China Masters 2025: ಸೆಮಿಫೈನಲ್ಸ್‌ಗೆ ಸಾತ್ವಿಕ್-ಚಿರಾಗ್ ಜೋಡಿ, ಪಿವಿ ಸಿಂಧೂಗೆ ಸೋಲು!
ಪ್ರಸ್ತುತ ನಡೆಯುತ್ತಿರುವ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ತಮ್ಮ ಗೆಲುವಿನ ಲಯವನ್ನು ಮುಂದುವರಿಸಿದ್ದಾರೆ. ಆ ಮೂಲಕ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಮಾಡಿದ್ದಾರೆ. ಮಹಿಳೆರ ಸಿಂಗಲ್ಸ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧೂ ಸೋಲು ಅನುಭವಿಸಿದ್ದಾರೆ.

ಚೀನಾ ಮಾಸ್ಟರ್ಸ್ ಸೆಮೀಸ್‌ಗೆ ಚಿರಾಗ್-ಸಾತ್ವಿಕ್, ಪಿವಿ ಸೀಂಧೂಗೆ ಸೋಲು. -

ಶೆನ್‌ಝೆನ್: ಪ್ರಸ್ತುತ ನಡೆಯುತ್ತಿರುವ 2025ರ ಚೀನಾ ಮಾಸ್ಟರ್ಸ್ (China Masters 2025) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwik-Chirag) ತಮ್ಮ ಗೆಲುವಿನ ಲಯವನ್ನು ಮುಂದುವರಿಸಿದ್ದಾರೆ. ಈ ಜೋಡಿ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಮೂಡಿಸಿದೆ. ಆದರೆ, ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ (PV Sindhu) ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿದ್ದಾರೆ. ಆ ಮೂಲಕ ಪ್ರಸಕ್ತ ವರ್ಷದಲ್ಲಿನ ಅವರ ವೈಫಲ್ಯತೆ ಮುಂದುವರಿದಿದೆ.
ಶುಕ್ರವಾರ 38 ನಿಮಿಷಗಳ ಕಾಲ ನಡೆದಿದ್ದ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಭಾರತದ ಸಾತ್ವಿಕ್-ಚಿರಾಗ್ ಜೋಡಿ, 21-14 ಮತ್ತು 21-14 ರ ನೇರ ಗೇಮ್‌ಗಳಲ್ಲಿ ಚೀನಾದ ರೆನ್ ಕ್ಸಿಯಂಗ್ ಯು ಮತ್ತು ಕ್ಸಿ ಹಾನನ್ ಜೋಡಿಯನ್ನು ಮಣಿಸಿತು. ಆ ಮೂಲಕ ಟೂರ್ನಿಯ ಅಂತಿಮ ನಾಲ್ಕರ ಘಟ್ಟಕ್ಕೆ ಭಾರತದ ಪುರುಷರ ಡಬಲ್ಸ್ ಜೋಡಿ ಪ್ರವೇಶ ಮಾಡಿತು. ಆ ಮೂಲಕ 2025ರಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಈ ಜೋಡಿ ಮೂಡಿಸಿದೆ.
China Open 2025: ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶಿಸಿದ ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ!
ಕಳೆದ ವಾರ ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಚೀನಾದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೋಡಿಯಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಸೋಲು ಅನುಭವಿಸಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಇದಕ್ಕೂ ಮುನ್ನ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಭಾರತದ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.
SATCHI MOVES INTO THE SEMIFINALS! 🔥
— The Khel India (@TheKhelIndia) September 19, 2025
India's Satwik & Chirag defeated Chinese Pair Ren & Xie 21-14, 21-14 at China Masters (S750) 💪
INCREDIBLY WELL DONE! 🇮🇳💙pic.twitter.com/fEGWO77Xli
ಪಿವಿ ಸಿಂಧೂಗೆ ಮತ್ತೊಂದು ಸೋಲು
ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧೂ ಅವರು ಚೀನಾ ಮಾಸ್ಟರ್ಸ್ ಮಹಿಳೆಯ ಸಿಂಗಲ್ಸ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಆ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶುಕ್ರವಾರ ಶೆನ್‌ಝೆನ್ ಅರೇನಾದಲ್ಲಿ ನಡೆದಿದ್ದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ಸ್ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಕೊರಿಯನ್ ಆಟಗಾರ್ತಿ ಎನ್ ಸಿ ಯಂಗ್ ವಿರುದ್ಧ ಭಾರತದ ಆಟಗಾರ್ತಿ ಸೋಲು ಅನುಭವಿಸಿದರು.
Defeat in the China Masters quarter-finals ❌
— ESPN India (@ESPNIndia) September 19, 2025
PV Sindhu went down to world No. 1 An Se Young in straight games at the China Masters Super 750
➡️ Read the full story: https://t.co/PAyu9N9ePO pic.twitter.com/pLdtlrFMjT
2016ರ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ಹಾಗೂ 2020ರ ಟೋಕಿಯೋ ಒಲಿಂಪಿಲ್ಸ್ ಕಂಚಿನ ಪದಕ ವಿಜೇತ ಸಿಂಧೂ ಅವರು, 38 ನಿಮಿಷಗಳ ಕಾಲ ನಡೆದಿದ್ದ ಕಾಳಗದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಇದರ ಪರಿಣಾಮ 2024ರ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ವಿಶ್ವದ ನಂ1 ಕೊರಿಯನ್ ಆಟಗಾರ್ತಿಯ ಎದುರು 21-14 ಮತ್ತು 21-13ರ ನೇರ ಗೇಮ್‌ಗಳಿಂದ ಪರಾಭವಗೊಂಡರು.
ಇದಕ್ಕೂ ಮುನ್ನ ಪಿವಿ ಸಿಂಧೂ ಅವರು ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಚೀನಾದ ಆರನೇ ಶ್ರೇಯಾಂಕಿತೆ ಥಾಯ್ಲೆಂಡ್‌ನ ಪಾರ್ನ್‌ಪಾವೆ ಚೊಚುವಾಂಗ್ ವಿರುದ್ಧ ನೇರ ಗೇಮ್‌ಗಳಿಂದ ಗೆದ್ದಿದ್ದರು. ಆ ಮೂಲಕ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಮಾಡಿದ್ದರು. 41 ನಿಮಿಷಗಳ ಕಾಲ ನಡೆದಿದ್ದ ಈ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ, 21-15, 21-15 ಅಂತರದಲ್ಲಿ ಥಾಯ್ಲೆಂಡ್ ಆಟಗಾರ್ತಿಯನ್ನು ಮಣಿಸಿದ್ದರು.