IPL 2025: 8 ಸಾವಿರ ರನ್ ಪೂರೈಸಿ ಕೊಹ್ಲಿ, ರೋಹಿತ್ ಜತೆ ಎಲೈಟ್ ಪಟ್ಟಿ ಸೇರಿದ ಸೂರ್ಯ
ಚೊಚ್ಚಲ ಪಂದ್ಯವನ್ನಾಡಿ 23 ವರ್ಷದ ಅಶ್ವನಿ ಕುಮಾರ್ ತಾನೆಸೆದ ಮೊದಲ ಎಸೆತದಲ್ಲೇ ವಿಕೆಟ್ ಬೇಟೆಯಾಡಿದರು. ನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಿತ್ತು ಐಪಿಎಲ್ ವಿಕೆಟ್ ಖಾತೆ ತೆರೆದ ಅವರು, ಒಟ್ಟು ಮೂರು ಓವರ್ ಬೌಲಿಂಗ್ ದಾಳಿ ನಡೆಸಿ 4 ವಿಕೆಟ್ ಕಿತ್ತು ಮಿಂಚಿದರು. ಈ ಸಾಧನೆಯೊಂದಿಗೆ ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ವಿಕೆಟ್ ಕಿತ್ತ ನಾಲ್ಕನೇ ಬೌಲರ್ ಎನಿಸಿಕೊಂಡರು.

ಮುಂಬಯಿ: ಕೆಕೆಆರ್(KKR vs MI) ವಿರುದ್ಧದ ಐಪಿಎಲ್(IPL 2025) ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಟಿ20 ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ ಮೈಲುಗಲ್ಲು ತಲುಪಿದರು. ಈ ಮೂಲಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರು. ಕೆಕೆಆರ್ ಪಂದ್ಯದಲ್ಲಿ ಸೂರ್ಯ 9 ಎಸೆತಗಳಿಂದ ಅಜೇಯ 29 ರನ್ ಬಾರಿಸಿ ಗಮನಸೆಳೆದರು.
ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು
ವಿರಾಟ್ ಕೊಹ್ಲಿ- 12976 ರನ್
ರೋಹಿತ್ ಶರ್ಮ-11851 ರನ್
ಶಿಖರ್ ಧವನ್-9797 ರನ್
ಸುರೇಶ್ ರೈನಾ- 8654 ರನ್
ಸೂರ್ಯಕುಮಾರ್ ಯಾದವ್- 8007 ರನ್
ಗೆಲುವಿನ ಖಾತೆ ತೆರೆದ ಮುಂಬೈ
ಇಲ್ಲಿನ ವಾಖೆಂಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ನಾಯಕನ ಆಯ್ಕೆಯನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಕೆಕೆಆರ್ ತಂಡವನ್ನು 16.2 ಓವರ್‌ಗಳಲ್ಲಿ 116 ರನ್‌ಗೆ ಆಲೌಟ್ ಮಾಡಿದರು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ರಯಾನ್ ರಿಕೆಲ್ಟನ್ ಅರ್ಧಶತಕದ ನೆರವಿನಿಂದ 12.5 ಓವರ್‌ಗಳಲ್ಲಿ 2 ವಿಕೆಟ್‌ಗೆ 121 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2025: ಲಂಕಾದ ಮಾಜಿ ಕ್ರಿಕೆಟಿಗನೊಂದಿಗೆ ಮಲೈಕಾ ಡೇಟಿಂಗ್!
ಚೇಸಿಂಗ್ ವೇಳೆ ರಯಾನ್ ರಿಕೆಲ್ಟನ್ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದರು. ಇಂಪ್ಯಾಕ್ಟ್ ಆಟಗಾರನಾಗಿ ಆಡಲಿಳಿದ ರೋಹಿತ್ ಶರ್ಮ(13) ಈ ಪಂದ್ಯದಲ್ಲೂ ವಿಫಲರಾದರು. ಈ ಮೊತ್ತಕ್ಕೆ 12 ಎಸೆತ ಎದುರಿಸಿದರು. ಸೂರ್ಯಕುಮಾರ್ ಯಾದವ್ ಅಜೇಯ 27 ರನ್ ಬಾರಿಸಿದರು. ಕೊನೆಯ ತನಕ ಬ್ಯಾಟಿಂಗ್ ನಡೆಸಿದ ರಿಕೆಲ್ಟನ್ 5 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ 62 ರನ್ ಗಳಿಸಿದರು. ಕೆಕೆಆರ್ ಪರ ರೆಸಲ್ 2 ವಿಕೆಟ್ ಕಿತ್ತರು.