ಟೆಸ್ಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ ರವೀಂದ್ರ ಜಡೇಜಾ
Ravindra Jadeja: ರವೀಂದ್ರ ಜಡೇಜಾ(27), ಜುರೇಲ್(14) ಮತ್ತು ಅಕ್ಷರ್ ಪಟೇಲ್(16) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸುವಲ್ಲಿ ವಿಫಲರಾದರು. ಪ್ರವಾಸಿ ತಂಡದ ಪರ ಸೈಮನ್ ಹಾರ್ಮರ್ ಘಾತಕ ಬೌಲಿಂಗ್ ದಾಳಿಯ ಮೂಲಕ 4 ವಿಕೆಟ್ ಕಿತ್ತು ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಇವರಿಗೆ ಮತೋರ್ವ ವೇಗಿ ಮಾರ್ಕೊ ಜಾನ್ಸೆನ್ ಉತ್ತಮ ಸಾಥ್ ನೀಡಿದರು. ಅವರು 35ಕ್ಕೆ 3 ವಿಕೆಟ್ ಕೆಡವಿದರು.
ಟೆಸ್ಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ ರವೀಂದ್ರ ಜಡೇಜಾ -
ಕೋಲ್ಕತಾ: ಟೀಮ್ ಇಂಡಿಯಾದ ಸ್ಟಾರ್ ಆಲ್‌ಲೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಮತ್ತು 300 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಹಾಗೂ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಪಿಲ್ ದೇವ್ ಮೊದಲಿಗ. ವಿಶ್ವದ ನಂ. 1 ಟೆಸ್ಟ್ ಆಲ್‌ರೌಂಡರ್ ಆಗಿರುವ ಜಡೇಜಾ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್(India vs South Africa 1st Test) ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು.
ತಮ್ಮ 88ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜಡೇಜಾ, 4000 ರನ್‌ಗಳ ಗಡಿ ತಲುಪಲು ಕೇವಲ 10 ರನ್‌ಗಳ ಅಗತ್ಯವಿತ್ತು. ಈಗಾಗಲೇ 338 ಕ್ಕೂ ಹೆಚ್ಚು ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಹೊಂದಿರುವ 36 ವರ್ಷದ ಜಡೇಜಾ, ಕಪಿಲ್ ದೇವ್, ಇಯಾನ್ ಬೋಥಮ್ ಮತ್ತು ಡೇನಿಯಲ್ ವೆಟ್ಟೋರಿ ಅವರ ವಿಶೇಷ ಪಟ್ಟಿಗೆ ಸೇರಿದರು. ಅತಿ ಕಡಿಮೆ ಇನಿಂಗ್ಸ್ ಲೆಕ್ಕಾಚಾರದಲ್ಲಿ ಬೋಥಮ್ ಮುಂದಿದ್ದಾರೆ. ಅವರು ತಮ್ಮ 72 ನೇ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು.
4000 ಟೆಸ್ಟ್ ರನ್ ಮತ್ತು 300 ಟೆಸ್ಟ್ ವಿಕೆಟ್ ಪಡೆದ ಆಟಗಾರರು
ಕಪಿಲ್ ದೇವ್ - 5248 ರನ್‌ಗಳು, 434 ವಿಕೆಟ್‌ಗಳು
ಇಯಾನ್ ಬೋಥಮ್- 5200 ರನ್‌ಗಳು, 383 ವಿಕೆಟ್‌ಗಳು
ಡೇನಿಯಲ್ ವೆಟ್ಟೋರಿ- 4531 ರನ್‌ಗಳು, 362 ವಿಕೆಟ್‌ಗಳು
ರವೀಂದ್ರ ಜಡೇಜ 4000 ರನ್‌ಗಳು, 338 ವಿಕೆಟ್‌ಗಳು*
ತಮ್ಮ ವೃತ್ತಿಜೀವನದುದ್ದಕ್ಕೂ, ಜಡೇಜಾ ಬ್ಯಾಟಿಂಗ್‌ನಲ್ಲಿ ಆರು ಶತಕಗಳು ಮತ್ತು 27 ಅರ್ಧಶತಕಗಳೊಂದಿಗೆ 38 ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ. ಬೌಲಿಂಗ್‌ನಲ್ಲಿ 331 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 15 ಐದು ವಿಕೆಟ್ ಗೊಂಚಲುಗಳು ಸೇರಿವೆ.
