ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಮುಂಬೈಗೆ ಇನ್ನೂ ಇದೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ; ಈ ಲೆಕ್ಕಾಚಾರ ಇಲ್ಲಿದೆ

Mumbai Indians: ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಪಂದ್ಯವನ್ನು ಗೆಲ್ಲಲೇ ಬೇಕು. ಜತೆಗೆ ಪ್ರಸ್ತುತ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋಲಬೇಕು.

4ನೇ ಸ್ಥಾನಿ ಮುಂಬೈಗೆ ಇನ್ನೂ ಇದೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ!

Profile Abhilash BC May 22, 2025 10:45 AM

ಮುಂಬಯಿ: 18ನೇ ಆವೃತ್ತಿ ಐಪಿಎಲ್‌(IPL 2025) ಪ್ಲೇ-ಆಫ್‌ ರೇಸ್‌ ಕೊನೆಗೊಂಡಿದೆ. ನಾಲ್ಕು ತಂಡಗಳಾದ ಆರ್‌ಸಿಬಿ, ಗುಜರಾತ್‌, ಮುಂಬೈ ಮತ್ತು ಪಂಜಾಬ್‌ ತಂಡಗಳು ನಾಕೌಟ್‌ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಲೇ ಆಫ್‌ ಸ್ಥಾನ ಖಚಿತಗೊಂಡರೂ ಅಗ್ರ ಎರಡು ಸ್ಥಾನಗಳ ಪೈಪೋಟಿ ಮಾತ್ರ ಇನ್ನೂ ಕೊನೆಗೊಂಡಿಲ್ಲ. ನಾಲ್ಕನೇ ಸ್ಥಾನಿಯಾಗಿರುವ ಮುಂಬೈ(Mumbai Indians) ತಂಡಕ್ಕೂ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಈ ಲೆಕ್ಕಾಚಾರದ ಮಾಹಿತಿ ಹೀಗಿದೆ.

ಸದ್ಯ ಗುಜರಾತ್‌ ಟೈಟಾನ್ಸ್‌(18) ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ತಲಾ 17 ಅಂಕದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗಿಗೂ ಇನ್ನು ಎರಡು ಪಂದ್ಯಗಳು ಬಾಕಿ ಇದೆ. ಮುಂಬೈಗೆ ಉಳಿದಿರುವುದು ಒಂದು ಪಂದ್ಯ ಮಾತ್ರ. ಈ ಪಂದ್ಯ ಗೆದ್ದರೆ ತಂಡ 18 ಅಂಕ ಕಲೆಹಾಕಲಿದೆ. ಅಗ್ರ ಎರಡನೇ ಸ್ಥಾನ ಪಡೆಯಬೇಕಿದ್ದರೆ ಈ ಅಂಕ ಮಾತ್ರ ಸಾಕಾಗುದಿಲ್ಲ. ಇಲ್ಲಿಯೂ ಕೆಲವು ಲೆಕ್ಕಾಚಾರದ ಆಟವಿದೆ.

ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಪಂದ್ಯವನ್ನು ಗೆಲ್ಲಲೇ ಬೇಕು. ಜತೆಗೆ ಪ್ರಸ್ತುತ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋಲಬೇಕು.

ಮತ್ತೊಂದೆಡೆ, 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ವಿರುದ್ಧ ತನ್ನ ಉಳಿದ ಪಂದ್ಯಗಳನ್ನು ಸೋಲಬೇಕು. ಏತನ್ಮಧ್ಯೆ, 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ಗೆ ಮುಂಬೈ ವಿರುದ್ಧ ಪಂದ್ಯವಿದೆ. ಇದರಲ್ಲಿ ಮುಂಬೈ ಗೆಲ್ಲಬೇಕು ಮತ್ತು ಪಂಜಾಬ್‌ ಡೆಲ್ಲಿ ವಿರುದ್ಧ ಸೋಲಬೇಕು. ಹೀಗಾದರೆ ಮಾತ್ರ ಮುಂಬೈಗೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಆರ್‌ಸಿಬಿ ಮತ್ತು ಗುಜರಾತ್‌ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದೊಂದು ಪಂದ್ಯ ಗೆದ್ದರೂ ಮುಂಬೈಗೆ ಅಗ್ರ ಎರಡು ಸ್ಥಾನ ಪಡೆಯಲು ಸಾಧ್ಯವಾಗುದಿಲ್ಲ.

ಇದನ್ನೂ ಓದಿ IPL 2025: ರಾಜಸ್ಥಾನ್‌ ರಾಯಲ್ಸ್‌ ಪರ 4000 ರನ್ ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್‌!

ಸನ್ನಿವೇಶ 1: ಆರ್‌ಸಿಬಿ ಮತ್ತು ಪಂಜಾಬ್‌ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಸೋತರೆ; 1. ಗುಜರಾತ್‌ (22 ಅಂಕಗಳು) 2. ಮುಂಬೈ (18 ಅಂಕಗಳು) 3. ಆರ್‌ಸಿಬಿ (17 ಅಂಕಗಳು) 4. ಪಂಜಾಬ್‌ (17 ಅಂಕಗಳು).

ಸನ್ನಿವೇಶ 2: ಗುಜರಾತ್‌ ಮತ್ತು ಆರ್‌ಸಿಬಿ ತಮ್ಮ ಎರಡೂ ಪಂದ್ಯಗಳಲ್ಲಿ ಸೋತರೆ;
1. ಪಂಜಾಬ್‌ (19 ಅಂಕಗಳು) 2. ಮುಂಬೈ (18 ಅಂಕಗಳು) 3. ಗುಜರಾತ್‌ (18 ಅಂಕಗಳು) 4. ಆರ್‌ಸಿಬಿ (17 ಅಂಕಗಳು).

ಸನ್ನಿವೇಶ 3: ಪಂಜಾಬ್‌ ಮತ್ತು ಗುಜರಾತ್‌ ತಮ್ಮ ಎರಡೂ ಪಂದ್ಯಗಳಲ್ಲಿ ಸೋತರೆ; 1. ಆರ್‌ಸಿಬಿ (21 ಅಂಕಗಳು), 2. ಮುಂಬೈ (18 ಅಂಕಗಳು) 3. ಗುಜರಾತ್‌ (18 ಅಂಕಗಳು) 4. ಪಂಜಾಬ್‌ (17 ಅಂಕಗಳು)