ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Wimbledon 2026: ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿ ಫೈನಲ್‌ಗೇರಿದ ಯಾನಿಕ್‌ ಸಿನ್ನರ್‌!

2026ರ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೊವಾಕ್‌ ಜೊಕೊವಿಚ್‌ ಅವರ ಕನಸು ಭಗ್ನವಾಯಿತು. 24 ಬಾರಿ ಗ್ರ್ಯಾನ್‌ ವಿಜೇತ ಸರ್ಬಿಯಾ ಜೊಕವಿಚ್‌ ಅವರನ್ನು ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಯಾನಿಕ್‌ ಸಿನ್ನರ್‌ ಅಧಿಕಾರಯುತ ಪ್ರದರ್ಶನ ತೋರಿ, 3-0 ಅಂತರದಲ್ಲಿ ಸೋಲಿಸಿದರು. ಭಾನುವಾರ ಅಲೆಗ್ಸಾಂಡರ್‌ ಝ್ವೆರೆವ್‌ ಅವರ ವಿರುದ್ಧ ಫೈನಲ್‌ನಲ್ಲಿ ಯಾನಿಕ್‌ ಐದನೇ ಗ್ರ್ಯಾನ್‌ ಸ್ಲ್ಯಾಮ್‌ಗಾಗಿ ಕಾದಾಟ ನಡೆಸಲಿದ್ದಾರೆ.

ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿ ಫೈನಲ್‌ಗೇರಿದ ಯಾನಿಕ್‌ ಸಿನ್ನರ್‌!

ಯಾನಿಕ್‌ ಸಿನ್ನರ್‌ ಎದುರು ಮುಗ್ಗರಿಸಿದ ನೊವಾಕ್‌ ಜೊಕೊವಿಚ್‌. -

Profile
Ramesh Kote Jul 10, 2026 11:35 PM

ಲಂಡನ್‌: ವಿಶ್ವದ ಶ್ರೇಷ್ಠ ಟೆನಿಸ್‌ ಆಟಗಾರ ಹಾಗೂ 24 ಬಾರಿ ಗ್ರ್ಯಾಂಡ್‌ ಸ್ಲ್ಯಾಮ್‌ ವಿಜೇತ ನೊವಾಕ್‌ ಜೊಕೊವಿಚ್‌ (Novak Djokovic) ಅವರ 2026ರ ವಿಂಬಲ್ಡನ್‌ (Wimbledon 2026) ಗೆಲ್ಲುವ ಕನಸು ಭಗ್ನವಾಯಿತು. ಶುಕ್ರವಾರ ಇಲ್ಲಿನ ಸೆಂಟರ್‌ ಕೋರ್ಟ್‌ನಲ್ಲಿ ನಡೆದಿದ್ದ ಪುರುಷರ ಸಿಂಗಲ್ಸ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ 24ರ ಪ್ರಾಯದ ಯಾನಿಕ್‌ ಸಿನ್ನರ್‌ ಅವರು ಅಧಿಕಾರಯುತ ಪ್ರದರ್ಶನವನ್ನು ತೋರಿ 3-0 ಅಂತರದ ನೇರ ಸೆಟ್‌ಗಳಿಂದ 39ರ ಪ್ರಾಯದ ಸ್ಟಾರ್‌ ಆಟಗಾರನನ್ನು ಮಣಿಸಿದರು. ಆ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟರು. ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಅಲೆಗ್ಸಾಂಡರ್‌ ಝ್ವೆರೆವ್‌ ಅವರು ಆರ್ಥರ್‌ ಫೆರಿ ಅವರನ್ನು ಮಣಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಪಂದ್ಯದ ಮೂರು ಸೆಟ್‌ಗಳಲ್ಲೂ ಇಟಲಿಯ ಯಾನಿಕ್ ಸಿನರ್ ಒಂದೇ ರೀತಿಯ ಲಯವನ್ನು ಕಾಯ್ದುಕೊಂಡರು. ಜೊಕೊವಿಚ್‌ಗೆ ಯಾವುದೇ ಹಂತದಲ್ಲೂ ಪಂದ್ಯಕ್ಕೆ ಮರಳುವ ಅವಕಾಶ ನೀಡದೆ, 6-4, 6-4, 6-4 ಅಂತರದಲ್ಲಿ ಸತತ ಮೂರು ಸೆಟ್‌ಗಳನ್ನು ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟರು. ಈ ಸೋಲಿನ ಮೂಲಕ ಜೊಕೊವಿಚ್ ಅವರ ಐತಿಹಾಸಿಕ 25ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ.

