ಹಾಂಗ್ಕಾಂಗ್ ಓಪನ್ನಲ್ಲಿ ಭಾರತದ ಸವಾಲು ಅಂತ್ಯ; ಸೆಮಿಯಲ್ಲಿ ಲಕ್ಷ್ಯ , ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
Hong Kong Open: ವಿಶ್ವದ 6ನೇ ಶ್ರೇಯಾಂಕದ ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್, ಮಲೇಷ್ಯಾದ ಎಂಟನೇ ಶ್ರೇಯಾಂಕದ ಜೋಡಿಯಾದ ಮ್ಯಾನ್ ವೈ ಚೊಂಗ್ ಮತ್ತು ಟೀ ಕೈ ವುನ್ ವಿರುದ್ಧದ ಪಂದ್ಯದಲ್ಲಿ 18-21, 19-21 ನೇರ ಗೇಮ್ಗಳ ಅಂತರದಲ್ಲಿ ಸೋಲನುಭವಿಸಿದರು. ಈ ವರ್ಷ ಅವರು ಸಿಂಗಾಪುರ ಮತ್ತು ಚೀನಾದಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದರು.
Satwiksairaj Rankireddy-Chirag Shetty and Lakshya Sen -
ಕೌಲೂನ್ (ಹಾಂಗ್ಕಾಂಗ್), ನ.21: ಹಾಂಗ್ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಶನಿವಾರ ನಡೆದ ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲನುಭವಿಸಿದರು. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ವಿಶ್ವದ 6ನೇ ಶ್ರೇಯಾಂಕದ ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್, ಮಲೇಷ್ಯಾದ ಎಂಟನೇ ಶ್ರೇಯಾಂಕದ ಜೋಡಿಯಾದ ಮ್ಯಾನ್ ವೈ ಚೊಂಗ್ ಮತ್ತು ಟೀ ಕೈ ವುನ್ ವಿರುದ್ಧದ ಪಂದ್ಯದಲ್ಲಿ 18-21, 19-21 ನೇರ ಗೇಮ್ಗಳ ಅಂತರದಲ್ಲಿ ಸೋಲನುಭವಿಸಿದರು. ಈ ವರ್ಷ ಅವರು ಸಿಂಗಾಪುರ ಮತ್ತು ಚೀನಾದಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದರು.
ನಂತರ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಲಕ್ಷ್ಯ ಅವರು ಡೆನ್ಮಾರ್ಕ್ನ ಆಂಡರ್ಸ್ ಆಂಟೋನ್ಸೆನ್ ವಿರುದ್ಧ 13-21, 13-21 ಅಂತರದಲ್ಲಿ ಪರಾಭವಗೊಂಡರು. ಇದರೊಂದಿಗೆ ಲಕ್ಷ್ಯ ಅವರ ಸತತ ಗೆಲುವಿನ ಓಟಕ್ಕೆ ತೆರೆ ಬಿದ್ದಿತು. ಕಳೆದ ಎರಡು ವಾರಗಳಲ್ಲಿ ಅವರು 'ಹೈಲೋ ಓಪನ್' ಮತ್ತು 'ಕುಮಾಮೊಟೊ ಮಾಸ್ಟರ್ಸ್ ಜಪಾನ್' ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.
ಇಂಗ್ಲೆಂಡ್ ಟಿ20 ಸರಣಿಗೆ ಭಾರತ ಅಂಡರ್-19 ಮಹಿಳಾ ತಂಡ ಪ್ರಕಟ
ವಿಶ್ವದ 9ನೇ ಶ್ರೇಯಾಂಕದ ಮಲೇಷ್ಯಾ ಜೋಡಿಯ ವಿರುದ್ಧ ಸಾತ್ವಿಕ್ ಮತ್ತು ಚಿರಾಗ್ 4-1ರ ಮುಖಾಮುಖಿ ದಾಖಲೆಯನ್ನು ಹೊಂದಿದ್ದರು. ಈ ಮಲೇಷ್ಯಾ ಜೋಡಿಯು 2025ರ ಇಂಡೋನೇಷ್ಯಾ ಓಪನ್ನಲ್ಲಿ ನಡೆದ ತಮ್ಮ ಹಿಂದಿನ ಮುಖಾಮುಖಿಯಲ್ಲಿ ಜಯ ಸಾಧಿಸಿತ್ತು.
ವಿಶ್ವ ಕ್ರಮಾಂಕದ 11ನೇ ಆಟಗಾರ ಲಕ್ಷ್ಯ, 42 ನಿಮಿಷಗಳ ಹೋರಾಟದಲ್ಲಿ ಆಂಟೋನ್ಸೆನ್ ವಿರುದ್ಧ ಸೋಲನ್ನಪ್ಪಿದರು. ಈ ಗೆಲುವಿನೊಂದಿಗೆ ಡೆನ್ಮಾರ್ಕ್ನ ಆಂಟೋನ್ಸೆನ್, ಭಾರತೀಯ ಆಟಗಾರನ ವಿರುದ್ಧದ ತಮ್ಮ ಮುಖಾಮುಖಿ ದಾಖಲೆಯನ್ನು 6-3ಕ್ಕೆ ವಿಸ್ತರಿಸಿಕೊಂಡರು.
ನಿಧಾನಗತಿಯ ಆರಂಭದ ನಂತರ, ಮೊದಲ ಗೇಮ್ನಲ್ಲಿ ಲಕ್ಷ್ಯ 7-6 ಅಂತರದ ಮುನ್ನಡೆ ಸಾಧಿಸಿದರು. ಆದರೆ, ಅನಗತ್ಯ ತಪ್ಪುಗಳ ಸರಣಿ ಮುಂದುವರಿಸಿದ ಕಾರಣ ಸೋಲು ಕಾಣಬೇಕಾಯಿತು. ಜಂಪ್ ಸ್ಮ್ಯಾಶ್ಗಳು ಕೋರ್ಟ್ನ ಹೊರಗೆ ಬಿದ್ದವು ಮತ್ತು ಎದುರಾಳಿ ಆಡಿದ ಕೆಲವು 'ಕ್ಲಿಯರ್' ಶಾಟ್ಗಳನ್ನು ಅಂದಾಜಿಸುವಲ್ಲಿ ಲಕ್ಷ್ಯ ಎಡವಿದರು. ಇದರಿಂದಾಗಿ ಭಾರತೀಯ ಆಟಗಾರ ತಮ್ಮ ಲಯವನ್ನು ಕಳೆದುಕೊಂಡರು.
"ಅವರ ವೇಗಕ್ಕೆ ತಕ್ಕಂತೆ ಸಾಗುವುದು ನನಗೆ ಬಹಳ ಕಷ್ಟವಾಯಿತು. ಅಂಕಣದಲ್ಲಿ ಅವರು ಉತ್ತಮ ಆಟಗಾರರಾಗಿದ್ದರು. ಅಂಕಗಳನ್ನು ಗಳಿಸುವ ವಿಷಯದಲ್ಲಿ ನಾನು ಸ್ವಲ್ಪ ಅವಸರಪಟ್ಟೆ ಎಂದು ನನಗನ್ನಿಸುತ್ತದೆ, ಏಕೆಂದರೆ ರ್ಯಾಲಿಗಳು ಹೆಚ್ಚು ಕಾಲ ಮುಂದುವರಿಯುವುದನ್ನು ನಾನು ಬಯಸಿರಲಿಲ್ಲ," ಎಂದು ಸೋಲಿನ ನಂತರ ಲಕ್ಷ್ಯ ಹೇಳಿದರು.