IPL 2026: 4 ವಿಕೆಟ್ ಕಿತ್ತು ಆರ್‌ಸಿಬಿ ಡೆತ್ ಬೌಲಿಂಗ್ ಬಲ ಹೆಚ್ಚಿಸಿದ ರಸಿಖ್ ದಾರ್ ಸಲಾಂ ಯಾರು?
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಅವಕಾಶ ವಂಚಿತನಾಗಿದ್ದ ಯುವ ವೇಗಿ ರಸಿಖ್ ದಾರ್ ಸಲಾಮ್ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ XIಗೆ ಬಂದ ಬಳಿಕ ಅವರು ಪರಿಣಾಮಕಾರಿಯಾಗಿದ್ದಾರೆ. ಅವರು ಲಖನೌ ಸೂಪರ್ ಜಯಂಟ್ಸ್ ವಿರುದ್ಧ 4 ವಿಕೆಟ್ ಸಾಧನೆ ಮಾಡಿದ್ದಾರೆ.
ಎಲ್‌ಎಸ್‌ಜಿ ವಿರುದ್ಧ ರಸಿಖ್ ದಾರ್ ಸಲಾಮ್ 4 ವಿಕೆಟ್ ಸಾಧನೆ ಮಾಡಿದರು. -
ಬೆಂಗಳೂರು: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 23ನೇ ಪಂದ್ಯದಲ್ಲಿ (RCB vs LSG) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ವೇಗಿ ರಸಿಖ್ ದಾರ್ ಸಲಾಮ್ (Rasikh Dar Salam) ಅವರು ಚುರುಕಾದ ಬೌಲಿಂಗ್ ಪ್ರದರ್ಶನವನ್ನು ತೋರಿದರು. ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಇವರು ತಮ್ಮ ಐಪಿಎಲ್ ವೃತ್ತಿ ಜೀವನದ ಚೊಚ್ಚಲ 4 ವಿಕೆಟ್ ಸಾಧನೆ ಮಾಡಿದರು ಹಾಗೂ ಎದುರಾಳಿ ಎಲ್‌ಎಸ್‌ಜಿ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಕಟ್ಟಿ ಹಾಕಲು ನೆರವು ನೀಡಿದರು.
ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ನಿರ್ಧಾರವನ್ನು ಬೌಲರ್‌ಗಳು, ವಿಶೇಷವಾಗಿ ಭುವನೇಶ್ವರ್ ಕುಮಾರ್ ಹಾಗೂ ರಸಿಖ್ ದಾರ್ ಸಲಾಮ್ ಸಮರ್ಥಿಸಿಕೊಂಡರು. ಭುವನೇಶ್ವರ್ ಕುಮಾರ್ (4-27-3) ಅವರು ಮೂರು ವಿಕೆಟ್‌ಗಳನ್ನು ಪಡೆದರೆ, ಇವರ ಹೊಸ ಚೆಂಡಿನ ಜೊತೆಗಾರ ಜಾಶ್ ಹೇಝಲ್‌ವುಡ್ (4-20-01) ಅದ್ಭುತ ಎಕಾನಮಿ ಸ್ಪೆಲ್ ಹಾಕಿದರು.
RCB vs LSG: ಲಖನೌ ಪಂದ್ಯದ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ವಿರಾಟ್ ಕೊಹ್ಲಿ ಏಕಿಲ್ಲ? ಇಲ್ಲಿದೆ ಕಾರಣ!
ಪರಿಣಾಮಕಾರಿಯಾಗದ ಅಭಿನಂದನ್ ಸಿಂಗ್
ಆರ್‌ಸಿಬಿ ತಂಡದ ಆರಂಭಿಕ ಮೂರು ಪಂದ್ಯಗಳಲ್ಲಿ ಯಶ್ ದಯಾಳ್ ಅವರ ಸ್ಥಾನದಲ್ಲಿ ಅಭಿನಂದನ್ ಸಿಂಗ್ ಅವರು ಪ್ಲೇಯಿಂಗ್ XIನಲ್ಲಿ ಆಡಿದ್ದರು. ಆದರೆ, ಅವರು ತಮ್ಮ ವೇಗದ ಬೌಲಿಂಗ್‌ನಲ್ಲಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು ಹಾಗೂ ಪಂದ್ಯದ ಒತ್ತಡವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲನೇ ಪಂದ್ಯದಲ್ಲಿ 38 ರನ್‌ಗಳಿಗೆ ಒಂದು ವಿಕೆಟ್, ಚೆನ್ನೈ ಸೂಪರ್ ಕಿಂಗ್ಸ್ ಎದುರು ಎರಡನೇ ಪಂದ್ಯದಲ್ಲಿ 30 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೂರನೇ ಪಂದ್ಯದಲ್ಲಿ ಕೇವಲ 3 ಓವರ್‌ಗಳಿಗೆ ವಿಕೆಟ್ ಪಡೆಯದೆ 54 ರನ್‌ಗಳನ್ನು ನೀಡಿದ್ದರು.
