ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aman Sehrawat: ಒಲಿಂಪಿಕ್ ಪದಕ ವಿಜೇತ ಅಮನ್ ಸೆಹ್ರಾವತ್ ಅಮಾನತು ತೆರವುಗೊಳಿಸಿದ ಕುಸ್ತಿ ಸಂಸ್ಥೆ

ಸೆಪ್ಟೆಂಬರ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್ ಸ್ಪರ್ಧೆಯ ದಿನ 1.7 ಕೆ.ಜಿ. ಹೆಚ್ಚು ತೂಗಿದ್ದರು. 20 ವರ್ಷದೊಳಗಿನವರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ 600 ಗ್ರಾಂ ತೂಕ ಹೆಚ್ಚು ಇದ್ದ ಕಾರಣ ಮಹಿಳಾ ಕುಸ್ತಿಪಟು ನೇಹಾ ಸಂಗ್ವಾನ್‌ ಅಮಾನತುಗೊಂಡಿದ್ದರು.

ಅಮನ್ ಸೆಹ್ರಾವತ್, ನೇಹಾ ಸಂಗ್ವಾನ್ ಅಮಾನತು ತೆರವು

ಒಲಿಂಪಿಕ್ ಪದಕ ವಿಜೇತ ಅಮನ್ ಸೆಹ್ರಾವತ್ ಅಮಾನತು ತೆರವುಗೊಳಿಸಿದ ಕುಸ್ತಿ ಸಂಸ್ಥೆ -

Abhilash BC
Abhilash BC Nov 15, 2025 9:25 AM

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಅಮನ್ ಸೆಹ್ರಾವತ್(Aman Sehrawat) ಮತ್ತು ಭರವಸೆಯ ಕುಸ್ತಿಪಟು ನೇಹಾ ಸಂಗ್ವಾನ್(Neha Sangwan) ಕ್ರಮವಾಗಿ ವಿಶ್ವ ಚಾಂಪಿಯನ್‌ಶಿಪ್ ಮತ್ತು ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ಗಳಲ್ಲಿ ತೂಕದ ಮಿತಿಯನ್ನು ಮೀರಿ ಅನರ್ಹಗೊಂಡಿದ್ದಕ್ಕಾಗಿ ಅವರ ಅಮಾನತು ಶಿಕ್ಷೆಯನ್ನು ಭಾರತೀಯ ಕುಸ್ತಿ ಒಕ್ಕೂಟ (WFI) ರದ್ದುಗೊಳಿಸಿದೆ.

ಈ ವರ್ಷದ ಆರಂಭದಲ್ಲಿ ನಡೆದ ಪ್ರಮುಖ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಅಧಿಕ ತೂಕ ಹೊಂದಿದ್ದಕ್ಕಾಗಿ ಅಮನ್ ಸೆಹ್ರಾವತ್ ಮತ್ತು ಜೂನಿಯರ್ ಕುಸ್ತಿಪಟು ನೇಹಾ ಸಂಗ್ವಾನ್ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಅಮಾನತು ಶಿಕ್ಷೆ ರದ್ದುಗೊಂಡ ಕಾರಣ ಉಭಯ ಕುಸ್ತಿಪಟುಗಳು ಮುಂಬರುವ ಪ್ರೊ ಕುಸ್ತಿ ಲೀಗ್ (PWL) ಆವೃತ್ತಿಯ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್ ಸ್ಪರ್ಧೆಯ ದಿನ 1.7 ಕೆ.ಜಿ. ಹೆಚ್ಚು ತೂಗಿದ್ದರು. 20 ವರ್ಷದೊಳಗಿನವರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ 600 ಗ್ರಾಂ ತೂಕ ಹೆಚ್ಚು ಇದ್ದ ಕಾರಣ ಮಹಿಳಾ ಕುಸ್ತಿಪಟು ನೇಹಾ ಸಂಗ್ವಾನ್‌ ಅಮಾನತುಗೊಂಡಿದ್ದರು.

ಹ್ಯಾಮರ್ ಎಸೆತಗಾರ್ತಿ ಮಂಜು ಬಾಲಾ 5 ವರ್ಷ ಅಮಾನತು

ಈ ವರ್ಷದ ಆರಂಭದಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಕಂಡುಬಂದ ನಂತರ, ಏಷ್ಯನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ, ಹ್ಯಾಮರ್ ಎಸೆತಗಾರ್ತಿ ಮಂಜು ಬಾಲಾ ಅವರನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆಯ ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಐದು ವರ್ಷಗಳ ಅಮಾನತುಗೊಳಿಸಿದೆ.

ಇದನ್ನೂ ಓದಿ IND vs SA: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ!

2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದಿದ್ದ ಮಂಜು ಬಾಲಾ, ಡಿಹೈಡ್ರೋಕ್ಲೋರೋಮೀಥೈಲ್-ಟೆಸ್ಟೋಸ್ಟೆರಾನ್ (ಸ್ಟೆರಾಯ್ಡ್) ಮತ್ತು SARMS LGD-4033 (ಲಿಗಂಡ್ರೋಲ್) ಸೇವಿಸಿರುವುದು ದೃಢಪಟ್ಟಿದ್ದು ಇವೆರಡನ್ನೂ ಕಾರ್ಯಕ್ಷಮತೆ ಹೆಚ್ಚಿಸುವ ಔಷಧಿಗಳೆಂದು ವರ್ಗೀಕರಿಸಲಾಗಿದೆ. ಅವರ ಧನಾತ್ಮಕ ಪರೀಕ್ಷೆಯನ್ನು ಮೊದಲು NADA ಸೆಪ್ಟೆಂಬರ್ 2024 ರಲ್ಲಿ ಬಹಿರಂಗಪಡಿಸಿತು ಮತ್ತು ADDP ಯ ಔಪಚಾರಿಕ ನಿರ್ಧಾರವನ್ನು ಅಕ್ಟೋಬರ್ 15 ರಂದು ನೀಡಲಾಯಿತು. ಅವರ ತಾತ್ಕಾಲಿಕ ಅಮಾನತು ದಿನಾಂಕವಾದ ಜುಲೈ 10, 2024 ರಿಂದ ಅವರ ಅಮಾನತು ಜಾರಿಯಲ್ಲಿರುತ್ತದೆ.