ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Gujarat Cabinet: ಗುಜರಾತ್ ಹೊಸ ಕ್ಯಾಬಿನೆಟ್: ಸಚಿವರಾಗಿ ಜಡೇಜಾ ಪತ್ನಿ ರಿವಾಬಾ ಪ್ರಮಾಣ ವಚನ ಸ್ವೀಕಾರ

ಬಿಜೆಪಿ ಸೇರುವ ಮೊದಲು, ರಿವಾಬಾ ಜಡೇಜಾ ರಜಪೂತ ಸಂಘಟನೆಯ ಕರ್ಣಿ ಸೇನಾದ ಸದಸ್ಯರಾಗಿದ್ದರು. 2018 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತ್' ಚಿತ್ರದಲ್ಲಿ ಆಕ್ಷೇಪಾರ್ಹ ವಿಷಯವಿದೆ ಎಂದು ಆರೋಪಿಸಿ ಕರ್ಣಿ ಸೇನಾ ಬೃಹತ್ ಪ್ರತಿಭಟನೆಗಳನ್ನು ನಡೆಸಿದಾಗ ಅವರು ಬೆಳಕಿಗೆ ಬಂದರು.

ಸಚಿವೆಯಾಗಿ ಜಡೇಜಾ ಪತ್ನಿ ಪ್ರಮಾಣ ವಚನ ಸ್ವೀಕಾರ

-

Abhilash BC Abhilash BC Oct 17, 2025 4:06 PM

ಗಾಂಧಿನಗರ: ಗುಜರಾತ್‌ನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ(New Gujarat Cabinet) ಸಚಿವ ಸಂಪುಟದ ಭಾಗವಾಗಿ ಶುಕ್ರವಾರ (ಅಕ್ಟೋಬರ್ 17, 2025) 25 ಸದಸ್ಯರ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಲಾಯಿತು. ಸಂಪುಟ ಪುನರ್‌ರಚನೆಯ ಅಚ್ಚರಿ ಎಂದರೆ ಕ್ರಿಕೆಟಿಗ ರವೀಂದ್ರ ಜಡೇಜಾ(Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ(Rivaba Jadeja) ಅವರು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು.

2019 ರಲ್ಲಿ ಬಿಜೆಪಿಗೆ ಸೇರಿದ ನಂತರ 34 ವರ್ಷದ ರಿವಾಬಾ ಇದೀಗ ಗುಜರಾತ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ನಿನ್ನೆ ಸರ್ಕಾರದ ಎಲ್ಲ ಸಚಿವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ವ್ಯವಸ್ಥಿತ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಸಚಿವ ಸಂಪುಟವನ್ನು ಪುನರ್ರಚಿಸುವ ಯೋಜನೆಯ ಭಾಗವಾಗಿ ಈ ರಾಜೀನಾಮೆ ಪ್ರಕ್ರಿಯೆ ನಡೆದಿದೆ ಎಂದು ಪಕ್ಷದ ನಾಯಕರು ಮಾಧ್ಯಮಗಳಿಗೆ ತಿಳಿಸಿದ್ದರು.



ನವೆಂಬರ್ 2, 1990 ರಂದು ರಾಜ್‌ಕೋಟ್‌ನಲ್ಲಿ ಜನಿಸಿದ ರಿವಾಬಾ, ನಗರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ನಿಕಟ ಸಂಪರ್ಕ ಹೊಂದಿರುವ ಕುಟುಂಬಕ್ಕೆ ಸೇರಿದವರು. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ರಿವಾಬಾ ಅವರ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ, ರಾಜ್‌ಕೋಟ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರು. 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ರಾಜ್‌ಕೋಟ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಈ ದಂಪತಿಗೆ ನಿಧ್ಯಾನ ಎಂಬ ಮಗಳಿದ್ದಾಳೆ.

ಇದನ್ನೂ ಓದಿ IND vs AUS: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ದಾಖಲೆ ಹೇಗಿದೆ?

ಬಿಜೆಪಿ ಸೇರುವ ಮೊದಲು, ರಿವಾಬಾ ಜಡೇಜಾ ರಜಪೂತ ಸಂಘಟನೆಯ ಕರ್ಣಿ ಸೇನಾದ ಸದಸ್ಯರಾಗಿದ್ದರು. 2018 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತ್' ಚಿತ್ರದಲ್ಲಿ ಆಕ್ಷೇಪಾರ್ಹ ವಿಷಯವಿದೆ ಎಂದು ಆರೋಪಿಸಿ ಕರ್ಣಿ ಸೇನಾ ಬೃಹತ್ ಪ್ರತಿಭಟನೆಗಳನ್ನು ನಡೆಸಿದಾಗ ಅವರು ಬೆಳಕಿಗೆ ಬಂದರು. ಅದೇ ವರ್ಷ, ಅವರು ಕರ್ಣಿ ಸೇನಾದ ಮಹಿಳಾ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡರು.