ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಲಂಗೂರ್‌ಗಳಿಂದ ರಕ್ಷಣೆ
Badminton World Championships: ಈ ಹಿಂದೆಯೂ ಮಂಗಗಳನ್ನು ಓಡಿಸಲು ಲಂಗೂರ್‌ಗಳ ಕಟೌಟ್, ಶಬ್ಧ ಬಳಕೆ ಮಾಡಲಾಗಿತ್ತು. 2023ರಲ್ಲಿ ಜಿ20 ಸಮ್ಮಿಟ್ ವೇಳೆ ಲಂಗೂರ್ ರೀತಿ ಶಬ್ಧ ಮಾಡಲು 40 ಜನರನ್ನು ನೇಮಿಸಲಾಗಿತ್ತು. ನೂರಾರು ಕಡೆಗಳಲ್ಲಿ ಲಂಗೂರ್‌ಗಳ ಕಟೌಟ್‌ಗಳನ್ನು ಹಾಕಲಾಗಿತ್ತು.
Langur mimicry artists Delhi -
ನವದೆಹಲಿ, ಆ.11: ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮುಂದಿನ ವಾರ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ವೇಳೆ ಮಂಗಗಳ ಕಾಟವನ್ನು ತಡೆಯಲು, ಲಂಗೂರ್‌ಗಳಂತೆ ಶಬ್ದ ಮಾಡುವ ಜನರನ್ನು ನೇಮಿಸಲಾಗಿದೆ. ಲಂಗೂರ್‌ಗಳ ಶಬ್ದಕ್ಕೆ ಮಂಗಗಳು ಹೆದರಿ ಓಡಿಹೋಗುವುದರಿಂದ, ಕ್ರೀಡಾಕೂಟವನ್ನು ಸುಗಮವಾಗಿ ನಡೆಸಲು ಈ ವಿಶಿಷ್ಟ ಕ್ರಮವನ್ನು ಕೈಗೊಳ್ಳಲಾಗಿದೆ.
ಇತ್ತೀಚೆಗೆ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ವೇಳೆ ಮಂಗಗಳು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದವು. ಇದರಿಂದ ಪ್ರೇಕ್ಷಕರಿಗೆ ಮಾತ್ರವಲ್ಲದೇ ಆಟಗಾರರಿಗೂ ತೊಂದರೆ ಉಂಟಾಗಿತ್ತು. ಆದರೆ ವಿಶ್ವ ಚಾಂಪಿಯನ್‌ಶಿಪ್ ವೇಳೆ ಮಂಗಗಳ ಸಮಸ್ಯೆ ಎದುರಾಗದಂತೆ ಆಯೋಜಕರು ವಿಶೇಷ ದಾರಿ ಕಂಡುಕೊಂಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕೂಟ ಆ.17ರಿಂದ 23ರ ವರೆಗೆ ನಡೆಯಲಿದ್ದು, 55 ದೇಶಗಳ 380ಕ್ಕೂ ಹೆಚ್ಚು ಶಟ್ಲರ್‌ಗಳು ಪಾಲ್ಗೊಳ್ಳಲಿದ್ದಾರೆ.
𝗠𝗼𝗻𝗸𝗲𝘆 𝗯𝘂𝘀𝗶𝗻𝗲𝘀𝘀 𝗮𝘁 𝘁𝗵𝗲 𝗕𝗪𝗙 𝗪𝗼𝗿𝗹𝗱 𝗖𝗵𝗮𝗺𝗽𝗶𝗼𝗻𝘀𝗵𝗶𝗽𝘀 🙈
— Sportstar (@sportstarweb) August 10, 2026
Three men trained to imitate the calls of langurs – a mixture of grunts and hoots -- have been brought in as part of the preparations for the BWF World Championships, in an unusual attempt… pic.twitter.com/Gya155pgNE
ನವದೆಹಲಿಯಲ್ಲಿ ಕ್ರೀಡೆ ಮಾತ್ರವಲ್ಲದೇ ಅಧಿವೇಶನ, ಜಾಗತಿಕ ಮಟ್ಟದ ಸಭೆ, ಸಮಾರಂಭವೇಳೆಯೂ ಮಂಗಗಳ ಕಾಟ ಎದುರಾಗುತ್ತದೆ. ಆದರೆ ಮಂಗಗಳು ಲಂಗೂರ್‌ಗಳನ್ನು ಕಂಡರೆ ಹೆದರಿ ಓಡುತ್ತವೆ. ಮಂಗಗಳಿಗೆ ಹೋಲಿಸಿದರೆ ಲಂಗೂರ್‌ಗಳು ಗಾತ್ರದಲ್ಲಿ ದೊಡ್ಡದು. ಹೀಗಾಗಿಯೇ ಈ ಬಾರಿ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ವೇಳೆ ಮಂಗಗಳನ್ನು ಓಡಿಸಲು ಲಂಗೂರ್ ಬದಲು ಲಂಗೂರ್ ರೀತಿ ಶಬ್ಧ ಮಾಡುವ ವ್ಯಕ್ತಿಗಳನ್ನು ನೇಮಿಸಲಾಗಿದೆ.
