ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರಿನಾ ಸಬಲೆಂಕಾ ಹ್ಯಾಟ್ರಿಕ್‌ ಪ್ರಶಸ್ತಿ ಕನಸು ಭಗ್ನ; ಚೊಚ್ಚಲ ಯುಎಸ್‌ ಓಪನ್‌ ಗೆದ್ದ ಎಲೆನಾ ರಿಬಾಕಿನಾ

US Open 2026: 2023ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ರಿಬಾಕಿನಾ ವಿರುದ್ಧ ಸಬಲೆಂಕಾ ಗೆದ್ದಿದ್ದರು. ಆದರೆ ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಸಬಲೆಂಕಾರನ್ನು ಸೋಲಿಸಿ ರಿಬಾಕಿನಾ ಟ್ರೋಫಿ ಎತ್ತಿಹಿಡಿದಿದ್ದರು. ಈಗ ಮತ್ತೊಮ್ಮೆ ಸಬಲೆಂಕಾ ವಿರುದ್ಧ ಗೆದ್ದು ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು. ಒಟ್ಟಾರೆ ರಿಬಾಕಿನಾ ಅವರ ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಇದಾಗಿದೆ.

ಸಬಲೆಂಕಾ ಮಣಿಸಿ ಚೊಚ್ಚಲ ಯುಎಸ್‌ ಓಪನ್‌ ಗೆದ್ದ ರಿಬಾಕಿನಾ

Elena Rybakina -

Abhilash BC
Abhilash BC Sep 13, 2026 12:49 PM

ನ್ಯೂಯಾರ್ಕ್‌, ಸೆ.13: ಭಾನುವಾರ ನಡೆದ ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ ಫೈನಲ್‌ ಕಾದಾಟದಲ್ಲಿ ಕಜಾಕಿಸ್ತಾನದ ಎಲೆನಾ ರಿಬಾಕಿನಾ ವಿರುದ್ಧ 6-4, 5-7, 6-2 ಅಂತರದಲ್ಲಿ ಸೋಲುವ ಮೂಲಕ, ಸತತ ಮೂರನೇ ಯುಎಸ್ ಓಪನ್ ಪ್ರಶಸ್ತಿ ಗೆಲ್ಲುವ ಅರಿನಾ ಸಬಲೆಂಕಾ ಅವರ ಪ್ರಯತ್ನಕ್ಕೆ ತೆರೆಬಿದ್ದಿತು. ಚೊಚ್ಚಲ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಎಲೆನಾ ರಿಬಾಕಿನಾ ವಿಶ್ವ. ನಂ.1 ಸ್ಥಾನವನ್ನು ಕೂಡ ವಶಪಡಿಸಿಕೊಂಡರು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಅರೈನಾ ಸಬಲೆಂಕಾ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಎಲೆನಾ ರಿಬಾಕಿನಾ ಮೂರು ಸೆಟ್‌ಗಳ ರೋಚಕ ಹೋರಾಟದಲ್ಲಿ ಮಣಿಸಿದರು. ಉಭಯ ಆಟಗಾರ್ತಿಯರ ನಡುವಿನ ಮೂರನೇ ಗ್ರ್ಯಾನ್‌ಸ್ಲಾಂ ಫೈನಲ್‌ ಇದಾಗಿತ್ತು.

2023ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ರಿಬಾಕಿನಾ ವಿರುದ್ಧ ಸಬಲೆಂಕಾ ಗೆದ್ದಿದ್ದರು. ಆದರೆ ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಸಬಲೆಂಕಾರನ್ನು ಸೋಲಿಸಿ ರಿಬಾಕಿನಾ ಟ್ರೋಫಿ ಎತ್ತಿಹಿಡಿದಿದ್ದರು. ಈಗ ಮತ್ತೊಮ್ಮೆ ಸಬಲೆಂಕಾ ವಿರುದ್ಧ ಗೆದ್ದು ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು. ಒಟ್ಟಾರೆ ರಿಬಾಕಿನಾ ಅವರ ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಇದಾಗಿದೆ.



"ಇದು ಅದ್ಭುತವಾದ ಅನುಭವ. ಏನಾಯಿತು ಎಂಬುದನ್ನು ಅರಿತುಕೊಳ್ಳುವುದೇ ಇನ್ನೂ ಕಷ್ಟವಾಗುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಅದೆಷ್ಟೋ ಸಾಧನೆಗಳು ನಡೆದಿವೆ. ನಾನು ಅತ್ಯಂತ ಸಂತೋಷಗೊಂಡಿದ್ದೇನೆ ಮತ್ತು ನಾನು ಮಾಡಿದ ಪರಿಶ್ರಮದ ಬಗ್ಗೆ ಹೆಮ್ಮೆಪಡುತ್ತಿದ್ದೇನೆ. ಇದು ನಿಜಕ್ಕೂ ಅದ್ಭುತ" ಎಂದು ಗೆಲುವಿನ ಬಳಿಕ ರಿಬಾಕಿನಾ ಹೇಳಿದರು.

"ಪಂದ್ಯವು ತುಂಬಾ ಜಿದ್ದಾಜಿದ್ದಿನಿಂದ ಕೂಡಿತ್ತು ಎಂದು ನನಗೆ ಅನ್ನಿಸಿತು. ಮೊದಲ ಸೆಟ್‌ನಲ್ಲೇ ನಾನು ಆರಂಭಿಕ ಮುನ್ನಡೆ (ಬ್ರೇಕ್) ಪಡೆದುಕೊಂಡಿದ್ದೆ. ಆ ನಂತರ, ಆಕ್ರಮಣಕಾರಿ ಆಟವಾಡಲು ಮುಂದಡಿ ಇಡುವುದು ಸ್ವಲ್ಪ ಸುಲಭವಾಯಿತು. ನಂತರದ ಸೆಟ್‌ನಲ್ಲಿ, ಇಬ್ಬರೂ ತಮ್ಮ ಸರ್ವ್‌ಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಆದರೆ ನಿರ್ಣಾಯಕ ಕ್ಷಣಗಳಲ್ಲಿ ಅವಳು(ಸಬಲೆಂಕಾ) ಹೆಚ್ಚು ಆಕ್ರಮಣಕಾರಿಯಾಗಿ ಆಡಿದಳು" " ಎಂದು ರಿಬಾಕಿನಾ ಹೇಳಿದರು.

"ನನಗೆ ಕೆಲವು ಸಣ್ಣ ಅವಕಾಶಗಳು ಸಿಕ್ಕಿದ್ದವು. ನಾನು ಒಂದೆರಡು ತಪ್ಪುಗಳನ್ನು ಮಾಡಿದೆ. ಆದರೆ ಮೂರನೇ ಸೆಟ್‌ನಲ್ಲಿ, ನಾನು ಇದನ್ನು ಸಾಧಿಸಬಲ್ಲೆ ಎಂದು ನನಗೆ ನಾನೇ ಹೇಳಿಕೊಂಡೆ. ನನ್ನ ಸರ್ವ್‌ನತ್ತ ಗಮನಹರಿಸಬೇಕು ಮತ್ತು ಅವಕಾಶ ಸಿಕ್ಕಾಗ ಸ್ವಲ್ಪ ಹೆಚ್ಚು ರಿಸ್ಕ್ ತೆಗೆದುಕೊಳ್ಳಬೇಕು ಎಂದುಕೊಂಡೆ. ಇದು ಯಶಸ್ಸು ಕಂಡಿತು" " ಎಂದು ರಿಬಾಕಿನಾ ಹೇಳಿದರು.