ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಭಾರತೀಯನಾಗಿ ಇಷ್ಟೊಂದು ಹೆಮ್ಮೆ ಎಂದೂ ಅನಿಸಿರಲಿಲ್ಲ': ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ರವಿ ಶಾಸ್ತ್ರಿ

Ravi Shastri hails Modi: ಶಾಸ್ತ್ರಿ ತಮ್ಮ ಆಟದ ಅವಧಿಯಲ್ಲಿ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಮುಖ್ಯ ತರಬೇತುದಾರರಾಗಿಯೂ ಯಶಸ್ಸು ಕಂಡಿದ್ದಾರೆ. ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಧ್ವನಿಯಾಗಿ ಮುಂದುವರಿದಿದ್ದಾರೆ.

ಬ್ರಿಕ್ಸ್‌ ಶೃಂಗಸಭೆ; ಮೋದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ರವಿ ಶಾಸ್ತ್ರಿ

President Putin. President Xi and Narendra Modi -

Abhilash BC
Abhilash BC Sep 13, 2026 2:12 PM

ಮುಂಬಯಿ, ಸೆ. 13: ಭಾರತದ ಮಾಜಿ ಆಲ್‌ರೌಂಡರ್ ಮತ್ತು ಖ್ಯಾತ ವೀಕ್ಷಕವಿವರಣೆಗಾರ ರವಿ ಶಾಸ್ತ್ರಿ ಅವರು, ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು.

'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ' ಎಂಬ ವಿಷಯದೊಂದಿಗೆ, ನವದೆಹಲಿಯಲ್ಲಿ ಭಾರತವು 18ನೇ ಬ್ರಿಕ್ಸ್ (BRICS) ಶೃಂಗಸಭೆಯನ್ನು ಆಯೋಜಿಸುತ್ತಿದೆ.

ಶಾಸ್ತ್ರಿ ಅವರು 'X' ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾರ್ಯಕ್ರಮ ನಡೆದ ಸ್ಥಳವಾದ 'ಭಾರತ ಮಂಟಪ'ದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಸಿ ನೆಡುತ್ತಿರು ಫೋಟೊ ಹಂಚಿಕೊಂಡಿದ್ದಾರೆ.

"ಒಬ್ಬ ಭಾರತೀಯನಾಗಿ ಇದಕ್ಕಿಂತ ಹೆಚ್ಚಿನ ಹೆಮ್ಮೆ ಎಂದಿಗೂ ಅನಿಸಿಲ್ಲ. ಅಧ್ಯಕ್ಷ ಪುಟಿನ್, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಇವರೆಲ್ಲರೂ ಒಟ್ಟಾಗಿ 'ಭಾರತಮಾತೆ'ಯ ಮಡಿಲಲ್ಲಿ. ಹಿಂದೆಂದೂ ಕಾಣದಂತಹ ಅಂತರರಾಷ್ಟ್ರೀಯ ರಾಜತಾಂತ್ರಿಕತೆ. ನಿಮಗೆ ಅಭಿನಂದನೆಗಳು, ಮೋದಿ ಜೀ" ಎಂದು ಶಾಸ್ತ್ರಿ ಟ್ವೀಟ್‌ ಮಾಡಿದ್ದಾರೆ.



ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ ಅಂತಿಮ ದಿನವಾದ ಭಾನುವಾರ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು ಮುಕ್ತ ಅಧಿವೇಶನದಲ್ಲಿ ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಏಳು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ, ಕಝಾಕಿಸ್ತಾನ್, ಫಿಲಿಪ್ಪೀನ್ಸ್, ಈಜಿಪ್ಟ್, ಬುರುಂಡಿ, ಉಗಾಂಡಾ ಮತ್ತು ನೈಜೀರಿಯಾದ ನಾಯಕರನ್ನು ಭೇಟಿಯಾಗಲಿದ್ದಾರೆ.

ಅರಿನಾ ಸಬಲೆಂಕಾ ಹ್ಯಾಟ್ರಿಕ್‌ ಪ್ರಶಸ್ತಿ ಕನಸು ಭಗ್ನ; ಚೊಚ್ಚಲ ಯುಎಸ್‌ ಓಪನ್‌ ಗೆದ್ದ ಎಲೆನಾ ರಿಬಾಕಿನಾ

ಮೋದಿ ಅವರು ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರನ್ನು ಭೇಟಿಯಾಗಲಿದ್ದಾರೆ. ದಕ್ಷಿಣ ಆಫ್ರಿಕಾವು ಬ್ರಿಕ್ಸ್‌ನ ಪ್ರಮುಖ ಭಾಗವಾಗಿದೆ. ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಶನಿವಾರ 'ಅಂತರ್ಗತ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯ ಬಲವರ್ಧನೆ' ಕುರಿತ ಬ್ರಿಕ್ಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು ಹಾಗೂ ನವದೆಹಲಿಯಲ್ಲಿನ 'ಭಾರತ್ ಇನ್ನೋವೇಟ್ಸ್' (Bharat Innovates) ಪ್ರದರ್ಶನಕ್ಕೆ ಭೇಟಿ ನೀಡಿದ್ದರು.

ಶಾಸ್ತ್ರಿ ತಮ್ಮ ಆಟದ ಅವಧಿಯಲ್ಲಿ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಮುಖ್ಯ ತರಬೇತುದಾರರಾಗಿಯೂ ಯಶಸ್ಸು ಕಂಡಿದ್ದಾರೆ. ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಧ್ವನಿಯಾಗಿ ಮುಂದುವರಿದಿದ್ದಾರೆ.