CWG 2026: ದಾಖಲೆಯ 7 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದ ಭಾರತೀಯ ಪ್ಯಾರಾ ಅಥ್ಲಿಟ್ಸ್!
ಗ್ಲಾಸ್ಗೋದಲ್ಲಿ ಇದೀಗ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲಿಟ್‌ಗಳು ಇತಿಹಾಸವನ್ನು ಬರೆದಿದ್ದಾರೆ. ಒಟ್ಟು 7 ಪದಕಗಳ ಮೂಲಕ ಭಾರತೀಯ ಪ್ಯಾರಾ ಕ್ರೀಡಾಪಟುಗಳು ತಮ್ಮ ಶ್ರೇಷ್ಠ ಸಾಧನೆಯ ಮೂಲಕ ಕ್ರೀಡಾಕೂಟದ ಅಭಿಯಾನವನ್ನು ಮುಗಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 7 ಪದಕಗಳನ್ನು ಗೆದ್ದ ಭಾರತೀಯ ಪ್ಯಾರಾ ಅಥ್ಲಿಟ್ಸ್. -
ಗ್ಲಾಸ್ಗೋ: ಇಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಪ್ಯಾರಾ ಅಥ್ಲಿಟ್‌ಗಳು (Para athletes Medals) ಶ್ರೇಷ್ಠ ಪ್ರದರ್ಶನವನ್ನು ತೋರಿದ್ದಾರೆ. ದಾಖಲೆಯ 7 ಪದಕಗಳ ಶ್ರೇಷ್ಠ ಸಾಧನೆಯ ಮೂಲಕ ಭಾರತೀಯ ಪ್ಯಾರಾ ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತನ್ನ ಅಭಿಯಾನವನ್ನುಮುಗಿಸಿದ್ದಾರೆ. ಇದರಲ್ಲಿ ಮೂರು ಚಿನ್ನದ ಪದಕಗಳು, ಎರಡು ಬೆಳ್ಳಿ ಪದಕಗಳು ಹಾಗೂ ಎರಡು ಕಂಚಿನ ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾಗಿವೆ. ಕಳೆದ 2022ರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಪ್ಯಾರಾ ಅಥ್ಲಿಟ್‌ಗಳು ಕೇವಲ ಮೂರು ಪದಕಗಳಿಗೆ ತೃಪ್ತಿಪಟ್ಟಿದ್ದರು. ಆದರೆ, ಇದೀಗ 7 ಪದಕಗಳ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.
ಶನಿವಾರ ಸ್ಕಾಟ್‌ಸ್ಟೌನ್ ಸ್ಟೇಡಿಯಂನಲ್ಲಿ ನಡೆದಿದ್ದ ಪುರುಷರ F57 ಶಾಟ್‌ಪುಟ್ ಫೈನಲ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿತು. ಭಾರತೀಯ ಸೇನೆಯ ಅನುಭವಿ ಅಥ್ಲಿಟ್ ಸೋಮನ್ ರಾಣಾ 13.40 ಮೀಟರ್ ದೂರಕ್ಕೆ ಶಾಟ್ ಎಸೆದು ಚಿನ್ನದ ಪದಕ ಗೆದ್ದರೆ, ಶುಭಂ ಜುಯಾಲ್ 13.28 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
CWG 2026: ಫೈನಲ್‌ನಲ್ಲಿ ಸೋತ ಜದುಮಣಿ ಸಿಂಗ್ ಮಾಂಡೆಂಗ್‌ಬಾಮ್‌ಗೆ ಬೆಳ್ಳಿ ಪದಕ, ಭಾರತಕ್ಕೆ 30ನೇ ಪದಕ!
ಈ ಡಬಲ್ ಪೋಡಿಯಂ ಸಾಧನೆಯು ಭಾರತದ ಅಥ್ಲೆಟಿಕ್ಸ್ ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿತು. ಭಾರತ ಗೆದ್ದ ಏಳು ಪದಕಗಳಲ್ಲಿ ಆರು ಪದಕಗಳು ಅಥ್ಲೆಟಿಕ್ಸ್ ವಿಭಾಗದಿಂದಲೇ ಬಂದಿರುವುದು ವಿಶೇಷ. ಸ್ಪರ್ಧೆಯ ಆರಂಭದಲ್ಲೇ ಭಾರತ 20 ವರ್ಷಗಳ ಬಳಿಕ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಪದಕದ ಬರವನ್ನು ಕೊನೆಗೊಳಿಸಿತ್ತು. ಆ ಯಶಸ್ಸಿನ ಆತ್ಮವಿಶ್ವಾಸದೊಂದಿಗೆ ಭಾರತೀಯ ಅಥ್ಲೀಟ್‌ಗಳು ಸತತವಾಗಿ ಉತ್ತಮ ಪ್ರದರ್ಶನ ನೀಡಿ ಪದಕಗಳ ಬೇಟೆಯಾಡಿದರು.
