ಕ್ರಾಂತಿ ಗೌಡ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಾಕಿಸ್ತಾನ ಪ್ರೇಕ್ಷಕರು
Kranti Gaud misogynistic abuse: ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗೌಡ್ ಅವರನ್ನು ಸ್ಥಳದಲ್ಲಿ ಪಾಕಿಸ್ತಾನ ಅಭಿಮಾನಿಗಳು 'ಪುರುಷ' ಎಂದು ಕರೆದರು ಮತ್ತು ಮಹಿಳಾ ಪಂದ್ಯದಲ್ಲಿ ಭಾರತ ತಂಡವು ಪುರುಷನನ್ನು ಫೀಲ್ಡಿಂಗ್ ಮಾಡಿದೆ ಎಂದು ಆರೋಪಿಸಿದರು.
Kranti Gaud faces misogynistic abuse -
ದುಬೈ, ಸೆ.6: ಶನಿವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026 ರ ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂದರ್ಭದಲ್ಲಿ ಭಾರತದ ಮಹಿಳಾ ಸೀಮರ್ ಕ್ರಾಂತಿ ಗೌಡ್ ಅವರನ್ನು ಪಾಕಿಸ್ತಾನಿ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪಾಕ್ ಪ್ರೇಕ್ಷಕರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗೌಡ್ ಅವರನ್ನು ಸ್ಥಳದಲ್ಲಿ ಪಾಕಿಸ್ತಾನ ಅಭಿಮಾನಿಗಳು 'ಪುರುಷ' ಎಂದು ಕರೆದರು ಮತ್ತು ಮಹಿಳಾ ಪಂದ್ಯದಲ್ಲಿ ಭಾರತ ತಂಡವು ಪುರುಷನನ್ನು ಫೀಲ್ಡಿಂಗ್ ಮಾಡಿದೆ ಎಂದು ಆರೋಪಿಸಿದರು. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಂದ್ಯದ ಫಲಿತಾಂಶದ ನಂತರ ಇದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿ 9 ರನ್ ಅಂತರದಲ್ಲಿ ಆರು ವಿಕೆಟ್ ಕೈಚೆಲ್ಲಿತು.18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆದ ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20ಯಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು.
“𝗟𝗮𝗱𝗸𝗮 𝗸𝗵𝗲𝗹 𝗿𝗮𝗵𝗮 𝗵𝗮𝗶… 𝗹𝗮𝗱𝗸𝗮. 𝗢𝘆𝗲 𝗹𝗮𝗱𝗸𝗲, 𝗶𝗱𝗵𝗮𝗿 𝗮𝗮!” — Pakistani fans 😭
— Mukku (@Cric_Mukku) September 6, 2026
Pakistani fans kept trolling Kranti Gaud by calling her “BOY” during the India Women vs Pakistan Women match.
Meanwhile, their own team got bowled out for just 55 runs.… pic.twitter.com/QxyRGdmzJc
ಟಿ20ಯಲ್ಲಿ 3 ಸಾವಿರ ರನ್ ಪೂರ್ತಿಗೊಳಿಸಿ ವಿಶ್ವ ದಾಖಲೆ ನಿರ್ಮಿಸಿದ ಶಫಾಲಿ ವರ್ಮಾ
ಚೇಸಿಂಗ್ ನಡೆಸಿದ ಭಾರತ 8.4 ಓವರ್‌ಗಳಲ್ಲಿ 3 ವಿಕೆಟ್‌ಗೆ 57 ರನ್‌ಗಳಿಸಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತು. ಎಡಗೈ ಸ್ಪಿನ್ನರ್ ಎನ್. ಶ್ರೀ ಚರಣಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ನಾಲ್ಕು ಓವರ್‌ಗಳಲ್ಲಿ 7 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಬೌಲರ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
ಈ ಗೆಲುವಿನೊಂದಿಗೆ ಭಾರತ ಆರು ಅಂಕಗಳೊಂದಿಗೆ ಗ್ರೂಪ್ 'ಎ' ನಲ್ಲಿ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಸೆಪ್ಟೆಂಬರ್ 10 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ಯಾರನ್ನು ಎದುರಿಸಲಿದೆ ಎಂದು ತಿಳಿಯಲು ಗ್ರೂಪ್ 'ಬಿ' ಫಲಿತಾಂಶಗಳಿಗಾಗಿ ಕಾಯುತ್ತಿದೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 18.1 ಓವರ್‌ಗಳಲ್ಲಿ 55 (ಮುನೀಬಾ 13, ಶಾವಯಿ 14, ಆಯೇಷಾ 2, ಫಾತಿಮಾ 5, ಉಮ್ ಇ ಹನಿ 6, ತುಬ 9, ಶ್ರೀಚರಣಿ 7ಕ್ಕೆ 3, ಪ್ರೇಮಾ ರಾವತ್ 9ಕ್ಕೆ 3, ದೀಪ್ತಿ ಶರ್ಮ 5ಕ್ಕೆ 2, ಶೆಾಲಿ 10ಕ್ಕೆ 1).
ಭಾರತ: 8.4 ಓವರ್‌ಗಳಲ್ಲಿ 3 ವಿಕೆಟ್‌ಗೆ 57 (ಸ್ಮತಿ ಮಂದನಾ 9, ಶೆಾಲಿ 12, ಪ್ರತೀಕಾ 4, ಹರ್ಮಾನ್‌ಪ್ರೀತ್ 18*, ದೀಪ್ತಿ 12*, ಫಾತಿಮಾ 17ಕ್ಕೆ 3).