ಈ ಹಿಂದೆಯೂ ಮಂಗಗಳನ್ನು ಓಡಿಸಲು ಲಂಗೂರ್‌ಗಳ ಕಟೌಟ್, ಶಬ್ಧ ಬಳಕೆ ಮಾಡಲಾಗಿತ್ತು. 2023ರಲ್ಲಿ ಜಿ20 ಸಮ್ಮಿಟ್ ವೇಳೆ ಲಂಗೂರ್ ರೀತಿ ಶಬ್ಧ ಮಾಡಲು 40 ಜನರನ್ನು ನೇಮಿಸಲಾಗಿತ್ತು. ನೂರಾರು ಕಡೆಗಳಲ್ಲಿ ಲಂಗೂರ್‌ಗಳ ಕಟೌಟ್‌ಗಳನ್ನು ಹಾಕಲಾಗಿತ್ತು.
ಟಿ20ಯಲ್ಲಿ ಇತಿಹಾಸ ನಿರ್ಮಿಸಿದ ಮಿಚೆಲ್ ಮಾರ್ಷ್; ಈ ಸಾಧನೆ ಮಾಡಿದ ಮೊದಲ ಆಸ್ಟ್ರೇಲಿಯಾ ಕ್ರಿಕೆಟಿಗ
ಕ್ರೀಡಾಂಗಣದ ಸೀಲಿಂಗ್‌ನಲ್ಲಿರುವ ಹವಾನಿಯಂತ್ರಣ ಪೈಪ್‌ಗಳನ್ನು ಕೀಟ ನಿವಾರಕ ಜೆಲ್‌ನಿಂದ ಸಂಸ್ಕರಿಸಲಾಗಿದೆ. ನವದೆಹಲಿಯ ರೈಲ್ವೆ ನಿಲ್ದಾಣಗಳಲ್ಲಿ ಪಾರಿವಾಳಗಳು ಗುಂಪುಗೂಡದಂತೆ ತಡೆಯಲು ಇದನ್ನು ಬಳಸಲಾಗುತ್ತದೆ. ವೆಂಟಿಲೇಟರ್‌ಗಳ ಪ್ರವೇಶದ್ವಾರಗಳನ್ನು ಮುಚ್ಚಲಾಗಿದೆ. ಆವರಣದ ಪ್ರವಾಸ ನಡೆಸುತ್ತಿರುವ ಅಧಿಕಾರಿಗಳು, ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಒಳಗಿನ ಸಭಾಂಗಣಕ್ಕೆ 16 ಪ್ರವೇಶದ್ವಾರಗಳಿದ್ದು, ಪಕ್ಷಿಗಳು ಒಳನುಗ್ಗುವುದನ್ನು ತಡೆಯಲು ಈಗ ಅವೆಲ್ಲದರಲ್ಲೂ ಡಬಲ್ ಬಾಗಿಲುಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಕ್ರೀಡಾಂಗಣದಲ್ಲಿ 2,500 ಆಸನಗಳನ್ನು ನವೀಕರಿಸಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಕ್ರೀಡಾಂಗಣ ಸಂಕೀರ್ಣದಲ್ಲಿರುವ 66 ಶೌಚಾಲಯಗಳಲ್ಲಿ57 ಶೌಚಾಲಯಗಳನ್ನು ನವೀಕರಿಸಲಾಗಿದೆ. ಉಳಿದ ಒಂಬತ್ತು ಶೌಚಾಲಯಗಳನ್ನು ಕಳೆದ ವರ್ಷ ನವೀಕರಿಸಲಾಗಿದೆ ಎಂದು ದೆಹಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಅಂಬರ್ ಪ್ರತಾಪ್ ಸಿಂಗ್ ಹೇಳಿದ್ದಾರೆ.