ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಿಷಭ್‌ ಪಂತ್‌ ಶತಕದ ಆರ್ಭಟಕ್ಕೆ ಹಲವು ದಾಖಲೆ ಪತನ

Rishabh Pant: ಒಟ್ಟಾರೆಯಾಗಿ, ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋವ್ ನಂತರ, ಈ ಸಾಧನೆ ಮಾಡಿದ ಮೂರನೇ ವಿಕೆಟ್‌ಕೀಪರ್ ಪಂತ್ ಆಗಿದ್ದಾರೆ. ಪಂತ್ ಅವರ ಒಂಬತ್ತು ಟೆಸ್ಟ್ ಶತಕಗಳ ಪೈಕಿ ಏಳು ಶತಕಗಳು 'ಸೆನಾ' (ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ) ದೇಶಗಳಲ್ಲಿ ಬಂದಿವೆ.

ರಿಷಭ್‌ ಪಂತ್‌ ಶತಕದ ಆರ್ಭಟಕ್ಕೆ ಹಲವು ದಾಖಲೆ ಪತನ

Rishabh Pant -

Abhilash BC
Abhilash BC Nov 22, 2026 12:58 PM

ವೆಲ್ಲಿಂಗ್ಟನ್‌, ನ.22: ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಶತಕ ಸಿಡಿಸುವ ಮೂಲಕ ಭಾರತದ ರಿಷಭ್ ಪಂತ್ ಇತಿಹಾಸ ನಿರ್ಮಿಸಿದರು. ಗಾಯದ ಕಾರಣದಿಂದಾಗಿ 'ಇಂಡಿಯಾ ಎ' ತಂಡದ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಪಂತ್, ಈ ಪಂದ್ಯದಲ್ಲಿ 135 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಈ ಪ್ರದರ್ಶನವು ಭಾರತದ ಮುನ್ನಡೆಯನ್ನು 250 ರನ್‌ಗಳಿಗೂ ಹೆಚ್ಚು ಹೆಚ್ಚಿಸಲು ನೆರವಾಯಿತು.

ಪಂತ್‌ ತಮ್ಮ ಒಂಬತ್ತನೇ ಟೆಸ್ಟ್ ಶತಕವನ್ನು ಪೂರೈಸುವ ಮೂಲಕ, ಎಲ್ಲಾ ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ ಶತಕ ಬಾರಿಸಿದ ಮೊದಲ ಏಷ್ಯನ್ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾದರು.

ಒಟ್ಟಾರೆಯಾಗಿ, ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋವ್ ನಂತರ, ಈ ಸಾಧನೆ ಮಾಡಿದ ಮೂರನೇ ವಿಕೆಟ್‌ಕೀಪರ್ ಪಂತ್ ಆಗಿದ್ದಾರೆ. ಪಂತ್ ಅವರ ಒಂಬತ್ತು ಟೆಸ್ಟ್ ಶತಕಗಳ ಪೈಕಿ ಏಳು ಶತಕಗಳು 'ಸೆನಾ' (ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ) ದೇಶಗಳಲ್ಲಿ ಬಂದಿವೆ.



ವಿಕೆಟ್‌ಕೀಪರ್‌ಗಳ ಪೈಕಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ರಿಷಭ್‌ ಪಂತ್‌ ಈಗ ಮೂರನೇ ಸ್ಥಾನದಲ್ಲಿದ್ದು, ಆ್ಯಡಂ ಗಿಲ್‌ಕ್ರಿಸ್ಟ್ (17) ಮತ್ತು ಆಂಡಿ ಫ್ಲವರ್ (12) ಮುಂದಿದ್ದಾರೆ. ಒಟ್ಟಾರೆಯಾಗಿ, 29 ವರ್ಷ ವಯಸ್ಸಿನ ಈ ಆಟಗಾರ ಎಲ್ಲಾ ʼಸೆನಾʼ ದೇಶಗಳಲ್ಲಿ ಶತಕ ಬಾರಿಸಿದ ಒಂಬತ್ತನೇ ಏಷ್ಯನ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಇವರೊಂದಿಗೆ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಸಯೀದ್ ಅನ್ವರ್, ರಾಹುಲ್ ದ್ರಾವಿಡ್, ಯೂನಿಸ್ ಖಾನ್, ಕುಮಾರ ಸಂಗಕ್ಕಾರ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಕೂಡ ಇದ್ದಾರೆ.

ಟೀಮ್‌ ಇಂಡಿಯಾ ಬ್ಯಾಟಿಂಗ್‌ ಪರಾಕ್ರಮ; ನ್ಯೂಜಿಲೆಂಡ್‌ನಲ್ಲಿ ಐತಿಹಾಸಿಕ ಮೊತ್ತದ ಸಾಧನೆ

ಇಂಗ್ಲೆಂಡ್‌ನಲ್ಲಿ ಪಂತ್ ಅವರ ಮೊದಲ ಶತಕವು 2018ರ ಭಾರತದ ಪ್ರವಾಸದ ವೇಳೆ 'ದಿ ಓವಲ್' ಮೈದಾನದಲ್ಲಿ ದಾಖಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ಅವರ ಏಕೈಕ ಶತಕವು 2022ರ ಜನವರಿಯಲ್ಲಿ ಬಂದಿತು. ಇನ್ನು, ಆಸ್ಟ್ರೇಲಿಯಾದಲ್ಲಿ ಅವರ ಮೊದಲ ಶತಕವು 2019ರಲ್ಲಿ ಸಿಡ್ನಿಯಲ್ಲಿ ದಾಖಲಾದಾಗ, ಅವರು 159 ರನ್‌ಗಳನ್ನು ಸಿಡಿಸಿದ್ದರು.

ನಾಲ್ಕನೇ ದಿನದಂದು ಊಟದ ವಿರಾಮದ ಹೊಸ್ತಿಲಲ್ಲಿ, ರಚಿನ್ ರವೀಂದ್ರ ಅವರ ಬೌಲಿಂಗ್‌ನಲ್ಲಿ ಪಂತ್ 128 ರನ್‌ಗಳಿಗೆ ಔಟಾದರು. ಮತ್ತೊಂದು ಸಿಕ್ಸರ್ ಬಾರಿಸಲು ಪ್ರಯತ್ನಿಸಿದ ಪಂತ್, ಬೌಂಡರಿ ಗೆರೆಯ ಬಳಿ ನಾಥನ್ ಸ್ಮಿತ್‌ಗೆ ಕ್ಯಾಚ್ ನೀಡಿದರು.

ಸಿಕ್ಸರ್‌ ದಾಖಲೆ

ಪಂತ್‌ ಈ ಪಂದ್ಯದಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಬ್ರೆಂಡನ್ ಮೆಕಲಮ್ ಅವರನ್ನು ಹಿಂದಿಕ್ಕಿದರು. ಇದೀಗ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 108 ಸಿಕ್ಸರ್‌ಗಳನ್ನು ಹೊಂದಿದ್ದರೆ, ಮೆಕಲಮ್ 107 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್ 138 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.