MI vs CSK: ಇಂದು ಚೆನ್ನೈ-ಮುಂಬೈ ಕಾದಾಟ; ಧೋನಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
ಜಸ್‌ಪ್ರೀತ್ ಬುಮ್ರಾ ಆಗಮನದಿಂದ ಮುಂಬೈ ತಂಡ ಬಲಿಷ್ಠಗೊಂಡಿದೆ. ಹಿಂದಿನ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿತ್ತು. ಅದರಲ್ಲೂ ತವರಿನಲ್ಲಿ ಮುಂಬೈ ಬಲಿಷ್ಠವಾಗಿಯೇ ಗೋಚರಿಸಿದೆ. ಇಂಪ್ಯಾಕ್ಟ್ ಆಟಗಾರ ರೋಹಿತ್ ಶರ್ಮ ಈ ಆವೃತ್ತಿಯಲ್ಲಿ ಇನ್ನೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡಿಲ್ಲ.


ಮುಂಬಯಿ: ಇಂದು(ಭಾನುವಾರ) ರಾತ್ರಿ ನಡೆಯುವ ಐಪಿಎಲ್‌ನ(IPL 2025) 38ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಮುಂಬೈ ಇಂಡಿಯನ್ಸ್( Mumbai Indians) ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಪ್ಲೇ ಆಫ್ ಅವಕಾಶ ವೃದ್ಧಿಸಿಕೊಳ್ಳಲು ಗೆಲುವು ಅಗತ್ಯಗತ್ಯ. ಮೊದಲ ಮುಖಾಮುಖಿಯಲ್ಲಿ ಚೆನ್ನೈ ತಂಡ ಮುಂಬೈಗೆ ಸೋಲುಣಿಸಿತ್ತು. ಇದೀಗ ಈ ಸೀಲಿನ ಸೇಡು ತೀರಿಸಲು ಹಾರ್ದಿಕ್ ಪಡೆ ಕಾದು ಕುಳಿತಿದೆ.
ಚೆನ್ನೈಗೆ ಮಾಡು ಇಲ್ಲವೇ ಮಡಿ ಪಂದ್ಯ
5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಈ ನಿರೀಕ್ಷೆಗಳು ಇದೀಗ ಹುಸಿಯಾಗಿದೆ. ಆಡಿದ 7 ಪಂದ್ಯಗಳಲ್ಲಿ 5 ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶವನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಾದರೆ ಧೋನಿ ಪಡೆಗೆ ಇನ್ನುಳಿದ ಪಂದ್ಯಗಳಲ್ಲಿ ಗೆಲುವೊಂದೆ ಮಂತ್ರವಾಗಿದೆ.
ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಋತುರಾಜ್ ಗಾಯಕ್ವಾಡ್ ಬದಲಿಗೆ ಚೆನ್ನೈ ತಂಡ ಇಂದಿನ ಪಂದ್ಯದಲ್ಲಿ ಮುಂಬೈ ಮೂಲದ ಯುವ ಬ್ಯಾಟರ್ ಆಯುಷ್ ಮಹ್ಹಾತ್ರೆಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆಡಿದರೆ ಅವರಿಗೆ ಇದು ಚೊಚ್ಚಲ ಐಪಿಎಲ್ ಪಂದ್ಯ.
ಸಿಡಿಯಬೇಕಿದೆ ರೋಹಿತ್, ತಿಲಕ್
ಜಸ್‌ಪ್ರೀತ್ ಬುಮ್ರಾ ಆಗಮನದಿಂದ ಮುಂಬೈ ತಂಡ ಬಲಿಷ್ಠಗೊಂಡಿದೆ. ಹಿಂದಿನ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿತ್ತು. ಅದರಲ್ಲೂ ತವರಿನಲ್ಲಿ ಮುಂಬೈ ಬಲಿಷ್ಠವಾಗಿಯೇ ಗೋಚರಿಸಿದೆ. ಇಂಪ್ಯಾಕ್ಟ್ ಆಟಗಾರ ರೋಹಿತ್ ಶರ್ಮ ಈ ಆವೃತ್ತಿಯಲ್ಲಿ ಇನ್ನೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡಿಲ್ಲ. ಜತೆಗೆ ತಿಲಕ್ ವರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಆಡಲೇ ಬೇಕಾದ ಅನಿವಾರ್ಯತೆ ಇವರ ಮುಂದಿದೆ. ಕ್ಯಾಚ್ ಹಿಡಿಯುವ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಟ್ರಂಪ್ ಕಾರ್ಡ್ ಸ್ಪಿನ್ ಬೌಲರ್ ಕರ್ಣ್ ಶರ್ಮ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ IPL 2025: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಐಪಿಎಲ್ಗೆ ಎಂಟ್ರಿ ಕೊಟ್ಟ ಅಭಿಷೇಕ್ ನಾಯರ್
ಸಂಭಾವ್ಯ ತಂಡ
ಮುಂಬೈ ಇಂಡಿಯನ್ಸ್: ರಿಯಾನ್ ರಿಕೆಲ್ಟನ್ (ವಿ.ಕೀ.), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್, ಬುಮ್ರಾ, ಕರ್ಣ್ ಶರ್ಮಾ.
2️⃣0️⃣s are the new 3️⃣0️⃣s! 😉
— Chennai Super Kings (@ChennaiIPL) April 19, 2025
Welcome aboard, Dewald Brevis! 💛
Let the whistles FLY! 🥳🔊#WhistlePodu #Yellove 🦁💛 pic.twitter.com/opovqbuFnw
ಚೆನ್ನೈ ಸೂಪರ್ ಕಿಂಗ್ಸ್: ಆಯುಷ್ ಮಹ್ಹಾತ್ರೆ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಜೇಮಿ ಓವರ್ಟನ್, ಎಂಎಸ್ ಧೋನಿ (ನಾಯಕ), ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶ ಪತಿರಾನ.