Warmest congratulations to our para athletes Soman Rana on winning Gold Medal and Shubham Juyal on securing Silver Medal in the Men's F57 Shot Put event at the Glasgow Commonwealth Games 2026.
— Om Birla (@ombirlakota) August 1, 2026
Wishing you both continued success as you keep inspiring India with your excellence.… pic.twitter.com/YzMqA0Hjti
ಝಂಡು ಕುಮಾರ್ ಪರಿಶ್ರಮಕ್ಕೆ ಪ್ರತಿಫಲ
ಅಂಕಿ-ಅಂಶಗಳಾಚೆಗೆ, ಈ ಅಭಿಯಾನ ಹಲವು ಸ್ಪೂರ್ತಿದಾಯಕ ವೈಯಕ್ತಿಕ ಹೋರಾಟಗಳಿಗೂ ಸಾಕ್ಷಿಯಾಯಿತು. ಪ್ಯಾರಾ ಪವರ್‌ಲಿಫ್ಟರ್ ಝಂಡು ಕುಮಾರ್ ಪುರುಷರ ಹೆವಿವೇಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಬಾಲ್ಯದಲ್ಲೇ ಪೋಲಿಯೊದಿಂದ ಬಳಲಿದ್ದ ಝಂಡು ಕುಮಾರ್, ತಮ್ಮ ತರಬೇತಿ ಮತ್ತು ಆಹಾರದ ವೆಚ್ಚವನ್ನು ಭರಿಸಲು ಬಿಹಾರದಲ್ಲಿ ಇ-ರಿಕ್ಷಾ ಓಡಿಸುವುದು ಹಾಗೂ ತರಕಾರಿ ಮಾರಾಟ ಮಾಡುವಂತಹ ಕಠಿಣ ಜೀವನ ನಡೆಸಿದ್ದರು. ತಮ್ಮ ಅವಿರತ ಪರಿಶ್ರಮ ಮತ್ತು ಛಲದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಿದ ಅವರ ಕಥೆ ಈ ಕ್ರೀಡಾಕೂಟದ ಅತ್ಯಂತ ಪ್ರೇರಣಾದಾಯಕ ಕ್ಷಣಗಳಲ್ಲಿ ಒಂದಾಗಿದೆ.
2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಪ್ಯಾರಾ ಅಥ್ಲಿಟ್‌ಗಳ ಪದಕಗಳು
ಸೋಮನ್ ರಾನಾ — ಚಿನ್ನದ ಪದಕ, ಪುರುಷರ ಶಾಟ್‌ಫುಟ್ ಎಸೆತ F57 (13.40m)
ಶರ್ಮಿಳಾ ಧನಕರ್ — ಚಿನ್ನದ ಪದಕ, ಮಹಿಳೆಯರ ಶಾಟ್ ಫುಟ್ F57 (9.81m)
ದಿಲಿಪ್ ಮಹದು ಗಾವಿತ್ —ಚಿನ್ನದ ಪದಕ, ಪುರುಷರ 100ಮೀ T47 (10.71s, Games Record)
ಶುಭಮನ್ ಜುಯಲ್ — ಬೆಳ್ಳಿ ಪದಕ, ಪುರುಷರ ಶಾಟ್‌ಫುಟ್ F57 (13.28m)
ಮೊಹಮ್ಮದ್ ಬಸಿಲ್ —ಬೆಳ್ಳಿ ಪದಕ, ಪುರುಷರ 100 ಮೀ T47
ಶಿಲ್ಪಾ ಶೈಲಾ —ಕಂಚಿನ ಪದಕ, ಮಹಿಳೆಯರ ಶಾಟ್ ಫುಟ್ F57
ಝಂಡು ಕುಮಾರ್ —ಕಂಚಿನ ಪದಕ, ಪುರುಷರ ಹೆವಿವೇಟ್ ಪ್ಯಾರಾ ಲಿಫ್ಟಿಂಗ್