ಐತಿಹಾಸಿಕ ಲಾರ್ಡ್ಸ್‌ ಟೆಸ್ಟ್‌ ವೇಳೆ ಮಿಥಾಲಿ ರಾಜ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಸ್ಮೃತಿ ಮಂಧಾನಾ!

ಪಂದ್ಯದುದ್ದಕ್ಕೂ ಜೊಕೊವಿಚ್ ಹಿನ್ನಡೆಯಿಂದ ಹೊರಬರಲು ಪರದಾಡಿದರೆ, ಮತ್ತೊಂದೆಡೆ ಸಿನರ್ ಅವರ ಶಕ್ತಿಶಾಲಿ ಶಾಟ್‌ಗಳು ಮತ್ತು ಅದ್ಭುತ ಕೋರ್ಟ್ ಕವರೇಜ್‌ಗೆ ಸರ್ಬಿಯಾ ದಿಗ್ಗಜರ ಬಳಿ ಉತ್ತರವೇ ಇರಲಿಲ್ಲ. ಸೆಮಿಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ನೇರ ಸೆಟ್‌ಗಳಲ್ಲಿ ದಾಖಲಿಸಿದ ಈ ಗೆಲುವು, ಸಿನರ್ ಅವರ ಅತ್ಯುತ್ತಮ ಫಾರ್ಮ್ ಮತ್ತು ವಿಶ್ವ ಟೆನಿಸ್‌ನಲ್ಲಿ ಹೆಚ್ಚುತ್ತಿರುವ ಪ್ರಾಬಲ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಆರ್ಥರ್‌ ಫೆರಿಯನ್ನು ಮಣಿಸಿದ ಅಲೆಕ್ಸಾಂಡರ್ ಝ್ವೆರೆವ್

ಇದಕ್ಕೂ ಮುನ್ನ ನಡೆದಿದ್ದ ಮೊದಲನೇ ಸೆಮಿಫೈನಲ್‌ ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಪ್ರಾಬಲ್ಯ ಸಾಧಿಸಿದ್ದರು. ಅವರು ವಿಂಬಲ್ಡನ್ 2026ರ ಪುರುಷರ ಸಿಂಗಲ್ಸ್ ಫೈನಲ್‌ಗೆ ಭರ್ಜರಿ ಎಂಟ್ರಿ ನೀಡಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಝ್ವೆರೆವ್, ಆರ್ಥರ್ ಫೆರಿಯನ್ನು 7-6(0), 6-2, 6-4 ನೇರ ಸೆಟ್‌ಗಳಲ್ಲಿ ಮಣಿಸಿ, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ವಿಂಬಲ್ಡನ್ ಫೈನಲ್‌ಗೆ ಪ್ರವೇಶಿಸಿದ್ದಾರೆ.



ಸೆಂಟರ್ ಕೋರ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಝ್ವೆರೆವ್, 23 ವರ್ಷದ ಬ್ರಿಟನ್‌ನ ಆರ್ಥರ್ ಫೆರಿಯನ್ನು ಅವರ ತವರಿನ ಅಭಿಮಾನಿಗಳ ಎದುರೇ ಸೋಲಿಸಿದರು. ಈ ಗೆಲುವಿನೊಂದಿಗೆ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳಲ್ಲಿ ಝ್ವೆರೆವ್ ಅವರ ಸತತ ಗೆಲುವಿನ ಸರಣಿ 13 ಪಂದ್ಯಗಳಿಗೆ ವಿಸ್ತರಿಸಿದೆ. ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಅವರು, ಇದೀಗ ತಮ್ಮ ಮೊದಲ ವಿಂಬಲ್ಡನ್ ಕಿರೀಟದಿಂದ ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.

ಪುರುಷರ ಸಿಂಗಲ್ಸ್‌ ಫೈನಲ್‌ ಯಾವಾಗ?

ಜಾನಿಕ್‌ ಸಿನ್ನರ್‌ ಹಾಗೂ ಅಲೆಕ್ಸಾಂಡರ್‌ ಝ್ವೆರೆವ್‌ ಅವರು ಭಾನುವಾರ ಇದೇ ಅಂಗಣದಲ್ಲಿ ನಡೆಯುವ 2026ರ ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಕಾದಾಟ ನಡೆಸಲಿದ್ದಾರೆ. ಈ ಪಂದ್ಯದ ಮೂಲಕ ಈ ಇಬ್ಬರಲ್ಲಿ ಒಬ್ಬರು ಚಾಂಪಿಯನ್‌ ಆಗಲಿದ್ದಾರೆ.