RCB vs GT Qualifier 1: ಕ್ವಾಲಿಫೈಯರ್-1 ಪಂದ್ಯದ ಮಳೆ ನಿಯಮ ಹೇಗಿದೆ? ಪಂದ್ಯ ರದ್ದಾದರೆ ಯಾರು ಫೈನಲ್‌ಗೆ?
IPL 2026: ಧರ್ಮಶಾಲಾದಲ್ಲಿ ನಡೆದ ಈ ಬಾರಿಯ ಆವೃತ್ತಿಯಲ್ಲಿ ಎಡರು ಪಂದ್ಯಗಳಿಗೆ ಮಳೆ ಅಡಚಣೆ ಉಂಟು ಮಾಡಿತ್ತು. ಆದರೆ ಪಂದ್ಯ ರದ್ದುಗೊಂಡಿರಲಿಲ್ಲ. ಆದರೆ ಇದೀಗ ಮುಂಗಾರು ಪೂರ್ವ ಮಳೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿಯೂ ಕಾಣಿಸಿಕೊಂಡಿದೆ. ಹಿಮಾಲದ ತಪ್ಪಲಿನಲ್ಲಿರುವ ಈ ಮೈದಾನದಲ್ಲಿ ಅಕಾಲಿಕ ಮಳೆಯಾದರೂ ಅಚ್ಚರಿಯಿಲ್ಲ.
rain ipl -
ಧರ್ಮಶಾಲಾ, ಮೇ 23: ಹಾಲಿ ಆವೃತ್ತಿ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ ಮೊದಲ ಕ್ವಾಲಿಫೈಯರ್ 1(Qualifier 1 for IPL 2026) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯ ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯದ ಮಳೆ ನಿಮಯ ಹೀಗಿದೆ?, ಮೀಸಲು ದಿನ ಇದೆಯೇ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.
ಧರ್ಮಶಾಲಾದಲ್ಲಿ ನಡೆದ ಈ ಬಾರಿಯ ಆವೃತ್ತಿಯಲ್ಲಿ ಎಡರು ಪಂದ್ಯಗಳಿಗೆ ಮಳೆ ಅಡಚಣೆ ಉಂಟು ಮಾಡಿತ್ತು. ಆದರೆ ಪಂದ್ಯ ರದ್ದುಗೊಂಡಿರಲಿಲ್ಲ. ಆದರೆ ಇದೀಗ ಮುಂಗಾರು ಪೂರ್ವ ಮಳೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿಯೂ ಕಾಣಿಸಿಕೊಂಡಿದೆ. ಹಿಮಾಲದ ತಪ್ಪಲಿನಲ್ಲಿರುವ ಈ ಮೈದಾನದಲ್ಲಿ ಅಕಾಲಿಕ ಮಳೆಯಾದರೂ ಅಚ್ಚರಿಯಿಲ್ಲ.
ಪಂದ್ಯ ರದ್ದಾರೆ ಆರ್‌ಸಿಬಿ ಫೈನಲ್‌ಗೆ
ಲೀಗ್, ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಕೇವಲ ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವಿದೆ. ಹೀಗಾಗಿ ಕ್ವಾಲಿಫೈಯರ್-1ರ ಪಂದ್ಯಕ್ಕೆ ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇದರ ಲಾಭ ಆರ್‌ಸಿಬಿ ತಂಡಕ್ಕೆ ಸಿಗಲಿದೆ. ಗುಜರಾತ್ ತಂಡ ಲೀಗ್ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು.
ಪ್ಲೇ-ಆಫ್ ಪಂದ್ಯಗಳಿಗೆ ಮಳೆ ಬಂದರೆ ಈ ಕೆಳಗಿನ ನಿಯಮಗಳನ್ನು ಅನ್ವಯಿಸಲಾಗುತ್ತದೆ
ಹೆಚ್ಚುವರಿ ಸಮಯ: ಮಳೆಯಿಂದಾಗಿ ಪಂದ್ಯ ತಡವಾದರೆ, ಪೂರ್ಣಗೊಳಿಸಲು 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ.
ಕನಿಷ್ಠ ಓವರ್‌ಗಳು: ಕನಿಷ್ಠ 5 ಓವರ್‌ಗಳ ಪಂದ್ಯವನ್ನಾದರೂ ನಡೆಸಲು ಪ್ರಯತ್ನಿಸಲಾಗುತ್ತದೆ.
ವಿಜೇತರ ಆಯ್ಕೆ: ನಿಗದಿತ ಓವರ್‌ಗಳನ್ನು ಆಡಲು ಸಾಧ್ಯವಾಗದಿದ್ದರೆ, ಲೀಗ್ ಹಂತದಲ್ಲಿ ಎದುರಾಳಿ ತಂಡಕ್ಕಿಂತ ಉತ್ತಮ ಸ್ಥಾನದಲ್ಲಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.