ರಣಜಿ ಫೈನಲ್; 293 ರನ್‌ಗೆ ಕರ್ನಾಟಕ ಆಲೌಟ್, 302 ರನ್ ಲೀಡ್ ಪಡೆದ ಜಮ್ಮು-ಕಾಶ್ಮೀರ
Ranji Trophy Final 2026: ಜಮ್ಮು- ಕಾಶ್ಮೀರ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಔಕಿಬ್ ನಬಿ ದಾರ್ 54ರನ್‌ಗೆ 5 ವಿಕೆಟ್ ಕಿತ್ತರು. ಉಳಿದಂತೆ ಸುನಿಲ್ ಕುಮಾರ್ ಮತ್ತು ಯುಧ್ವೀರ್ ಸಿಂಗ್ ಚರಕ್ ತಲಾ 2 ವಿಕೆಟ್ ಕಿತ್ತರು. ಸದ್ಯ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಜಮ್ಮು- ಕಾಶ್ಮೀರ 2 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ನಡೆಸುತ್ತಿದೆ.
Ranji Trophy Final 2026 -
ಹುಬ್ಬಳ್ಳಿ, ಫೆ.27: ಇಲ್ಲಿನ ಕೆಎಸ್‌ಸಿಎ ರಾಜನಗರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನ ನಾಲ್ಕನೇ ದಿನದಾಟದಲ್ಲಿ ಕರ್ನಾಟಕ( Karnataka vs Jammu & Kashmir)ವನ್ನು 293 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡವು ನಿರ್ಣಾಯಕ ಮೊದಲ ಇನ್ನಿಂಗ್ಸ್‌ನಲ್ಲಿ 302 ರನ್‌ಗಳ ಭಾರೀ ಮುನ್ನಡೆ ಸಾಧಿಸಿದೆ. ಈ ಮುನ್ನಡೆಯೊಂದಿಗೆ ಜಮ್ಮು-ಕಾಶ್ಮೀರ ತಂಡ ಐತಿಹಾಸಿಕ ರಣಜಿ ಟ್ರೋಫಿ(Ranji Trophy Final 2026) ಎತ್ತಿ ಹಿಡಿಯುವ ಸನಿಹದಲ್ಲಿದೆ. ಪವಾಡವೊಂದು ಸಂಭವಿಸಿದರಷ್ಟೇ ಕರ್ನಾಟಕ ತಂಡ ಗೆಲುವು ಸಾಧಿಸಬಹುದು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜಮ್ಮು- ಕಾಶ್ಮೀರ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ 584 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಗುರುವಾರ 3 ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತ್ತು. ಶುಕ್ರವಾರ ನಾಲ್ಕನೇ ದಿನದಾಟ ಆರಂಭಿಸಿದ ತಂಡ 293 ರನ್‌ಗೆ ಆಲೌಟ್ ಆಯಿತು. ಕೇವಲ 73 ರನ್ ಮಾತ್ರ ಗಳಿಸಿತು. ಶತಕ ಬಾರಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಮಯಾಂಕ್ ಅಗರ್ವಾಲ್ 160 ರನ್ ಬಾರಿಸಿ ಔಟಾದರು. ಅವರ ಏಕಾಂಗಿ ಬ್ಯಾಟಿಂಗ್ ನೆರವಿನಿಂದ ತಂಡ 200ರ ಗಡಿ ದಾಟಿತು. ನಾಲ್ಕನೇ ದಿನದಾಟದಲ್ಲಿ ವಿಕೆಟ್ ಕೀಪರ್ ಕೃತಿಕ್ ಕೃಷ್ಣ 36 ರನ್ ಗಳಿಸಿದರು.
ಜಮ್ಮು- ಕಾಶ್ಮೀರ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಔಕಿಬ್ ನಬಿ ದಾರ್ 54ರನ್‌ಗೆ 5 ವಿಕೆಟ್ ಕಿತ್ತರು. ಉಳಿದಂತೆ ಸುನಿಲ್ ಕುಮಾರ್ ಮತ್ತು ಯುಧ್ವೀರ್ ಸಿಂಗ್ ಚರಕ್ ತಲಾ 2 ವಿಕೆಟ್ ಕಿತ್ತರು. ಸದ್ಯ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಜಮ್ಮು- ಕಾಶ್ಮೀರ 2 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ನಡೆಸುತ್ತಿದೆ.
ಮೈದಾನದಿಂದಲೇ ಮಹಿಕಾ ಶರ್ಮಗೆ ಫ್ಲೈಯಿಂಗ್ ಕಿಸ್ ನೀಡಿದ ಪಾಂಡ್ಯ; ವಿಡಿಯೊ ವೈರಲ್
ಸಿ.ಎಂ ಒಮರ್ ಅಬ್ದುಲ್ಲಾ ಹಾಜರ್!
ಫೈನಲ್ ಪಂದ್ಯ ವೀಕ್ಷಣೆಗೆ ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗಮಿಸಲಿದ್ದಾರೆ. ಶುಕ್ರವಾರ ಸಂಜೆ 7.20ಕ್ಕೆ ಹುಬ್ಬಳ್ಳಿಗೆ ಬರುವ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಐದನೇ ದಿನದ ಆಟ ವೀಕ್ಷಿಸಲಿದ್ದಾರೆ. ಮೈದಾನದಲ್ಲಿ ಈಗಲೇ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.