IPL 2026: ನಾಯಕನಾಗಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆ ಮುರಿದ ಪ್ಯಾಟ್ ಕಮ್ಮಿನ್ಸ್
Pat Cummins Creates History: ಕಮ್ಮಿನ್ಸ್ ಐಪಿಎಲ್ ವೃತ್ತಿಜೀವನದಲ್ಲಿ ನಾಯಕನಾಗಿ ಐದನೇ ಮೂರು ವಿಕೆಟ್ ಗೊಂಚಲು ಇದಾಗಿದೆ. ವಾರ್ನ್ ನಂತರ ಈ ಸಾಧನೆ ಮಾಡಿದ ಎರಡನೇ ನಾಯಕ ಮತ್ತು ಈ ಸಾಧನೆ ಮಾಡಿದ ಮೊದಲ ವೇಗಿ ಎಂಬ ಹೆಗ್ಗಳಿಕೆ ಅವರದು. ಲೀಗ್‌ನಲ್ಲಿ ತಂಡವನ್ನು ಮುನ್ನಡೆಸುವಾಗ ಇಲ್ಲಿಯವರೆಗೆ ಯಾವುದೇ ವೇಗದ ಬೌಲರ್ ನಾಲ್ಕು, ಮೂರು ವಿಕೆಟ್‌ಗಳನ್ನು ಪಡೆದಿಲ್ಲ.
Pat Cummins Creates History -
ಚೆನ್ನೈ, ಮೇ 19: ಸೋಮವಾರ (ಮೇ 18) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2026) ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH)ನ ನಾಯಕ ಪ್ಯಾಟ್ ಕಮ್ಮಿನ್ಸ್(Pat Cummins) ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಹಾರ್ದಿಕ್ ಪಾಂಡ್ಯ ಅವರ ದಾಖಲೆಯನ್ನು ಮುರಿದರು.
ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 28 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ವಿಕೆಟ್ ಕಿತ್ತ ಎರಡನೇ ಬೌಲರ್ ಎನಿಸಿದರು. ಕಮಿನ್ಸ್ ಸದ್ಯ 42* ವಿಕೆಟ್ ಕಿತ್ತಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ 40* ವಿಕೆಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಈಗ ಅವರು ಮೂರನೇ ಸ್ಥಾನಕ್ಕೆ ಕುಸಿದರು. ದಾಖಲೆ ಶೇನ್ ವಾರ್ನ್ ಹೆಸರಿನಲ್ಲಿದೆ. ಅವರು 58 ವಿಕೆಟ್ ಕಿತ್ತಿದ್ದಾರೆ.
ಏತನ್ಮಧ್ಯೆ, ಕಮ್ಮಿನ್ಸ್ ಐಪಿಎಲ್ ವೃತ್ತಿಜೀವನದಲ್ಲಿ ನಾಯಕನಾಗಿ ಐದನೇ ಮೂರು ವಿಕೆಟ್ ಗೊಂಚಲು ಇದಾಗಿದೆ. ವಾರ್ನ್ ನಂತರ ಈ ಸಾಧನೆ ಮಾಡಿದ ಎರಡನೇ ನಾಯಕ ಮತ್ತು ಈ ಸಾಧನೆ ಮಾಡಿದ ಮೊದಲ ವೇಗಿ ಎಂಬ ಹೆಗ್ಗಳಿಕೆ ಅವರದು. ಲೀಗ್‌ನಲ್ಲಿ ತಂಡವನ್ನು ಮುನ್ನಡೆಸುವಾಗ ಇಲ್ಲಿಯವರೆಗೆ ಯಾವುದೇ ವೇಗದ ಬೌಲರ್ ನಾಲ್ಕು, ಮೂರು ವಿಕೆಟ್‌ಗಳನ್ನು ಪಡೆದಿಲ್ಲ.
CSK vs SRH: ಮೈದಾನದಲ್ಲೇ ವಾಗ್ವಾದ ನಡೆಸಿದ ಸಂಜು-ಕ್ಲಾಸೆನ್; ವಿಡಿಯೊ ವೈರಲ್
ಸೂಪರ್ ಕಿಂಗ್ಸ್ ವಿರುದ್ಧ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದ ಮೊದಲ ವೇಗಿ-ಬೌಲಿಂಗ್ ನಾಯಕ ಎಂಬ ಹೆಗ್ಗಳಿಕೆಗೆ ಕಮ್ಮಿನ್ಸ್ ಪಾತ್ರರಾದರು. ರವಿಚಂದ್ರನ್ ಅಶ್ವಿನ್ ನಂತರ ಸೂಪರ್ ಕಿಂಗ್ಸ್ ವಿರುದ್ಧ ನಾಯಕನೊಬ್ಬ ಗಳಿಸಿದ ಎರಡನೇ ಅತ್ಯುತ್ತಮ ಅಂಕಿಅಂಶಗಳನ್ನು ಅವರು ದಾಖಲಿಸಿದರು. ಲೀಗ್ ಇತಿಹಾಸದಲ್ಲಿ ಸಿಎಸ್‌ಕೆ ವಿರುದ್ಧ ಮೂರು ವಿಕೆಟ್ ಪಡೆದ ಏಕೈಕ ನಾಯಕರು ಈ ಇಬ್ಬರು ಆಟಗಾರರು.
ಐಪಿಎಲ್ ಇತಿಹಾಸದಲ್ಲಿ ನಾಯಕರಿಂದ ಅತಿ ಹೆಚ್ಚು ವಿಕೆಟ್‌ಗಳು
ಶೇನ್ ವಾರ್ನ್-58
ಪ್ಯಾಟ್ ಕಮ್ಮಿನ್ಸ್-42
ಹಾರ್ದಿಕ್ ಪಾಂಡ್ಯ-40
ಅನಿಲ್ ಕುಂಬ್ಳೆ-30
ರವಿಚಂದ್ರನ್ ಅಶ್ವಿನ್-20
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೂರು ವಿಕೆಟ್ ಪಡೆದ ನಾಯಕರು
ಪ್ಯಾಟ್ ಕಮ್ಮಿನ್ಸ್- 5 ಬಾರಿ
ಶೇನ್ ವಾರ್ನ್- 5 ಬಾರಿ
ಅನಿಲ್ ಕುಂಬ್ಳೆ- 3 ಬಾರಿ
ಹಾರ್ದಿಕ್ ಪಾಂಡ್ಯ- 3 ಬಾರಿ
ಯುವರಾಜ್ ಸಿಂಗ್- 3 ಬಾರಿ