189 ರನ್‌ಗೆ ಭಾರತ ಆಲೌಟ್
1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ಭಾರತ 189ರನ್‌ಗೆ ಆಲೌಟ್ ಆಗುವ ಮೂಲಕ 30 ರನ್ ಮುನ್ನಡೆ ಸಾಧಿಸಿತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 159 ರನ್‌ಗೆ ಆಲೌಟ್ ಆಗಿತ್ತು. 13 ರನ್ ಗಳಿಸಿದ್ದ ರಾಹುಲ್ ತಮ್ಮ ಮೊತ್ತವನ್ನು 39ಕ್ಕೆ ವಿಸ್ತರಿಸಿದರು. ತಂಡದ ಪರ ಅವರದ್ದೇ ಅತ್ಯಧಿಕ ಗಳಿಕೆ. ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಈ ಸಾಧನೆಗೈದ 18ನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಅತ್ಯಧಿಕ ರನ್ ಕಲೆಹಾಕಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್(15921 ರನ್) ಹೆಸರಿನಲ್ಲಿದೆ. ರಾಹುಲ್ ದ್ರಾವಿಡ್(13265) ದ್ವಿತೀಯ ಸ್ಥಾನದಲ್ಲಿದ್ದಾರೆ.
Brilliant work from Dhruv Jurel at forward short-leg 👌
— BCCI (@BCCI) November 15, 2025
Ravindra Jadeja with wicket 🙌🙌
Updates ▶️ https://t.co/okTBo3qxVH #TeamIndia | #INDvSA | @IDFCFIRSTBank pic.twitter.com/uvd1iqi6nI
ನಾಯಕ ಶುಭಮನ್ ಗಿಲ್ ಅವರು ಸ್ವೀಪ್ ಮಾಡುವ ಪ್ರಯತ್ನದಲ್ಲಿ ಕುತ್ತಿಗೆ ಉಳುಕಿನ ಗಾಯಕ್ಕೆ ತುತ್ತಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದರು. ಬಳಿಕ ಅವರು ಬ್ಯಾಟಿಂಗ್ ನಡೆಸಲಿಲ್ಲ. ಇದು ಕೂಡ ಭಾರತಕ್ಕೆ ಹಿನ್ನಡೆಯಾಯಿತು. ವಾಷಿಂಗ್ಟನ್ ಸುಂದರ್ 29 ರನ್ ಬಾರಿಸಿದರು.
ಇದನ್ನೂ ಓದಿ ಟ್ರೇಡಿಂಗ್ ಮೂಲಕ ಹಲವು ಫ್ರಾಂಚೈಸಿ ಸೇರಿದ ಆಟಗಾರರ ಪಟ್ಟಿ ಇಲ್ಲಿದೆ
ಬಳಿಕ ಪಂತ್ ಎಂದಿನಂತೆ ಬಿರುಸಿನ ಬ್ಯಾಟಿಂಗ್ ಮೂಲಕ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 27ರನ್‌ಗೆ ಆಟ ಮುಗಿಸಿದರು. ರವೀಂದ್ರ ಜಡೇಜಾ(27), ಜುರೇಲ್(14) ಮತ್ತು ಅಕ್ಷರ್ ಪಟೇಲ್(16) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸುವಲ್ಲಿ ವಿಫಲರಾದರು. ಪ್ರವಾಸಿ ತಂಡದ ಪರ ಸೈಮನ್ ಹಾರ್ಮರ್ ಘಾತಕ ಬೌಲಿಂಗ್ ದಾಳಿಯ ಮೂಲಕ 4 ವಿಕೆಟ್ ಕಿತ್ತು ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಇವರಿಗೆ ಮತೋರ್ವ ವೇಗಿ ಮಾರ್ಕೊ ಜಾನ್ಸೆನ್ ಉತ್ತಮ ಸಾಥ್ ನೀಡಿದರು. ಅವರು 35ಕ್ಕೆ 3 ವಿಕೆಟ್ ಕೆಡವಿದರು.