RCB vs LSG: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಚೊಚ್ಚಲ 4 ವಿಕೆಟ್ ಕಿತ್ತ ರಸಿಖ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಭಿನಂದನ್ ಸ್ಥಾನದಲ್ಲಿ ಆಡಿದ್ದ ರಸಿಖ್ ದಾರ್ ಸಲಾಮ್ 27 ರನ್‌ಗೆ ಒಂದು ಕಿತ್ತು ತಮ್ಮ ಬೌಲಿಂಗ್ ಕೌಶಲದ ಮೂಲಕ ಭರವಸೆ ಮೂಡಿಸಿದ್ದರು. ಅದರಂತೆ ಲಖನೌ ಎದುರು ಬಲಗೈ ವೇಗಿ ಮಧ್ಯಮ ಹಾಗೂ ಡೆತ್ ಓವರ್‌ಗಳಲ್ಲಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿದರು. ಬೌಲಿಂಗ್‌ನಲ್ಲಿ ಅತ್ಯಂತ ವಿಶ್ವಾಸದಲ್ಲಿ ಕಂಡುಬಂದ ಯುವ ವೇಗಿ, ಪಿಚ್‌ನ ಕಂಡೀಷನ್ಸ್ ಅರ್ಥ ಮಾಡಿಕೊಂಡು, ಬ್ಯಾಟ್ಸ್‌ಮನ್‌ಗಳಿಗೆ ತ್ವರಿತವಾಗಿ ಯೋಜನೆ ರೂಪಿಸಿ ಯಶಸ್ವಿಯಾದರು.
IPL, welcome to Rasikh Dar! 😤 pic.twitter.com/9AH9xD5WL6
— Royal Challengers Bengaluru (@RCBTweets) April 15, 2026
ಅದಲ್ಲಿಯೂ ವಿಶೇಷವಾಗಿ ಅವರು ತಮ್ಮ ಆರೂ ಎಸೆತಗಳನ್ನು ವಿಭಿನ್ನವಾಗಿ ಹಾಕಿದ್ದಾರೆ. ವಿಶೇಷವಾಗಿ ಅವರ ಡೆತ್ ಓವರ್‌ಗಳಲ್ಲಿನ ಕೌಶಲ ಕಳೆದ ಸೀಸನ್‌ನಿಂತಲೂ ಈ ಬಾರಿ ಅತ್ಯಂತ ವಿಭಿನ್ನವಾಗಿತ್ತು. ಅವರು 20ನೇ ಓವರ್‌ನಲ್ಲಿ ಕೇವಲ 7 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದು ಇದಕ್ಕೆ ಸಾಕ್ಷಿ. ಒಟ್ಟಾರೆ ಅವರು ಬೌಲ್ ಮಾಡಿದ 4 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ ಏಡೆನ್ ಮಾರ್ಕ್ರಮ್, ಆಯುಷ್ ಬದೋನಿ, ಮುಕುಲ್ ಚೌಧರಿ ಹಾಗೂ ಆವೇಶ ಖಾನ್ ಅವರನ್ನು ಔಟ್ ಮಾಡಿದರು.
Proper bowling performance tonight to restrict the visitors to 1️⃣4️⃣6️⃣ on this Chinnaswamy track. 👏🤩
— Royal Challengers Bengaluru (@RCBTweets) April 15, 2026
Time to come 🔙 and chase it down. 🔥#PlayBold #ನಮ್ಮRCB #IPL2026 #RCBvLSG pic.twitter.com/9uWZcUK9bb
ರಸಿಖ್ ದಾರ್ ಸಲಾಮ್ ಯಾರು?
ರಸಿಖ್ ದಾರ್ ಸಲಾಮ್ ಅವರು 2000ರ ಏಪ್ರಿಲ್ 5 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ್ದರು. ಅವರು ಸದ್ಯ ಬರೋಡ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು 2019ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಆ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. 2022ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ನಂತರ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ಆರ್‌ಸಿಬಿ ಖರೀದಿಸಿತ್ತು ಹಾಗೂ ಆ ಸೀಸನ್‌ನಲ್ಲಿ ರಸಿಖ್ ತಮ್ಮ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದರು.