ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KL Rahul: ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ ಪೂರೈಸಿದ ಕನ್ನಡಿಗ ರಾಹುಲ್‌

India vs South Africa 1st Test: ಭಾರತ ತಂಡದ ಪರ ಟೆಸ್ಟ್‌ನಲ್ಲಿ 4 ಸಾವಿರ ಪ್ಲಸ್‌ ಮೊತ್ತ ದಾಖಲಿಸಿದ 18ನೇ ಬ್ಯಾಟರ್‌ ಎನಿಸಿಕೊಂಡರು. ಅತ್ಯಧಿಕ ರನ್‌ ಕಲೆಹಾಕಿದ ದಾಖಲೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌(15921 ರನ್‌) ಹೆಸರಿನಲ್ಲಿದೆ. ರಾಹುಲ್‌ ದ್ರಾವಿಡ್‌(13265) ದ್ವಿತೀಯ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ ಪೂರೈಸಿದ ಕೆ.ಎಲ್‌ ರಾಹುಲ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ ಪೂರೈಸಿದ ಕೆ.ಎಲ್‌ ರಾಹುಲ್‌ -

Abhilash BC
Abhilash BC Nov 15, 2025 10:05 AM

ಕೋಲ್ಕತಾ: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ, ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದ್ದಾರೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ(India vs South Africa 1st Test) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 15 ರನ್‌ ಪೂರ್ತಿಗೊಳಿಸುತ್ತಿದ್ದಂತೆ ರಾಹುಲ್‌ ಈ ಸಾಧನೆಗೈದರು.

ಭಾರತ ತಂಡದ ಪರ ಟೆಸ್ಟ್‌ನಲ್ಲಿ 4 ಸಾವಿರ ಪ್ಲಸ್‌ ಮೊತ್ತ ದಾಖಲಿಸಿದ 18ನೇ ಬ್ಯಾಟರ್‌ ಎನಿಸಿಕೊಂಡರು. ಅತ್ಯಧಿಕ ರನ್‌ ಕಲೆಹಾಕಿದ ದಾಖಲೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌(15921 ರನ್‌) ಹೆಸರಿನಲ್ಲಿದೆ. ರಾಹುಲ್‌ ದ್ರಾವಿಡ್‌(13265) ದ್ವಿತೀಯ ಸ್ಥಾನದಲ್ಲಿದ್ದಾರೆ.

ಶುಕ್ರವಾರ ಆರಂಭವಾದ ಈ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ (27ಕ್ಕೆ5) ಬಿರುಗಾಳಿಗೆ ದಕ್ಷಿಣ ಆಫ್ರಿಕಾ ಪಡೆ ತತ್ತರಿಸಿತು. ಇದರಿಂದಾಗಿ ಪ್ರವಾಸಿ ಪಡೆಯು 55 ಓವರ್‌ಗಳಲ್ಲಿ 159 ರನ್ ಗಳಿಸಿತು. 51ನೇ ಟೆಸ್ಟ್ ಪಂದ್ಯವಾಡಿದ ಬುಮ್ರಾ 16ನೇ 5ಿವಿಕೆಟ್‌ ಗೊಂಚಲು ಸಾಧನೆ ಮಾಡಿದರು. ಅವರಿಗೆ ಮೊಹಮ್ಮದ್ ಸಿರಾಜ್ (47ಕ್ಕೆ2) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (36ಕ್ಕೆ2) ಉತ್ತಮ ಸಾಥ್‌ ನೀಡಿದರು.

ಇನಿಂಗ್ಸ್‌ನ ಮೊದಲ 50 ನಿಮಿಷಗಳ ಕಾಲ, ದಕ್ಷಿಣ ಆಫ್ರಿಕಾದ ಆರಂಭಿಕ ಜೋಡಿ ಐಡನ್ ಮಾರ್ಕ್ರಮ್‌ ಮತ್ತು ರಿಯಾನ್ ರಿಕೆಲ್ಟನ್ ಅವರು ಬೂಮ್ರಾ ಮತ್ತು ಸಿರಾಜ್ ಇಬ್ಬರನ್ನೂ ಆತ್ಮವಿಶ್ವಾಸ ದಿಂದ ಎದುರಿಸಿದರು. ಇವರಿಬ್ಬರೂ ಸಿರಾಜ್ ಅವರನ್ನು ದಂಡಿಸಿದರು. ಅವರ ಮೊದಲ ಮೂರು ಓವರ್‌ಗಳಲ್ಲಿ 25 ರನ್ ಗಳಿಸಿದರು.

ಇದನ್ನೂ ಓದಿ IND vs SA: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ!

ಉತ್ತಮವಾಗಿ ಆಡುತ್ತಿದ್ದ ರಿಕೆಲ್ಟನ್ ಅವರು ಬೂಮ್ರಾ ಎಸೆತದ ವೇಗವನ್ನು ಅರಿಯುವಲ್ಲಿ ಎಡವಿ ಕ್ಲೀನ್‌ಬೌಲ್ಡ್ ಆದರು. ತಮ್ಮ ಇನ್ನೊಂದು ಓವರ್‌ನಲ್ಲಿ ಮಾರ್ಕ್ರಮ್‌ಗೂ ಪೆವಿಲಿಯನ್ ದಾರಿ ತೋರಿಸಿದರು. ಅವರ ಸ್ವಿಂಗ್ ಎಸೆತವನ್ನು ಕೆಣಕಿದ ಮಾರ್ಕ್ರಮ್‌ (31 ರನ್) ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್‌ ನೀಡಿದರು. ಈ ಎರಡು ವಿಕೆಟ್‌ಗಳ ಪತನವು ಭಾರತದ ಪಾಳೆಯದಲ್ಲಿ ಹುರುಪು ಮೂಡಿಸಿದವು. ಬೌಲರ್‌ಗಳ ಪಾರುಪತ್ಯ ಆರಂಭವಾಯಿತು. ಆ ಬಳಿಕ ಬಂದ ಬ್ಯಾಟರ್‌ಗಳು ಸತತವಾಗಿ ವಿಕೆಟ್‌ ಕಳೆದುಕೊಂಡು ಪೆವಿಲಿಯನ್‌ ಪರೇಡ್‌ ನಡೆಸಿದರು.