆಗಿನ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಒಟ್ಟು 35 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕೆಕೆಆರ್‌ ಗರಿಷ್ಠ 21 ಪಂದ್ಯಗಳನ್ನು ಗೆದ್ದರೆ, ಆರ್‌ಸಿಬಿ 14 ಪಂದ್ಯ ಗೆದ್ದಿದೆ.



ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಇದುವರೆಗೆ 93 ಐಪಿಎಲ್‌ ಪಂದ್ಯಗಳು ನಡೆದಿವೆ. ಇದರಲ್ಲಿ 38 ಬಾರಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಜಯಿಸಿದರೆ, 55 ಬಾರಿ ಚೇಸಿಂಗ್‌ ನಡೆಸಿದ ತಂಡ ಗೆದ್ದಿದೆ. 166 ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತವಾಗಿದೆ.