ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Championships: 16ನೇ ಸುತ್ತಿನಲ್ಲಿ ಸೋತು, ಟೂರ್ನಿಯಿಂದ ಹೊರಬಿದ್ದ ಕನ್ನಡಿಗ ಆಯುಷ್‌ ಶೆಟ್ಟಿ!

ಭಾರತದ ಯುವ ಶಟ್ಲರ್ ಆಯುಷ್ ಶೆಟ್ಟಿ ಅವರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಅಭಿಯಾನ 16ರ ಘಟ್ಟದಲ್ಲೇ ಅಂತ್ಯಗೊಂಡಿದೆ. ಇಂಡೋನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆಯುಷ್ ಶೆಟ್ಟಿ 19-21, 11-21 ಅಂತರದಲ್ಲಿ ಸೋಲು ಅನುಭವಿಸಿದರು. ಕನ್ನಡಿಗನ ಸೋಲಿನೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಸಿಂಗಲ್ಸ್ ವಿಭಾಗದ ಸವಾಲು ಕೂಡ ಅಂತ್ಯಗೊಂಡಿದೆ.

ವಿಶ್ವ ಚಾಂಪಿಯನ್‌ಷಿಪ್ಸ್‌ನಿಂದ ಹೊರಬಿದ್ದ ಕನ್ನಡಿಗ ಆಯುಷ್‌ ಶೆಟ್ಟಿ!

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್ಸ್‌ನಿಂದ ಹೊರಬಿದ್ದ ಆಯುಷ್‌ ಶೆಟ್ಟಿ. -

Profile
Ramesh Kote Aug 20, 2026 9:26 PM

ನವದೆಹಲಿ: ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (BWF World Championships) ಭಾರತದ ಪುರುಷರ ಸಿಂಗಲ್ಸ್ ಅಭಿಯಾನ ಗುರುವಾರ ಅಂತ್ಯಗೊಂಡಿದೆ. ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ ಆಯುಷ್ ಶೆಟ್ಟಿ (Ayush Shetty) ಅವರು ಇಂಡೋನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ ಸೋಲು ಅನುಭವಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಕನ್ನಡಿಗ ಆಯುಷ್, ಹಿಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಶಿ ಯೂಕಿ ಅವರನ್ನು ಅಚ್ಚರಿಗೊಳಿಸಿ ಗೆಲುವು ಸಾಧಿಸಿದ್ದರು. ಆದರೆ ಅಲ್ವಿ ಫರ್ಹಾನ್ ವಿರುದ್ಧ 45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 19-21, 11-21 ಅಂತರದಲ್ಲಿ ಸೋತರು.

ಜುಲೈನಲ್ಲಿ ನಡೆದಿದ್ದ ಚೀನಾ ಓಪನ್ ಟೂರ್ನಿಯಲ್ಲಿ ಅಲ್ವಿ ಮತ್ತು ಆಯುಷ್ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಭಾರತೀಯ ಆಟಗಾರ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅಲ್ವಿ ಅವರ ವೇಗದ ಚಲನವಲನ ಆಯುಷ್‌ಗೆ ಪದೇ-ಪದೇ ಸಮಸ್ಯೆ ತಂದೊಡ್ಡಿತು. ವಿಶೇಷವಾಗಿ ಮೊದಲ ಗೇಮ್‌ನ ಬಳಿಕ ಇಂಡೋನೇಷ್ಯಾದ ಆಟಗಾರ ಮೇಲುಗೈ ಸಾಧಿಸಿದರು.

World Championships: ಕ್ವಾರ್ಟರ್‌ಫೈನಲ್ಸ್‌ಗೇರಿದ ಟ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್‌!

ಆಯುಷ್ ಪಂದ್ಯವನ್ನು ಉತ್ತಮವಾಗಿ ಆರಂಭಿಸಿದ್ದರು. ಒಂದು ಹಂತದಲ್ಲಿ ಅವರು 14-18ರಿಂದ ಹಿನ್ನಡೆಯಲ್ಲಿದ್ದರೂ 19-18ಕ್ಕೆ ಮುನ್ನಡೆ ಸಾಧಿಸಿ ಮೊದಲ ಗೇಮ್ ಗೆಲ್ಲುವ ಉತ್ತಮ ಅವಕಾಶ ಸೃಷ್ಟಿಸಿಕೊಂಡಿದ್ದರು. ಆದರೆ ಆ ಮುನ್ನಡೆಯನ್ನು ಗೆಲುವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಲ್ವಿ ಫರ್ಹಾನ್ ತಕ್ಷಣವೇ ಪಂದ್ಯದ ಮೇಲೆ ಹಿಡಿತ ಸಾಧಿಸಿ ಮೊದಲ ಗೇಮ್ ಅನ್ನು 21-19 ಅಂತರದಲ್ಲಿ ಗೆಲುವು ಸಾಧಿಸಿದರು.

ಎರಡನೇ ಗೇಮ್‌ನಲ್ಲೂ ಅಲ್ವಿ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಆಯುಷ್‌ಗೆ ತಿರುಗೇಟು ನೀಡಲು ಅವಕಾಶ ನೀಡದೆ 21-11ರಿಂದ ಗೇಮ್ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಆಯುಷ್ ಶೆಟ್ಟಿ ಅವರ ಸೋಲಿನೊಂದಿಗೆ ಈ ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಭಾರತದ ಪುರುಷರ ಸಿಂಗಲ್ಸ್ ವಿಭಾಗದ ಸವಾಲು ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಲಕ್ಷ್ಯ ಸೇನ್ ಅವರು ಗ್ಯಾರೆಟ್ ಟಾನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.

World Championship: 18ರ ವಯಸ್ಸಿನ ಆಟಗಾರನ ಎದುರು ಸೋತು ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್‌!

ಕ್ವಾರ್ಟರ್‌ಫೈನಲ್ಸ್‌ಗೆ ಲಗ್ಗೆಯಿಟ್ಟ ಟ್ರೀಸಾ-ಗಾಯತ್ರಿ ಜೋಡಿ

ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ (BWF World Championship) ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಜಪಾನ್‌ನ ಏಳನೇ ಶ್ರೇಯಾಂಕಿತ ಜೋಡಿ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದೆ. ಏಕಪಕ್ಷೀಯ ಸ್ಪರ್ಧೆಯಲ್ಲಿ ಶ್ರೇಯಾಂಕವಿಲ್ಲದ ಭಾರತೀಯ ಜೋಡಿ ವಿಶ್ವದ ಏಳನೇ ಶ್ರೇಯಾಂಕಿತ ಜಪಾನಿನ ಜೋಡಿಯನ್ನು 21-16, 21-12 ಸೆಟ್‌ಗಳಿಂದ ಮಣಿಸಿತು.