ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Asian Games 2026: ಶಾಟ್‌ ಫುಟ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಜಿಂದರ್‌ಪಾಲ್‌ ಸಿಂಗ್‌ ತೂರ್‌!

ಜಪಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ ಪುರುಷರ ಶಾಟ್‌ ಫುಟ್‌ ವಿಭಾಗದಲ್ಲಿ ಭಾರತದ ತಜೀಂದರ್‌ಪಾಲ್‌ ಸಿಂಗ್‌ ತೂರ್‌ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ತಮ್ಮ ಐದನೇ ಪ್ರಯತ್ನದಲ್ಲಿ ಶಾಟ್‌ ಫುಟ್‌ ಅನ್ನು 20.64 ಮೀಟರ್‌ ದೂರ ಎಸೆಯುವ ಮೂಲಕ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಶಾಟ್‌ ಫುಟ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಜಿಂದರ್‌ಪಾಲ್‌ ಸಿಂಗ್‌ ತೂರ್‌!

ತಜೀಂದರ್‌ಪಾಲ್‌ ಸಿಂಗ್‌ ತೂರ್‌ಗೆ ಬೆಳ್ಳಿ ಪದಕ. -

Profile
Ramesh Kote Sep 26, 2026 7:50 PM

ಜಪಾನ್‌: ಭಾರತದ ತಜೀಂದರ್‌ಪಾಲ್‌ ಸಿಂಗ್‌ ತೂರ್‌ (Tajinderpal Singh) ಅವರು ಜಪಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ ಪುರುಷರ ಶಾಟ್‌ ಫುಟ್‌ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಅವರು ತಮ್ಮ ಐದನೇ ಪ್ರಯತ್ನದಲ್ಲಿ ಶಾಟ್‌ ಫುಟ್‌ ಅನ್ನು 20.64 ಮೀಟರ್‌ ದೂರ ಎಸೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇನು ಇರಾನ್‌ ಮೊಹಮ್ಮದ್ರೇಝಾ ತಯೆಬಿಸೆ ಶಾಟ್‌ ಫುಟ್‌ ಅನ್ನು 20.81 ಮೀಟರ್‌ ದೂರ ಎಸೆಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

2018ರ ಜಕಾರ್ತದಲ್ಲಿ ಹಾಗೂ 2022ರ ಹ್ಯಾಂಗ್‌ಝೌನಲ್ಲಿ ತಲಾ ಚಿನ್ನದ ಪದಕಗಳನ್ನು ಗೆದ್ದ ಬಳಿಕ ಇದೀಗ ಅವರು ಜಪಾನ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಪುರುಷರ 200 ಮೀಟರ್ ವಿಭಾಗದಲ್ಲಿ ಅನಿಮೇಶ್ ಕುಜೂರ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಮೂರನೇ ಸೆಮಿಫೈನಲ್‌ನಲ್ಲಿ 20.81 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದ ಕುಜೂರ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡರು.

ಏಷ್ಯನ್‌ ಗೇಮ್ಸ್‌; ಬಂಗಾರ ಗೆದ್ದ ಭಾರತದ ಮಹಿಳಾ ಕಬಡ್ಡಿ ತಂಡ

ಥಾಯ್ಲೆಂಡ್‌ನ ಪುರಿಪೋಲ್ ಬೂನ್ಸನ್ 20.10 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ಗೇಮ್ಸ್‌ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು. ಇದೇ ಏಷ್ಯನ್ ಗೇಮ್ಸ್‌ನಲ್ಲಿ 100 ಮೀಟರ್ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ಕುಜೂರ್, ಇದೀಗ 200 ಮೀಟರ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

1500 ಮೀ ಫೈನಲ್‌ಗೆ ಇಬ್ಬರು ಭಾರತೀಯರು

ಪುರುಷರ 1500 ಮೀಟರ್ ವಿಭಾಗದಲ್ಲೂ ಭಾರತಕ್ಕೆ ಉತ್ತಮ ಸುದ್ದಿ ಸಿಕ್ಕಿದೆ. ಗುಲ್ವೀರ್ ಸಿಂಗ್ 3:45.79 ಸೆಕೆಂಡ್‌ಗಳಲ್ಲಿ ಹೀಟ್-2ರಲ್ಲಿ ಮೂರನೇ ಸ್ಥಾನ ಪಡೆದರೆ, ಯೂನಸ್ ಶಾ 3:45.77 ಸೆಕೆಂಡ್‌ಗಳಲ್ಲಿ ಹೀಟ್-1ರಲ್ಲಿ ಮೂರನೇ ಸ್ಥಾನ ಪಡೆದರು. ಇಬ್ಬರೂ ಸೆಪ್ಟೆಂಬರ್ 28ರಂದು ನಡೆಯಲಿರುವ 1500 ಮೀಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಏಷ್ಯನ್ ಗೇಮ್ಸ್‌; ಶೂಟಿಂಗ್‌, ಮ್ಯಾರಥಾನ್‌ನಲ್ಲಿ ಬೆಳ್ಳಿ ಗೆದ್ದ ಭಾರತ

ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ

ಇದಕ್ಕೂ ಮುನ್ನ ಶನಿವಾರ ಪುರುಷರ ಕಬಡ್ಡಿ ಸ್ಪರ್ಧೆಯಲ್ಲಿ ಭಾರತ ಇರಾನ್ ವಿರುದ್ಧ 40-34 ಅಂತರದಲ್ಲಿ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಮೊದಲಾರ್ಧದಲ್ಲಿ 17-18ರಿಂದ ಹಿನ್ನಡೆಯಲ್ಲಿದ್ದ ಭಾರತ, ದ್ವಿತೀಯಾರ್ಧದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಭರ್ಜರಿ ಗೆಲುವು ದಾಖಲಿಸಿತು.