ಏಷ್ಯನ್ ಗೇಮ್ಸ್ ಗಾಲ್ಫ್; ಐತಿಹಾಸಿಕ ಚಿನ್ನ ಗೆದ್ದ ಮೈಸೂರಿನ ಪ್ರಣವಿ ಉರ್ಸ್
Pranavi Urs: ಮೈಸೂರಿನಲ್ಲಿ ಜನಿಸಿದ ಈ ಗಾಲ್ಫ್ ಆಟಗಾರ್ತಿ, ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ ತಮ್ಮ ತಂದೆ ಮತ್ತು ಸಹೋದರರು ಆಡುವುದನ್ನು ನೋಡಿದ ನಂತರ, ಅವರು ತಮ್ಮ ಆರನೇ ವಯಸ್ಸಿನಲ್ಲಿ ಗಾಲ್ಫ್ ಆಡಲು ಪ್ರಾರಂಭಿಸಿದರು. ಪ್ರಣವಿ ಜೂನಿಯರ್ ಮತ್ತು ಹವ್ಯಾಸಿ ಗಾಲ್ಫ್ ಸ್ಪರ್ಧಾಕೂಟಗಳ ಮೂಲಕ ತಮ್ಮ ಕೌಶಲವನ್ನು ಬೆಳೆಸಿಕೊಂಡರು.
Pranavi Urs -
ನಗೋಯಾ, ಅ.3: ಕನ್ನಡತಿ, ಮೈಸೂರಿನ ಪ್ರಣವಿ ಉರ್ಸ್ ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಗಾಲ್ಫ್ ಸ್ಫರ್ಧೆಯಲ್ಲಿ ದೇಶಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದೇ ವೇಳೆ ಏಷ್ಯನ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು.
ಇದಕ್ಕೂ ಮುನ್ನ ನಡೆದಿದ್ದ ಮಹಿಳೆಯರ ತಂಡದ ವಿಭಾಗದಲ್ಲಿ ಭಾರತವು ಬೆಳ್ಳಿ ಪದಕ ಗೆಲ್ಲುವಲ್ಲಿಯೂ ಪ್ರಣವಿ ಸಹಕರಿಸಿದ್ದರು. ಈ ಕ್ರೀಡಾಕೂಟದಲ್ಲಿ ತಮ್ಮ ಪದಕಗಳ ಸಂಖ್ಯೆಯನ್ನು ಎರಡಕ್ಕೇರಿಸಿಕೊಂಡರು. ಪ್ರಣವಿ ಉರ್ಸ್ ಅವರು '15-ಅಂಡರ್ 265' ಅಂಕಗಳೊಂದಿಗೆ ಭಾರತಕ್ಕೆ ಮೊಟ್ಟಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದುಕೊಟ್ಟರು.
ಸಚಿನ್ ತೆಂಡೂಲ್ಕರ್ ಜತೆ ಎಲೈಟ್ ಪಟ್ಟಿ ಸೇರಲು ರೋಹಿತ್‌ಗೆ 2 ರನ್ ಅಗತ್ಯ
ಮೈಸೂರಿನಲ್ಲಿ ಜನಿಸಿದ ಈ ಗಾಲ್ಫ್ ಆಟಗಾರ್ತಿ, ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ ತಮ್ಮ ತಂದೆ ಮತ್ತು ಸಹೋದರರು ಆಡುವುದನ್ನು ನೋಡಿದ ನಂತರ, ಅವರು ತಮ್ಮ ಆರನೇ ವಯಸ್ಸಿನಲ್ಲಿ ಗಾಲ್ಫ್ ಆಡಲು ಪ್ರಾರಂಭಿಸಿದರು. ಪ್ರಣವಿ ಜೂನಿಯರ್ ಮತ್ತು ಹವ್ಯಾಸಿ ಗಾಲ್ಫ್ ಸ್ಪರ್ಧಾಕೂಟಗಳ ಮೂಲಕ ತಮ್ಮ ಕೌಶಲವನ್ನು ಬೆಳೆಸಿಕೊಂಡರು. ಈ ಹಂತದಲ್ಲಿ ಅವರು ಥೈಲ್ಯಾಂಡ್‌ನಲ್ಲಿ ನಡೆದ 2018ರ 'ಸಿಂಗ್ಹಾ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್' ಮತ್ತು 'ಆಲ್ ಇಂಡಿಯಾ ಜೂನಿಯರ್ ಗರ್ಲ್ಸ್ ಚಾಂಪಿಯನ್‌ಶಿಪ್' ಸೇರಿದಂತೆ ಹಲವು ಪ್ರಮುಖ ಸಾಧನೆಗಳನ್ನು ಮಾಡಿದರು.
INDIA'S FIRST-EVER ASIAN GAMES WOMEN'S GOLF CHAMPION 🥇🇮🇳
— Olympic Khel ™ (@OlympicKhel) October 3, 2026
Pranavi Sharath Urs makes history as India’s first #AsianGames gold medallist in women's individual golf at #AichiNagoya2026. 👏 pic.twitter.com/CL4pyhr3E4
2020ರಲ್ಲಿ ವೃತ್ತಿಪರ ಗಾಲ್ಫ್ ಆಟಗಾರ್ತಿಯಾಗಿ ಹೊರಹೊಮ್ಮಿದ ಅವರು, ದೇಶೀಯ ಮಹಿಳಾ ವೃತ್ತಿಪರ ಗಾಲ್ಫ್ ಕೂಟಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸಲು ಪ್ರಾರಂಭಿಸಿದರು. ಪ್ರಣವಿ 2023ರಲ್ಲಿ ನಡೆದ ಹಾಂಗ್‌ಝೌ ಏಷ್ಯನ್ ಗೇಮ್ಸ್ 2022ರಲ್ಲಿ ಮಹಿಳೆಯರ ವೈಯಕ್ತಿಕ ಮತ್ತು ಮಹಿಳೆಯರ ತಂಡದ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ತದನಂತರ, ಅವರು 'ಲೇಡೀಸ್ ಯುರೋಪಿಯನ್ ಟೂರ್' (LET) ಮತ್ತು ಇತರ ವೃತ್ತಿಪರ ಟೂರ್‌ಗಳಲ್ಲಿ ಸ್ಪರ್ಧಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.