Shubman Gill: ಕುತ್ತಿಗೆ ಉಳುಕು; ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದ ಶುಭಮನ್ ಗಿಲ್
15 ರನ್ ಪೂರ್ತಿಗೊಳಿಸುತ್ತಿದ್ದಂತೆ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಭಾರತ ತಂಡದ ಪರ ಟೆಸ್ಟ್‌ನಲ್ಲಿ 4 ಸಾವಿರ ಪ್ಲಸ್ ಮೊತ್ತ ದಾಖಲಿಸಿದ 18ನೇ ಬ್ಯಾಟರ್ ಎನಿಸಿಕೊಂಡರು. ಅತ್ಯಧಿಕ ರನ್ ಕಲೆಹಾಕಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್(15921 ರನ್) ಹೆಸರಿನಲ್ಲಿದೆ. ರಾಹುಲ್ ದ್ರಾವಿಡ್(13265) ದ್ವಿತೀಯ ಸ್ಥಾನದಲ್ಲಿದ್ದಾರೆ.
ಕುತ್ತಿಗೆ ಉಳುಕಿನಿಂದ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದ ಗಿಲ್ -
ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ನಡುವಣ ಮೊಲ ಟೆಸ್ಟ್‌ನ(India vs South Africa 1st Test) 2ನೇ ದಿನವಾದ ಶನಿವಾರ ಭಾರತ ಆರಂಭಿಕ ಹಿನ್ನಡೆ ಅನುಭವಿಸಿತು. ನಾಯಕ ಶುಭಮನ್ ಗಿಲ್(Shubman Gill) ಕುತ್ತಿಗೆ ನೋವು ಕಾಣಿಸಿಕೊಂಡು ನಿವೃತ್ತರಾದರು. 35ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಔಟ್ ಆದ ನಂತರ ಗಿಲ್ ಬ್ಯಾಟಿಂಗ್‌ಗೆ ಇಳಿದು ಕ್ರೀಸಿನಲ್ಲಿ ಶಾಂತಚಿತ್ತರಾಗಿ ಕಾಣಿಸಿಕೊಂಡರು.
ಆದರೆ ಸೈಮನ್ ಹಾರ್ಮರ್ ಅವರ ಮೊದಲ ಎರಡು ಎಸೆತಗಳನ್ನು ಸುರಕ್ಷಿತವಾಗಿ ನಿಭಾಯಿಸಿದ ಅವರು, ಸ್ಕ್ವೇರ್ ಲೆಗ್ ಮೇಲೆ ಸಮಯೋಚಿತ ಸ್ವೀಪ್ ಮಾಡಿದ ವೇಳೆ ಅವರು ಕತ್ತು ಉಳುಕಿತು. ನೋವಿನಿಂದ ನರಳಿದ ಅವರು ಕೊನೆಗೆ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದರು. ಮತ್ತು ಅವರ ಬದಲಿಗೆ ರಿಷಭ್ ಪಂತ್ ಆಟ ಆರಂಭಿಸಿದರು.
ಸದ್ಯ ಭಾರತ ಭೋಜನ ವಿರಾಮದ ವೇಳೆಗೆ 4 ವಿಕೆಟ್‌ಗೆ 138ರನ್ ಗಳಿಸಿದ್ದು, ಇನ್ನೂ 21 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಬ್ಯಾಟರ್ ರಾಹುಲ್ 39 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ 29 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇಂಗ್ಲೆಂಡ್ ಸರಣಿ ಬಳಿಕ ಆಡಲಿಳಿದ ರಿಷಭ್ ಪಂತ್ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 27 ರನ್ ಚಚ್ಚಿದರು.
ಒಂದೊಮ್ಮೆ ಗಿಲ್ ಗಾಯ ಗಂಭೀರ ಸ್ವರೂಪದಿಂದ ಕೂಡಿದ್ದರೆ ಅವರು ಸರಣಿಯಂದಲೇ ಹೊರಬೀಳುವ ಸಾಧ್ಯತೆ ಇದೆ. ಆಗ ಉಪನಾಯಕ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ. ಗಿಲ್ ಬದಲು ಸಾಯಿ ಸುದರ್ಶನ್ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು. ಮೈದಾನ ತೊರೆಯುವ ವೇಳೆ ಗಿಲ್ 4 ರನ್ ಗಳಿಸಿದ್ದರು.
ಪಂದ್ಯದಲ್ಲಿ 2 ಸಿಕ್ಸರ್ ಬಾರಿಸಿದ ರಿಷಭ್ ಪಂತ್ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವೀರೇಂದ್ರ ಸೆಹ್ವಾಗ್(91) ಹೆಸರಿನಲ್ಲಿತ್ತು. ಸದ್ಯ ಪಂತ್ 92* ಸಿಕ್ಸರ್‌ನೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ IND vs SA: 5 ವಿಕೆಟ್ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್‌ಪ್ರೀತ್ ಬುಮ್ರಾ!
15 ರನ್ ಪೂರ್ತಿಗೊಳಿಸುತ್ತಿದ್ದಂತೆ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಭಾರತ ತಂಡದ ಪರ ಟೆಸ್ಟ್‌ನಲ್ಲಿ 4 ಸಾವಿರ ಪ್ಲಸ್ ಮೊತ್ತ ದಾಖಲಿಸಿದ 18ನೇ ಬ್ಯಾಟರ್ ಎನಿಸಿಕೊಂಡರು. ಅತ್ಯಧಿಕ ರನ್ ಕಲೆಹಾಕಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್(15921 ರನ್) ಹೆಸರಿನಲ್ಲಿದೆ. ರಾಹುಲ್ ದ್ರಾವಿಡ್(13265) ದ್ವಿತೀಯ ಸ್ಥಾನದಲ್ಲಿದ್ದಾರೆ.
ಶುಕ್ರವಾರ ಆರಂಭವಾದ ಈ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ (27ಕ್ಕೆ5) ಬಿರುಗಾಳಿಗೆ ದಕ್ಷಿಣ ಆಫ್ರಿಕಾ ಪಡೆ ತತ್ತರಿಸಿತು. ಇದರಿಂದಾಗಿ ಪ್ರವಾಸಿ ಪಡೆಯು 55 ಓವರ್‌ಗಳಲ್ಲಿ 159 ರನ್ ಗಳಿಸಿತು. 51ನೇ ಟೆಸ್ಟ್ ಪಂದ್ಯವಾಡಿದ ಬುಮ್ರಾ 16ನೇ 5ವಿಕೆಟ್ ಗೊಂಚಲು ಸಾಧನೆ ಮಾಡಿದರು. ಅವರಿಗೆ ಮೊಹಮ್ಮದ್ ಸಿರಾಜ್ (47ಕ್ಕೆ2) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (36ಕ್ಕೆ2) ಉತ್ತಮ ಸಾಥ್ ನೀಡಿದರು.