ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni: ಪಂದ್ಯ ಸೋತರೂ ವಿಶೇಷ ದಾಖಲೆ ನಿರ್ಮಿಸಿದ ನಾಯಕ ಧೋನಿ

IPL 2025: ಧೋನಿಗೂ ಮುನ್ನ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿ ಅತಿ ಹಿರಿಯ ನಾಯಕ ಎಂಬ ದಾಖಲೆ ಶೇನ್‌ ವಾರ್ನ್‌ ಹೆಸರಿನಲ್ಲಿತ್ತು. ಅವರು 41 ವರ್ಷದಲ್ಲಿ ರಾಜಸ್ಥಾನ್‌ ತಂಡವನ್ನು ಮುನ್ನಡೆಸಿದ್ದರು. ಇದೀಗ ಧೋನಿ 43ನೇ ವಯಸ್ಸಿನಲ್ಲಿ ನಾಯಕನಾಗುವ ಮೂಲಕ ವಾರ್ನ್‌ ದಾಖಲೆ ಮುರಿದರು.

ಪಂದ್ಯ ಸೋತರೂ ವಿಶೇಷ ದಾಖಲೆ ನಿರ್ಮಿಸಿದ ನಾಯಕ ಧೋನಿ

Profile Abhilash BC Apr 12, 2025 7:44 AM

ಚೆನ್ನೈ: ಹಾಲಿ ಚಾಂಪಿಯನ್‌ ಕೆಕೆಆರ್‌(CSK vs KKR) ವಿರುದ್ಧ ಶುಕ್ರವಾರದ ಐಪಿಎಲ್‌(IPL 2025) ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 8 ವಿಕೆಟ್‌ ಅಂತರದ ಸೋಲು ಕಂಡರೂ, ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ(MS Dhoni) ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ತಂಡ ಮುನ್ನಡೆಸಿದ ಹಿರಿಯ ಆಟಗಾರ ಎನಿಸಿದರು. ಜತೆಗೆ 683 ದಿನಗಳ ಬಳಿಕ ಐಪಿಎಲ್‌ನಲ್ಲಿ ಚೆನ್ನೈ ತಂಡದ ಸಾರಥ್ಯ ವಹಿಸಿದರು. 2023ರ ಫೈನಲ್‌ ಗೆಲುವಿನ ಬಳಿಕ ಧೋನಿ ನಾಯಕತ್ವವನ್ನು ಋತುರಾಜ್‌ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು. ಹಾಲಿ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ಗಾಯಕ್ವಾಡ್‌ ಗಾಯಗೊಂಡು ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಧೋನಿ ಮತ್ತೆ ತಂಡದ ನಾಯಕನಾದರು.

ಧೋನಿಗೂ ಮುನ್ನ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿ ಅತಿ ಹಿರಿಯ ನಾಯಕ ಎಂಬ ದಾಖಲೆ ಶೇನ್‌ ವಾರ್ನ್‌ ಹೆಸರಿನಲ್ಲಿತ್ತು. ಅವರು 41 ವರ್ಷದಲ್ಲಿ ರಾಜಸ್ಥಾನ್‌ ತಂಡವನ್ನು ಮುನ್ನಡೆಸಿದ್ದರು. ಇದೀಗ ಧೋನಿ 43ನೇ ವಯಸ್ಸಿನಲ್ಲಿ ನಾಯಕನಾಗುವ ಮೂಲಕ ವಾರ್ನ್‌ ದಾಖಲೆ ಮುರಿದರು.

ಅತಿ ಹಿರಿಯ ನಾಯಕರು

  1. ಎಂ.ಎಸ್‌ ಧೋನಿ- 43 ವರ್ಷಗಳು, 278 ದಿನ
  2. ಶೇನ್‌ ವಾರ್ನ್‌- 41 ವರ್ಷ 249 ದಿನ
  3. ಆ್ಯಡಂ ಗಿಲ್ ಕ್ರಿಸ್ಟ್- 41 ವರ್ಷಗಳು, 185 ದಿನ
  4. ರಾಹುಲ್‌ ದ್ರಾವಿಡ್‌- 40 ವರ್ಷಗಳು, 133 ದಿನ
  5. ಸೌರವ್‌ ಗಂಗೂಲಿ- 39 ವರ್ಷಗಳು, 316 ದಿನ

ಮೊದಲ ಅನ್‌ಕ್ಯಾಪ್ಡ್‌ ನಾಯಕ

ಧೋನಿ ಐಪಿಎಲ್‌ನಲ್ಲಿ ತಂಡವೊಂದರ ನಾಯಕತ್ವವನ್ನು ವಹಿಸಿದ ಮೊದಲ ಅನ್‌ಕ್ಯಾಪ್ಡ್‌ ಆಟಗಾರ ಎಂದ ದಾಖಲೆಯನ್ನೂ ನಿರ್ಮಿಸಿದರು. ಧೋನಿ 500ಕ್ಕಿಂತಲೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ನಿಯಮದಿಂದಾಗಿ ಅವರು ಐಪಿಎಲ್‌ನಲ್ಲಿ ‘ಅನ್‌ಕ್ಯಾಪ್ಡ್‌ ಆಟಗಾರ’ ಆಗಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದಿರುವುದರಿಂದ, ನೂತನ ನಿಯಮದಂತೆ ಅವರು ‘ಅನ್‌ಕ್ಯಾಪ್ಡ್‌ ಆಟಗಾರ’ರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ IPL 2025 Points Table: ಕೆಕೆಆರ್‌ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ

ಶುಕ್ರವಾರ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್‌ನ 25ನೇ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಬ್ಯಾಟಿಂಗ್‌ ಮರೆತವರಂತೆ ಆಡುವ ಮೂಲಕ 9 ವಿಕೆಟ್‌ಗೆ ಕೇವಲ 103 ರನ್‌ ಗಳಿಸಲಷ್ಟೇ ಶಕ್ತವಾಯಿತು. ಜವಾಬಿತ್ತ ಕೆಕೆಆರ್‌ ಈ ಸಣ್ಣ ಮೊತ್ತವನ್ನು 10.1 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ ನಷ್ಟಕ್ಕೆ 107 ರನ್‌ ಬಾರಿಸಿ ಅಧಿಕಾರಯುತ ಗೆಲುವು ಸಾಧಿಸಿತು. ಕೆಕೆಆರ್‌ ಪರ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ವಿಂಡೀಸ್‌ನ ಸುನೀಲ್‌ ನರೈನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.