IPL 2025: ಲಂಕಾದ ಮಾಜಿ ಕ್ರಿಕೆಟಿಗನೊಂದಿಗೆ ಮಲೈಕಾ ಡೇಟಿಂಗ್!
ಈ ಹಿಂದೆ ರಾಜಸ್ಥಾನ ರಾಯಲ್ಸ್ ನ ಮುಖ್ಯ ಕೋಚ್ ಆಗಿದ್ದ ಸಂಗಕ್ಕಾರ ಗುವಾಹಟಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜರ್ಸಿ ತೊಟ್ಟು ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಮಲೈಕಾ ಆರೋರಾ ಕೂಡ ರಾಜಸ್ಥಾನ್ ಜೆರ್ಸಿ ತೊಟ್ಟು ಸಂಗಕ್ಕರ ಪಕ್ಕ ಕುಳಿತಿದ್ದರು. ಹೀಗಾಗಿ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರಾ ಎಂಬ ಚರ್ಚೆಯೊಂದು ಹುಟ್ಟಿಕೊಂಡಿದೆ.


ಮುಂಬಯಿ: ಬಾಲಿವುಡ್ ನಟಿ ಮಲೈಕಾ ಆರೋರಾ(Malaika Arora) ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನಟ ಅರ್ಜುನ್ ಕಪೂರ್ ಜತೆ ಬ್ರೇಕಪ್ ಮಾಡಿಕೊಂಡ ಬಳಿಕ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳದ ಅವರು ಇದೀಗ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಜತೆ ಕಾಣಿಸಿಕೊಂಡಿದ್ದಾರೆ. ಭಾನುವಾರ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ವಿರುದ್ಧದ ಪಂದ್ಯವನ್ನು ಇಬ್ಬರು ಜತೆಯಾಗಿ ಕುಳಿತು ವೀಕ್ಷಿಸುತ್ತಿರುವ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಲೈಕಾ ಅರೋರಾ ಅವರು ಮಾಜಿ ಪತಿ ಅರ್ಬಾಜ್ ಖಾನ್‌ನಿಂದ 2017 ರ ವಿಚ್ಛೇದನ ಪಡೆದ ನಂತರ 2018 ರಲ್ಲಿ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದ್ದರು. ವಯಸ್ಸಿನ ಅಂತರದ ಹೊರತಾಗಿಯೂ ಅವರಿಬ್ಬರೂ ಬಹಳ ವರ್ಷಗಳಿಂದ ಬಹಿರಂಗವಾಗಿಯೇ ಡೇಟಿಂಗ್ ನಲ್ಲಿದ್ದರು. ಆದರೆ 2024ರ ಡಿಸೆಂಬರ್ ಅಂತ್ಯದಲ್ಲಿ ಇವರಿಬ್ಬರು ನಾನು ಸಿಂಗಲ್ ಎನ್ನುವ ಮೂಲಕ ಬ್ರೇಕಪ್ ಮಾಡಿಕೊಂಡಿದರು. ಇದೀಗ ಮಲೈಕಾ ಸಂಗಕ್ಕರ ಜತೆ ಕಾಣಿಸಿಕೊಂಡಿದ್ದು, ನೆಟ್ಟಿಗರು ಮಲೈಕಾ ಅವರು ಸಂಗಕ್ಕರ ಜತೆ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ರಾಜಸ್ಥಾನ ರಾಯಲ್ಸ್ ನ ಮುಖ್ಯ ಕೋಚ್ ಆಗಿದ್ದ ಸಂಗಕ್ಕಾರ ಗುವಾಹಟಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜರ್ಸಿ ತೊಟ್ಟು ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಮಲೈಕಾ ಆರೋರಾ ಕೂಡ ರಾಜಸ್ಥಾನ್ ಜೆರ್ಸಿ ತೊಟ್ಟು ಸಂಗಕ್ಕರ ಪಕ್ಕ ಕುಳಿತಿದ್ದರು. ಹೀಗಾಗಿ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರಾ ಎಂಬ ಚರ್ಚೆಯೊಂದು ಹುಟ್ಟಿಕೊಂಡಿದೆ. ಈ ಕುರಿತು ನೆಟ್ಟಿಗರು ವಿವಿಧ ಕಮೆಂಟ್ ಮಾಡುತ್ತಿದ್ದಾರೆ.
Is Malaika Arora dating sangakaara ???#MalaikaArora #RRvsCSK #JoinIndianArmy #45TheMovie #EidMubarak #VikramotsavUjjainMP #WatchSikandarInTheatresNow pic.twitter.com/P1c66nsNjK
— Aditi (@glamourworld77) March 30, 2025
ಪಂದ್ಯ ಗೆದ್ದ ರಾಜಸ್ಥಾನ್
ಚೆನ್ನೈ ವಿರುದ್ಧ 6 ರನ್ ಅಂತರದಿಂದ ಗೆಲ್ಲುವ ಮೂಲಕ ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆಯಿತು.