ದಿಗ್ಗಜ ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ಮಿಚೆಲ್ ಸ್ಟಾರ್ಕ್
Mitchell Starc: ಸ್ಟಾರ್ಕ್‌ಗೆ ಅಗ್ರ 10ರೊಳಗೆ ಸ್ಥಾನ ಪಡೆಯಬೇಕಿದ್ದರೆ, ಇನ್ನೂ ಐದು ವಿಕೆಟ್‌ಗಳು ಬೇಕಾಗುತ್ತವೆ. ಡೇಲ್ ಸ್ಟೇನ್ 439 ವಿಕೆಟ್‌ಗಳೊಂದಿಗೆ 10 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಾಥನ್ ಲಿಯಾನ್(568*) ಮತ್ತು ಗ್ಲೆನ್ ಮೆಕ್‌ಗ್ರಾತ್(563) ಕ್ರಮವಾಗಿ ಆರನೇ ಮತ್ತು ಏಳನೇ ಸ್ಥಾನದಲ್ಲಿದ್ದಾರೆ.
mitchell starc -
ಡಾರ್ವಿನ್, ಆ.14: ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಭಾರತದ ದಿಗ್ಗಜ ಕಪಿಲ್ ದೇವ್ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಒಂದು ವಿಕೆಟ್ ಕಿತ್ತ ಸ್ಟಾರ್ಕ್ ಅತ್ಯಧಿಕ ಟೆಸ್ಟ್ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ಕಪಿಲ್ ಹಿಂದಿಕ್ಕಿ 11ನೇ ಸ್ಥಾನಕ್ಕೇರಿದರು.
ಶುಕ್ರವಾರ ಎರಡನೇ ದಿನದಾಟದ ವೇಳೆ ಸ್ಟಾರ್ಕ್, ಲಿಟ್ಟನ್ ದಾಸ್(0) ವಿಕೆಟ್ ಕೀಳುವ ಮೂಲಕ ಈ ಮೈಲುಗಲ್ಲು ತಲುಪಿದರು. ಸ್ಟಾರ್ಕ್ ಪ್ರಸ್ತುತ 435 ವಿಕೆಟ್ ಕಿತ್ತಿದ್ದಾರೆ. ಕಪಿಲ್ ದೇವ್ 434 ವಿಕೆಟ್ ಪಡೆದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 800 ವಿಕೆಟ್ ಕಲೆಹಾಕಿದ್ದಾರೆ.
ಸ್ಟಾರ್ಕ್‌ಗೆ ಅಗ್ರ 10ರೊಳಗೆ ಸ್ಥಾನ ಪಡೆಯಬೇಕಿದ್ದರೆ, ಇನ್ನೂ ಐದು ವಿಕೆಟ್‌ಗಳು ಬೇಕಾಗುತ್ತವೆ. ಡೇಲ್ ಸ್ಟೇನ್ 439 ವಿಕೆಟ್‌ಗಳೊಂದಿಗೆ 10 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಾಥನ್ ಲಿಯಾನ್(568*) ಮತ್ತು ಗ್ಲೆನ್ ಮೆಕ್‌ಗ್ರಾತ್(563) ಕ್ರಮವಾಗಿ ಆರನೇ ಮತ್ತು ಏಳನೇ ಸ್ಥಾನದಲ್ಲಿದ್ದಾರೆ.
ಗಾಲೆಯಲ್ಲಿ ಭಾರತಕ್ಕೆ ಸ್ಪಿನ್ 'ಟೆಸ್ಟ್'; ನಾಳೆಯಿಂದ ಲಂಕಾ ವಿರುದ್ಧ ಮೊದಲ ಟೆಸ್ಟ್
ಹಿಡಿತ ಸಾಧಿಸಿದ ಬಾಂಗ್ಲಾದೇಶ
ಪಂದ್ಯದಲ್ಲಿ ಬಾಂಗ್ಲಾದೇಶ ಸಂಪೂರ್ಣ ಹಿಡಿತ ಸಾಧಿಸಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 351 ರನ್ ಗಳಿಸಿ 153 ರನ್ ಲೀಡ್ ಪಡೆದಿದೆ. ಬಾಂಗ್ಲಾದೇಶ ಪರ ತಂಜಿದ್ ಹಸನ್ ಆಕರ್ಷಕ ಶತಕ ಬಾರಿಸುವ ಮೂಲಕ ಆಸೀಸ್ ಬೌಲರ್‌ಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. 188 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ತಂಜಿದ್ ಹಸನ್ ಪಾತ್ರರಾದರು.
ಮೊಮಿನುಲ್ ಹಕ್ ಜತೆ ಎರಡನೇ ವಿಕೆಟ್‌ಗೆ 102 ರನ್‌ಗಳ ಜೊತೆಯಾಟವಾಡಿದರು. ಆದರೆ ಮೊಮಿನುಲ್ 49 ರನ್‌ಗಳಿಗೆ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆದು ಔಟಾದರು. ನಜ್ಮುಲ್ ಹೊಸೈನ್ ಶಾಂಟೊ 84ರನ್ ಗಳಿಸಿದರು. ಅಂತಿಮವಾಗಿ ತಂಜಿದ್ ಹಸನ್ 101 ರನ್ ಗಳಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 198 ರನ್‌ಗೆ ಆಲೌಟ್ ಆಗಿತ್ತು. ಸದ್ಯದ ಸ್ಥಿತಿ ನೋಡುವಾಗ ಬಾಂಗ್ಲಾದೇಶ ಗೆಲುವು ಸಾಧಿಸುವ ಲಕ್ಷಣ ಕಾಣುತ್ತಿದೆ.